ಶಿವಮೊಗ್ಗ ಟೌನ್-ಚಿಕ್ಕಮಗಳೂರು ದೈನಂದಿನ ಪ್ಯಾಸೆಂಜರ್ ರೈಲು ಸೇರಿದಂತೆ ವಿವಿಧ ಟ್ರೈನ್​ ಟೈಮಿಂಗ್ಸ್ ಬದಲು

ರೈಲ್ವೆ ಮಾಹಿತಿ / ಕೆಲವು ರೈಲುಗಳ ಸಂಚಾರದ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ನೈರುತ್ಯ ರೈಲ್ವೆ ವಿಭಾಗ ಪ್ರಕಟಣೆ ನೀಡಿದೆ. ಪ್ರಕಟಣೆಯ ಪ್ರಕಾರ, ಈ ನೂತನ ರೈಲು ವೇಳಾಪಟ್ಟಿಯು ಇದೇ ಏಪ್ರಿಲ್ 24ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸುವಂತೆ ಸೂಚಿಸಲಾಗಿದೆ.

ಚಿಕ್ಕಮಗಳೂರು ಯಶವಂತಪುರ ದೈನಂದಿನ ಎಕ್ಸಪ್ರೆಸ್ ರೈಲು ಈ ಹಿಂದೆ ಚಿಕ್ಕಮಗಳೂರು ನಿಲ್ದಾಣದಿಂದ ಬೆಳಿಗ್ಗೆ 8.15ಕ್ಕೆ ಹೊರಡುತ್ತಿತ್ತು. ಪರಿಷ್ಕೃತ ವೇಳಾಪಟ್ಟಿಯ ಅನ್ವಯ ಈ ರೈಲು ಬೆಳಿಗ್ಗೆ 8.00 ಗಂಟೆಗೆ ನಿರ್ಗಮಿಸಲಿದೆ. ಇದರ ಜೊತೆಗೆ ಮಧ್ಯಂತರ ನಿಲ್ದಾಣಗಳನ್ನು ತಲುಪುವ ಮತ್ತು ಅಲ್ಲಿಂದ ಹೊರಡುವ ಸಮಯವನ್ನು ಕೂಡ ಬದಲಾಯಿಸಲಾಗಿದ್ದು, ಎಲ್ಲ ನಿಲ್ದಾಣಗಳಿಗೆ 15 ನಿಮಿಷ ಮುಂಚಿತವಾಗಿ ತಲುಪಿ ನಿರ್ಗಮಿಸಲಿದೆ.

ಕಣಿವೆಹಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ 8.18ಕ್ಕೆ ತಲುಪಿ 8.19ಕ್ಕೆ ಹೊರಡಲಿದೆ, ಸಖರಾಯಪಟ್ಟಣ ನಿಲ್ದಾಣಕ್ಕೆ ಬೆಳಿಗ್ಗೆ 8.31ಕ್ಕೆ ತಲುಪಿ 8.32ಕ್ಕೆ ನಿರ್ಗಮಿಸಲಿದೆ. ಹಾಗೆಯೇ ಬಿಸಲೇಹಳ್ಳಿಗೆ 8.43ಕ್ಕೆ ಬಂದು 8.44ಕ್ಕೆ ಹೊರಡಲಿದೆ ಮತ್ತು ಕಡೂರು ರೈಲು ನಿಲ್ದಾಣಕ್ಕೆ ಬೆಳಿಗ್ಗೆ 9.05ಕ್ಕೆ ತಲುಪಿ 9.25ಕ್ಕೆ ತನ್ನ ಮುಂದಿನ ಪ್ರಯಾಣ ಬೆಳೆಸಲಿದೆ. ದೇವನೂರು ಮತ್ತು ಯಶವಂತಪುರ ನಿಲ್ದಾಣಗಳ ನಡುವಿನ ಸಂಚಾರದ ವೇಳಾಪಟ್ಟಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಲಾಗಿಲ್ಲ.

ಶಿವಮೊಗ್ಗ ಟೌನ್-ಚಿಕ್ಕಮಗಳೂರು ದೈನಂದಿನ ಪ್ಯಾಸೆಂಜರ್ ರೈಲು


ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvywಶಿವಮೊಗ್ಗ ಟೌನ್-ಚಿಕ್ಕಮಗಳೂರು ದೈನಂದಿನ ಪ್ಯಾಸೆಂಜರ್ ರೈಲು

ಇದೇ ರೀತಿ ಯಶವಂತಪುರ ಚಿಕ್ಕಮಗಳೂರು ದೈನಂದಿನ ಎಕ್ಸಪ್ರೆಸ್ ರೈಲು ಈ ಮೊದಲು ರಾತ್ರಿ 8.55ಕ್ಕೆ ಚಿಕ್ಕಮಗಳೂರು ನಿಲ್ದಾಣಕ್ಕೆ ಬಂದು ತಲುಪುತ್ತಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಈ ರೈಲು ರಾತ್ರಿ 9.05ಕ್ಕೆ ಚಿಕ್ಕಮಗಳೂರು ತಲುಪಲಿದೆ.

ಮತ್ತೊಂದೆಡೆ ಶಿವಮೊಗ್ಗ ಟೌನ್-ಚಿಕ್ಕಮಗಳೂರು ದೈನಂದಿನ ಪ್ಯಾಸೆಂಜರ್ ರೈಲು ನಿತ್ಯ ರಾತ್ರಿ 9.30ಕ್ಕೆ ಚಿಕ್ಕಮಗಳೂರು ನಿಲ್ದಾಣ ತಲುಪುತ್ತಿತ್ತು. ಬದಲಾಗಿರುವ ಸಮಯದ ಪ್ರಕಾರ ಇದು ರಾತ್ರಿ 9.40ಕ್ಕೆ ಚಿಕ್ಕಮಗಳೂರು ನಿಲ್ದಾಣವನ್ನು ತಲುಪಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

 ಶಿವಮೊಗ್ಗ ಟೌನ್-ಚಿಕ್ಕಮಗಳೂರು ದೈನಂದಿನ ಪ್ಯಾಸೆಂಜರ್ ರೈಲು ಸೇರಿದಂತೆ ವಿವಿಧ ಟ್ರೈನ್​ ಟೈಮಿಂಗ್ಸ್ ಬದಲು South Western Railway Revises Schedule  train
ಶಿವಮೊಗ್ಗ ಟೌನ್-ಚಿಕ್ಕಮಗಳೂರು ದೈನಂದಿನ ಪ್ಯಾಸೆಂಜರ್ ರೈಲು ಸೇರಿದಂತೆ ವಿವಿಧ ಟ್ರೈನ್​ ಟೈಮಿಂಗ್ಸ್ ಬದಲು South Western Railway Revises Schedule  train