Electricity Price ಶಿವಮೊಗ್ಗ: ವಿದ್ಯುತ್ ಸರಬರಾಜು ಕಂಪನಿಗಳು ಎದುರಿಸುತ್ತಿರುವ ಆದಾಯದ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು, ರಾಜ್ಯದ ಕೆಲವೆಡೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಿದೆ. ಬೆಸ್ಕಾಂ ವ್ಯಾಪ್ತಿಗೆ ಒಳಪಡುವ ಗ್ರಾಹಕರಿಂದ ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 56 ಪೈಸೆ ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡಲು ಆಯೋಗವು ಅನುಮತಿಯನ್ನು ನೀಡಿದೆ. ಅದೇ ರೀತಿಯಲ್ಲಿ ಚೆಸ್ಕಾಂ ವ್ಯಾಪ್ತಿಯ ಗ್ರಾಹಕರು ಪ್ರತಿ ಯೂನಿಟ್ ಗೆ 15 ಪೈಸೆಯಷ್ಟು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿ ಬಂದಿದೆ. ಆದಾಯದ ಖೋತಾ ಸರಿದೂಗಿಸುವ ಪ್ರಕ್ರಿಯೆಯ ಭಾಗವಾಗಿ ಈ ದರ ಹೆಚ್ಚಳದ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಶಿವಮೊಗ್ಗ : ವಿಮಾನಗಳ ಸಲುವಾಗಿ ಸಂಸದರಿಗೆ ಬಿಗ್ ಮನವಿ!
ಮತ್ತೊಂದೆಡೆ ರಾಜ್ಯದ ಇತರ ಮೂರು ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿರುವ ಗ್ರಾಹಕರಿಗೆ ಆಯೋಗವು ದರ ಕಡಿತದ ಸಮಾಧಾನಕರ ಸುದ್ದಿಯನ್ನು ನೀಡಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ಗೆ 9 ಪೈಸೆಯಷ್ಟು ಹಣವನ್ನು ಗ್ರಾಹಕರಿಗೆ ಹಿಂತಿರುಗಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಸ್ಪಷ್ಟ ಆದೇಶವನ್ನು ನೀಡಿದೆ. ಇದರ ಜೊತೆಗೆ ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೂ ಸಹ ಪ್ರತಿ ಯೂನಿಟ್ ಗೆ ತಲಾ 10 ಪೈಸೆಯಷ್ಟು ಮೊತ್ತವನ್ನು ಮರುಪಾವತಿಸುವಂತೆ ಸೂಚಿಸಲಾಗಿದೆ. 2024-25ನೇ ಸಾಲಿನಲ್ಲಿ ಈ ಮೂರೂ ಕಂಪನಿಗಳ ಗ್ರಾಹಕರು ಬಳಸಿದ ವಿದ್ಯುತ್ ಗೆ ಈ ದರ ಕಡಿತದ ಆದೇಶವು ಅನ್ವಯವಾಗಲಿದೆ. ಇದರಿಂದಾಗಿ ಶಿವಮೊಗ್ಗ ಸೇರಿದಂತೆ ಮೆಸ್ಕಾಂ ವ್ಯಾಪ್ತಿಗೆ ಒಳಪಡುವ ಎಲ್ಲಾ ಜಿಲ್ಲೆಗಳ್ಲಲಿಯೂ ಸಹ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಗಲಿದೆ.
ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಮುಂದಿನ ಮೂರು ವರ್ಷಗಳ ಅವಧಿಗೆ ಅನ್ವಯವಾಗುವಂತೆ ಬಹುವಾರ್ಷಿಕ ದರ ನಿಗದಿಯನ್ನು ಮಾಡಿ ಅಧಿಕೃತ ಆದೇಶವನ್ನು ಹೊರಡಿಸಿತ್ತು. ಆ ಆದೇಶದನ್ವಯ ಪ್ರಸ್ತುತ ವರ್ಷದ ಏಪ್ರಿಲ್ 1ನೇ ತಾರೀಖಿನಿಂದಲೇ ಈ ದರ ಹೆಚ್ಚಳವು ಜಾರಿಗೆ ಬಂದಿದೆ ಎಂದು ಆಯೋಗದ ಪ್ರಕಟಣೆಗಳು ತಿಳಿಸಿವೆ.
Electricity Price Cut in Smg While Banglore Face Hike


