ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆ ತಿಥಿಯು ಬೆಳಿಗ್ಗೆ 11.05 ರವರೆಗೆ ಇರಲಿದ್ದು, ತದನಂತರ ಚೌತಿ ಆರಂಭವಾಗಲಿದೆ. ಕೃತ್ತಿಕಾ ನಕ್ಷತ್ರ ಬೆಳಿಗ್ಗೆ 8.00 ರವರೆಗೆ ಇರಲಿದ್ದು, ಬಳಿಕ ರೋಹಿಣಿ ನಕ್ಷತ್ರ ಪ್ರವೇಶವಾಗಲಿದೆ. ಇಂದು ಅಕ್ಷಯ ತೃತೀಯದ ಶುಭ ದಿನವಾಗಿದೆ. ಬೆಳಿಗ್ಗೆ 7.30 ರಿಂದ 9.00 ರವರೆಗೆ ರಾಹುಕಾಲ ಹಾಗೂ ಬೆಳಿಗ್ಗೆ 10.30 ರಿಂದ 12.00 ರವರೆಗೆ ಯಮಗಂಡ ಕಾಲ ಇರುತ್ತದೆ.
ಅಕ್ಷಯ ತೃತೀಯ ದಿನಭವಿಷ್ಯ
ಮೇಷ / ಹಣಕಾಸಿನ ಖರ್ಚು ಮತ್ತು ದೈಹಿಕ ಶ್ರಮ ಹೆಚ್ಚಾಗಲಿದೆ. ಕೆಲವು ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಒತ್ತಡ ಕಂಡುಬರಲಿದ್ದು, ದೇವಾಲಯಕ್ಕೆ ಭೇಟಿಕೊಡುವಿರಿ
ವೃಷಭ / ಹೊಸ ವ್ಯಕ್ತಿಗಳ ಪರಿಚಯ, ಸಮಾಜದಲ್ಲಿ ಗೌರವ ಪ್ರಾಪ್ತವಾಗಲಿದೆ. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ವ್ಯವಹಾರಗಳಲ್ಲಿ ಯಶಸ್ಸು ದೊರೆಯಲಿದ್ದು, ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಉದ್ಯೋಗ, ವ್ಯಾಪಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ.
ಮಿಥುನ / ತಾಳ್ಮೆಯಿಂದ ಮುನ್ನಡೆಯುವುದು ಸೂಕ್ತ. ಕೆಲಸ ಮುಂದೂಡಲ್ಪಡುವ ಸಾಧ್ಯತೆ ಇದ್ದು, ಯೋಚನೆಗಳು ಕೈಗೂಡುವುದಿಲ್ಲ. ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದ ತಲೆದೋರಬಹುದು. ಅನಾರೋಗ್ಯ ಉದ್ಯೋಗ ಮತ್ತು ವ್ಯಾಪಾರ ಸಾಧಾರಣವಾಗಿರಲಿವೆ.
ಕರ್ಕಾಟಕ / ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು, ನೂತನ ಕಾರ್ಯಗಳಿಗೆ ಚಾಲನೆ ನೀಡುವಿರಿ. ಶುಭ ಕಾರ್ಯ. ವ್ಯಾಪಾರದಲ್ಲಿ ಚೇತರಿಕೆ
ಸಿಂಹ / ಹೊಸ ಕೆಲಸ, ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಯೋಗ, ಭೋಜನ ಕೂಟಗಳಲ್ಲಿ ಭಾಗಿಯಾಗುವಿರಿ. ಉದ್ಯೋಗ ಸಂದರ್ಶನಗಳಿಗೆ ಕರೆ ಬರಬಹುದು. ಉದ್ಯೋಗ, ವ್ಯಾಪಾರದಲ್ಲಿ ವೃದ್ಧಿ ಕಂಡುಬರಲಿದೆ.
ಕನ್ಯಾ / ಸಂಬಂಧಿಕರೊಂದಿಗೆ ಮನಸ್ತಾಪ ಉಂಟಾಗಬಹುದು. ಅನಾರೋಗ್ಯ ,ಹೊರಗಡೆ ಒತ್ತಡ ಹೆಚ್ಚಾಗಲಿವೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ
ತುಲಾ / ಕೆಲಸಗಳಲ್ಲಿ ಆತುರ ತೋರಲಿದ್ದಾರೆ. ಜವಾಬ್ದಾರಿ ಹೆಚ್ಚಾಗಲಿದ್ದು, ಬಂಧುಗಳೊಂದಿಗೆ ವಿವಾದ . ಅನಾರೋಗ್ಯ. ಉದ್ಯೋಗ ಹಾಗೂ ವ್ಯಾಪಾರ ನಿಧಾನಗತಿಯಲ್ಲಿ ಸಾಗಲಿದೆ
ವೃಶ್ಚಿಕ / ಉದ್ಯೋಗದ ಪ್ರಯತ್ನ ಯಶಸ್ವಿಯಾಗಲಿವೆ.ವಾಹನ ಖರೀದಿ ಯೋಗವಿದೆ, ಮಾತುಕತೆಗಳು ಸಕಾರಾತ್ಮಕವಾಗಿ ಅಂತ್ಯಗೊಳ್ಳಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿಯತ್ತ ಹೆಜ್ಜೆ ಹಾಕುವಿರಿ.
ಅಕ್ಷಯ ತೃತೀಯ ದಿನಭವಿಷ್ಯ ದ ಮತ್ತಷ್ಟು ವಿವರ
ಧನುಸ್ಸು / ಕೌಟುಂಬಿಕ ನೆಮ್ಮದಿ , ಪ್ರಮುಖ ಮಾಹಿತಿಯೊಂದು ಲಭ್ಯವಾಗಲಿದ್ದು, ಸಂಬಂಧಿಕರಿಂದ ಆರ್ಥಿಕ ಲಾಭ ದೊರೆಯಲಿದೆ. ಉದ್ಯೋಗದ ನಿಟ್ಟಿನಲ್ಲಿ ಮಾಡುವ ಪ್ರಯತ್ನ ಫಲ ನೀಡಲಿವೆ.ಉದ್ಯೋಗ ಮತ್ತು ವ್ಯಾಪಾರದಲ್ಲಿ ಮುನ್ನಡೆ
ಮಕರ / ಕೆಲಸಗಳಲ್ಲಿ ಆತುರ. ಒತ್ತಡ ಎದುರಾಗಲಿವೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ವಾಗ್ವಾದ ನಡೆಯಬಹುದು. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿವೆ. ಉದ್ಯೋಗ ಹಾಗೂ ವ್ಯಾಪಾರ ಮಂದಗತಿಯಲ್ಲಿ ಸಾಗಲಿದೆ
ಕುಂಭ / ವ್ಯವಹಾರಗಳಲ್ಲಿ ಅಡೆತಡೆ ಉಂಟಾಗಲಿವೆ. ಹಣಕಾಸಿನ ಖರ್ಚು ಹೆಚ್ಚಾಗಲಿದ್ದು, ಆರ್ಥಿಕ ವಹಿವಾಟು ಸಾಧಾರಣವಾಗಿರಲಿವೆ. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನ
ಮೀನ / ರಾಶಿಯವರಿಗೆ ಹೊಸ ವ್ಯಕ್ತಿಗಳ ಒಡನಾಟ ಬೆಳೆಯಲಿದೆ. ಬಾಲ್ಯದ ಸ್ನೇಹಿತರ ಭೇಟಿಯಾಗಲಿದ್ದು, ವಸ್ತು ಲಾಭವಾಗಲಿದೆ. ಶುಭ ಕಾರ್ಯಗಳಿಗೆ ಆಮಂತ್ರಣ ಬರಲಿವೆ. ವ್ಯವಹಾರಗಳಲ್ಲಿ ಯಶಸ್ಸು ಸಾಧಿಸಲಿದ್ದು, ಉದ್ಯೋಗದಲ್ಲಿ ಸಂತಸದ ದಿನ

ಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
