ಶಿವಮೊಗ್ಗ: ನಗರದ ಪ್ರತಿಷ್ಠಿತ ಜೆ.ಎನ್.ಎನ್.ಸಿ.ಇ (JNNCE) ಕಾಲೇಜಿನ ಹಾಸ್ಟೆಲ್ ರೂಮ್ಗೆ ನುಗ್ಗಿದ ಖದೀಮರು ವಿದ್ಯಾರ್ಥಿಯೊಬ್ಬನ ಬೆಲೆಬಾಳುವ ಲ್ಯಾಪ್ಟಾಪ್ ಹಾಗೂ ಚಾರ್ಜರ್ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದೆ.
ಶಿವಮೊಗ್ಗ: ಏಪ್ರಿಲ್ 20 ರಂದು ಬಸವ ಜಯಂತಿ, ಭವ್ಯ ರಾಜಬೀದಿ ಉತ್ಸವ, ಸಾಂಸ್ಕೃತಿಕ ವೈಭವ
ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದ 4ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಯೊಬ್ಬರು ತುಂಗಾ ಹಾಸ್ಟೆಲ್ನ ರೂಮ್ ನಂಬರ್ 14ರಲ್ಲಿ ವಾಸವಾಗಿದ್ದರು. ಏಪ್ರಿಲ್ 14ರಂದು ಮಧ್ಯಾಹ್ನ 12:50ರ ಸುಮಾರಿಗೆ ಅವರು ಊಟಕ್ಕೆ ತೆರಳುವಾಗ ರೂಮಿನ ಚಿಲಕವನ್ನು ಮಾತ್ರ ಹಾಕಿದ್ದರು. ಆದರೆ, ರೂಮಿಗೆ ಬೀಗ ಹಾಕಿರಲಿಲ್ಲ. ಇದನ್ನೇ ಸರಿಯಾದ ಸಮಯವೆಂದು ಭಾವಿಸಿದ ಕಳ್ಳರು ಒಳಗೆ ನುಗ್ಗಿ ಸುಮಾರು 76,591 ರೂ. ಮೌಲ್ಯದ ಲ್ಯಾಪ್ಟಾಪ್ ಮತ್ತು ಅದರ ಚಾರ್ಜರ್ ಅನ್ನು ಹೊತ್ತೊಯ್ದಿದ್ದಾರೆ.
JNNCE Hostel Laptop Worth ₹76k Stolen


