ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ : ನಿಮ್ಮ ದಿನಭವಿಷ್ಯ ಪರಿಶೀಲಿಸಿ

ಪರಾಭವ ನಾಮ ಸಂವತ್ಸರದ ಉತ್ತರಾಯಣದ ವಸಂತ ಋತು, ವೈಶಾಖ ಮಾಸ ಶುಕ್ಲ ಪಕ್ಷದ ಪಂಚಮಿ ತಿಥಿ ಬೆಳಿಗ್ಗೆ 6.11 ರವರೆಗೆ ಇರಲಿದ್ದು, ತದನಂತರ ಷಷ್ಠಿ ತಿಥಿ ರಾತ್ರಿ 3.54 ರವರೆಗೆ ಮುಂದುವರಿಯಲಿದೆ. ಆರಿದ್ರ ನಕ್ಷತ್ರ ರಾತ್ರಿ 3.07 ರವರೆಗೆ ವ್ಯಾಪಿಸಿದ್ದು, ಆ ಬಳಿಕ ಪುನರ್ವಸು ನಕ್ಷತ್ರ ಆರಂಭವಾಗಲಿದೆ. ಮಧ್ಯಾಹ್ನ 12.00 ರಿಂದ 1.30 ರವರೆಗೆ ರಾಹುಕಾಲ ಹಾಗೂ ಬೆಳಿಗ್ಗೆ 7.30 ರಿಂದ 9.00 ರವರೆಗೆ ಯಮಗಂಡ ಕಾಲ ಇರುತ್ತದೆ.

ಮೊದಲ ನಾಲ್ಕು ರಾಶಿಗಳ ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಮೇಷ / ಮಂಗಳ ಕಾರ್ಯ. ಹಣಕಾಸಿನ ಸ್ಥಿತಿಗತಿಯು ಭರವಸೆದಾಯಕ. ನೆರವು ಪ್ರಾಪ್ತವಾಗಲಿದೆ. ಕೈಗೊಂಡ ಕೆಲಸಕಾರ್ಯಗಳಲ್ಲಿ ಯಶಸ್ಸು , ಉದ್ಯೋಗ, ವಾಣಿಜ್ಯ ವಹಿವಾಟು ಚುರುಕಿನಿಂದ ಸಾಗಲಿವೆ.

ವೃಷಭ / ಸಾಲಕ್ಕಾಗಿ ಪ್ರಯತ್ನ, ಸಣ್ಣಪುಟ್ಟ ತಡೆ ಎದುರಾಗಲಿವೆ. ಒತ್ತಡದ ಸನ್ನಿವೇಶಗಳು ಸೃಷ್ಟಿಯಾಗಲಿವೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಧನಲಾಭ .

ಮಿಥುನ / ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಲಸಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ವ್ಯವಹಾರಗಳಲ್ಲಿ ಜಯ ಸಿಗಲಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯ ಬಗೆಹರಿಯಲಿವೆ. ಕೆಲಸಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿವೆ.

ಕರ್ಕಾಟಕ / ಕೌಟುಂಬಿಕ ಜವಾಬ್ದಾರಿ ಹೆಚ್ಚಾಗಲಿವೆ. ಕೆಲಸದಲ್ಲಿ ಆತುರ ಪ್ರವೃತ್ತಿ ಕಂಡುಬರಲಿದೆ. ಹಣಕಾಸಿನ ಖರ್ಚು ಹೆಚ್ಚಾಗಲಿದ್ದು, ದೈಹಿಕ ಶ್ರಮ ಅಧಿಕವಾಗಲಿದೆ. ಅನಾರೋಗ್ಯದ ಉದ್ಯೋಗ ವ್ಯವಹಾರದಲ್ಲಿ ಧನಲಾಭ

ಅನಾರೋಗ್ಯ, ಖರ್ಚು , ಹೊಸ ಸಮಾಚಾರ

ಸಿಂಹ / ಉದ್ಯೋಗದ ಹುಡುಕಾಟದ ಪ್ರಯತ್ನಕ್ಕೆ ಸಕಾರಾತ್ಮಕ ಫಲ ಸಿಗಲಿದೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಸಂಭವ, ಉದ್ಯೋಗ ಹಾಗೂ ವ್ಯಾಪಾರ ರಂಗದಲ್ಲಿ ಪೂರಕ ವಾತಾವರಣವಿರಲಿದೆ

ಕನ್ಯಾ / ಕೆಲಸ ಸಂಪೂರ್ಣಗೊಳ್ಳಲಿವೆ. ಸಮಾಜದಲ್ಲಿ ಘನತೆ ಹೆಚ್ಚಾಗಲಿದೆ. ಮನೆ ಮತ್ತು ವಾಹನ ಖರೀದಿಸುವ ಯೋಗವಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಉತ್ಸಾಹದಿಂದ ಮುಂದುವರಿಯಲಿದ್ದಾರೆ.

ತುಲಾ / ಮನೆ ಮತ್ತು ಹೊರಗೆ ಮಾನಸಿಕ ಒತ್ತಡ, ಆರ್ಥಿಕ ನಷ್ಟ, ವಾಗ್ವಾದ ಉಂಟಾಗಲಿವೆ. ಆರೋಗ್ಯದ ಬಗ್ಗೆ ಗಮನಹರಿಸುವುದು ಅಗತ್ಯ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈದಿನ ಆಸಕ್ತಿ ಕಡಿಮೆ

ವೃಶ್ಚಿಕ / ಸಣ್ಣಪುಟ್ಟ ಕಲಹ . ಹಣ ವೆಚ್ಚ, ಹೆಚ್ಚು ಶ್ರಮ . ಸಂಬಂಧಿಕರಿಂದ ಒತ್ತಡ ಸನ್ನಿವೇಶ ನಿರ್ಮಾಣವಾಗಲಿವೆ. ಉದ್ಯೋಗ ಮತ್ತು ವ್ಯಾಪಾರದ ಗತಿ ಕೊಂಚ ನಿಧಾನವಾಗಲಿದೆ.

ಈ ದಿನ ಆರ್ಥಿಕ ಸ್ಥಿತಿ ಉತ್ತಮ

ಧನುಸ್ಸು / ಕೆಲಸದ ಪ್ರಯತ್ನ ಯಶಸ್ವಿಯಾಗಲಿವೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡುಬರಲಿದೆ. ಆರೋಗ್ಯ ಜಾಗ್ರತೆ

ಮಕರ /ವ್ಯವಹಾರಸಕಾರಾತ್ಮಕವಾಗಿ ಸಾಗಲಿವೆ. ನೆಂಟರ ಭೇಟಿ. ಮನರಂಜನೆ ಹಾಗೂ ಔತಣಕೂಟಗಳಲ್ಲಿ ಭಾಗಿಯಾಗಲಿದ್ದಾರೆ. ಆಸ್ತಿ ಪ್ರಾಪ್ತಿಯ ಯೋಗವಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿಯತ್ತ ಹೆಜ್ಜೆ ಹಾಕಲಿದ್ದಾರೆ.

ಕುಂಭ / ಹಣಕಾಸಿನ ವಹಿವಾಟುಗಳಿಗೆ ಪೂರಕ ವಾತಾವರಣ ಇರುವುದಿಲ್ಲ. ಕೆಲಸಗಳಲ್ಲಿ ವಿಳಂಬ ಸ್ನೇಹಿತರು ಮತ್ತು ಬಂಧುಗಳೊಂದಿಗೆ ಮನಸ್ತಾಪ. ಉದ್ಯೋಗ, ವ್ಯವಹಾರದಲ್ಲಿ ಈ ದಿನ ನಿಧಾನ

ಮೀನ / ಜವಾಬ್ದಾರಿಗಳ ಹೊರೆ ಇರಲಿದೆ. ಆರ್ಥಿಕ ವಹಿವಾಟು ಸಾಧಾರಣವಾಗಿರಲಿವೆ. ಹಣದ ಖರ್ಚು ಉಂಟಾಗಲಿದೆ. ಮನೆಯವರೊಂದಿಗೆ ಸಣ್ಣಮಟ್ಟದ ಭಿನ್ನಾಭಿಪ್ರಾಯ ಮೂಡಲಿವೆ. ಉದ್ಯೋಗ, ವ್ಯಾಪಾರ ಕ್ಷೇತ್ರದಲ್ಲಿ ಕೆಲವು ಬದಲಾವಣೆ ಸಂಭವಿಸಲಿವೆ.

ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ : ನಿಮ್ಮ ದಿನಭವಿಷ್ಯ ಪರಿಶೀಲಿಸಿ Todays Panchanga and Horoscope Daily Astrology Predictions
ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ : ನಿಮ್ಮ ದಿನಭವಿಷ್ಯ ಪರಿಶೀಲಿಸಿ Todays Panchanga and Horoscope Daily Astrology Predictions

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw