ಚೈತ್ರ ಮಾಸದ ತ್ರಯೋದಶಿ ದಿನ ಭವಿಷ್ಯ ಹಾಗೂ ದ್ವಾದಶ ರಾಶಿಗಳ ಫಲಾಫಲ

ಪರಾಭವ ನಾಮ ಸಂವತ್ಸರ ಉತ್ತರಾಯಣ ವಸಂತ ಋತುವಿನ ಚೈತ್ರ ಮಾಸದ ಇಂದು ಮಾಸ ಶಿವರಾತ್ರಿ ಆಗಿದ್ದು, ಕೃಷ್ಣ ಪಕ್ಷದ ತ್ರಯೋದಶಿ ತಿಥಿಯು ರಾತ್ರಿ 8.23ರವರೆಗೆ ಇರಲಿದ್ದು, ತದನಂತರ ಚತುರ್ದಶಿ ಆರಂಭವಾಗಲಿದೆ. ಪೂರ್ವಾಭಾದ್ರ ನಕ್ಷತ್ರ ಮಧ್ಯಾಹ್ನದವರೆಗೆ ಇರಲಿದೆ. ಬಳಿಕ ಉತ್ತರಾಭಾದ್ರ ನಕ್ಷತ್ರ ಪ್ರವೇಶಿಸಲಿದೆ. ರಾಹುಕಾಲ ಮಧ್ಯಾಹ್ನ 12.00ರಿಂದ 1.30ರವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 7.30ರಿಂದ 9.00ರವರೆಗೆ ಇರುತ್ತದೆ.

ಚೈತ್ರ ಮಾಸದ ತ್ರಯೋದಶಿ ದಿನ ಭವಿಷ್ಯ

ಮೇಷ / ಕೆಲಸಕಾರ್ಯಗಳಲ್ಲಿ ಅಡೆತಡೆ ಎದುರಾಗುವ ಸಾಧ್ಯತೆಯಿದೆ. ಹಣಕಾಸಿನ ಅಗತ್ಯಗಳಿಗಾಗಿ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ದೂರ ಪ್ರಯಾಣ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ. ಉದ್ಯೋಗ ಹಾಗೂ ವ್ಯಾಪಾರ ವಲಯದಲ್ಲಿ ಕೊಂಚ ಪ್ರತಿಕೂಲ ವಾತಾವರಣ ಕಂಡುಬರಲಿದೆ.

ವೃಷಭ / ಸಂತಸದ ಸುದ್ದಿಯೊಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ವಾಹನ ಖರೀದಿಸುವ ಯೋಗ ನಿಮ್ಮದಾಗಿದೆ. ಕೈಗೆತ್ತಿಕೊಂಡ ಕೆಲಸ ಅಡೆತಡೆಯಿಲ್ಲದೆ ಶೀಘ್ರವಾಗಿ ಪೂರ್ಣಗೊಳ್ಳಲಿವೆ. ಉದ್ಯೋಗಸ್ಥರು ಮತ್ತು ವ್ಯಾಪಾರಿಗಳ ನಿರೀಕ್ಷೆ ವಾಸ್ತವ ರೂಪ ಪಡೆಯಲಿವೆ.

ಮಿಥುನ / ಕೈಹಾಕಿದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಲಭಿಸಲಿದೆ. ಸ್ಥಿರಾಸ್ತಿ ಖರೀದಿಸುವ ಅಥವಾ ವೃದ್ಧಿಸುವ ಅವಕಾಶ ಒದಗಿಬರಲಿದೆ. ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಲಿದ್ದಾರೆ. ನೌಕರರಿಗೆ ಕಚೇರಿಯಲ್ಲಿ ಪೂರಕ ವಾತಾವರಣ ಇರಲಿದೆ.

ಕರ್ಕಾಟಕ / ಕೆಲಸ ಮುಂದೂಡುವುದು ಅನಿವಾರ್ಯವಾಗಲಿದೆ. ಅನಾರೋಗ್ಯದ ಸಮಸ್ಯೆಗಳು ಬಾಧಿಸಬಹುದು ಹಾಗೂ ದೈಹಿಕ ಶ್ರಮ ಹೆಚ್ಚಾಗಲಿದೆ. ಸಂಬಂಧಿಕರೊಂದಿಗೆ ವಾಗ್ವಾದ. ಉದ್ಯೋಗ ಹಾಗೂ ವ್ಯವಹಾರದ ರಂಗದಲ್ಲಿ ತೊಡಕುಗಳು ಎದುರಾಗಲಿವೆ.

ಸಿಂಹ / ತಕ್ಕ ಪ್ರತಿಫಲ ದೊರಕುವುದು ಕಷ್ಟ. ಕೆಲವು ಪ್ರತಿಕೂಲ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಪ್ರಯಾಣ . ದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಕೊಂಚ ಗೊಂದಲಮಯ ವಾತಾವರಣ ಇರಲಿದೆ.

ಕನ್ಯಾ / ಅಂದುಕೊಂಡ ಕೆಲಸಗಳು ನಿಗದಿತ ಯೋಜನೆಯಂತೆಯೇ ಸರಾಗವಾಗಿ ನಡೆಯಲಿವೆ. ಶುಭ ಕಾರ್ಯಗಳಿಗಾಗಿ ಆಮಂತ್ರಣಗಳು ಬರಲಿವೆ. ವ್ಯಾಪಾರಿಗಳು ಹಾಗೂ ಉದ್ಯೋಗಿಗಳಿಗೆ ದಿನವು ಅತ್ಯಂತ ಉತ್ಸಾಹದಾಯಕವಾಗಿರಲಿದೆ.

ತುಲಾ / ಅಚ್ಚರಿಯ ಘಟನೆಗಳು ಜರುಗಲಿವೆ. ಮನೆಯ ಒಳಗೆ ಹಾಗೂ ಹೊರಗೆ ನಿಮ್ಮದೇ ಮೇಲುಗೈ ಆಗಿರಲಿದೆ. ಸ್ನೇಹಿತರ ಕಡೆಯಿಂದ ಸಂತಸದ ವಾರ್ತೆಗಳು ಬರಲಿವೆ. ವ್ಯವಹಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಕಾಡುತ್ತಿದ್ದ ವಿಘ್ನ ನಿವಾರಣೆಯಾಗಲಿವೆ.

ವೃಶ್ಚಿಕ / ಅಷ್ಟೊಂದು ಅನುಕೂಲಕರವಾಗಿಲ್ಲ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಆರಂಭಿಸಿದ ಕಾರ್ಯಗಳು ಸುಲಭವಾಗಿ ಮುನ್ನಡೆಯುವುದಿಲ್ಲ. ಉದ್ಯೋಗದ ಸ್ಥಳದಲ್ಲಿ ಹಾಗೂ ವ್ಯಾಪಾರದಲ್ಲಿ ಕಿರಿಕಿರಿ ಅನುಭವಿಸುವಿರಿ.

ಧನುಸ್ಸು / ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ . ಕುಟುಂಬದ ಜವಾಬ್ದಾರಿಗಳ ಹೊರೆ ಹೆಚ್ಚಾಗಲಿದೆ. ದಿಢೀರ್ ಪ್ರಯಾಣ. ಹೊಸದಾಗಿ ಸಾಲ ಪಡೆಯಲು ಯತ್ನಿಸುವಿರಿ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಮಾನಸಿಕ ಒತ್ತಡ ಅಧಿಕವಾಗಿರಲಿದೆ.

ಮಕರ / ಕೆಲಸದ ಹಾದಿಯಲ್ಲಿದ್ದ ವಿಘ್ನ ದೂರವಾಗಲಿವೆ. ಆಪ್ತವಲಯದಿಂದ ಪ್ರಮುಖ ಮಾಹಿತಿಯೊಂದು ಲಭ್ಯವಾಗಲಿದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರಿಗೆ ಅತ್ಯಂತ ಪೂರಕವಾದ ಹಾಗೂ ಸಕಾರಾತ್ಮಕವಾದ ದಿನ ಇದಾಗಿರಲಿದೆ.

ಕುಂಭ / ಮನಸ್ತಾಪದ ದಿನ, ಅನಿರೀಕ್ಷಿತ ಪ್ರಯಾಣ. ಕೌಟುಂಬಿಕ ವಲಯದಲ್ಲಿ ಕಿರಿಕಿರಿ ಉಂಟಾಗಲಿದೆ. ಹೊಸ ಉದ್ಯೋಗಕ್ಕಾಗಿ ನಡೆಸುತ್ತಿರುವ ಪ್ರಯತ್ನ ಫಲ ನೀಡುವುದು ವಿಳಂಬವಾಗಬಹುದು. ವ್ಯವಹಾರ ಹಾಗೂ ಉದ್ಯೋಗ ಸಮಸ್ಯೆಗಳು ತಲೆದೋರಲಿವೆ.

ಮೀನ / ಶುಭ ಕಾರ್ಯಗಳ ಕುರಿತು ಚರ್ಚೆಗಳು ನಡೆಯಲಿವೆ. ಅನಿರೀಕ್ಷಿತವಾಗಿ ಹಣಕಾಸಿನ ಲಾಭವಾಗಲಿದೆ. ಸಮಾಜದ ಗಣ್ಯ ವ್ಯಕ್ತಿಗಳ ಒಡನಾಟ ಬೆಳೆಯಲಿದೆ. ವ್ಯಾಪಾರ ಹಾಗೂ ಉದ್ಯೋಗವು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಸಾಗಲಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಚೈತ್ರ ಮಾಸದ ತ್ರಯೋದಶಿ ದಿನ ಭವಿಷ್ಯ ಹಾಗೂ ದ್ವಾದಶ ರಾಶಿಗಳ ಫಲಾಫಲPanchangam Details for Chaitra Masa Trayodashi
ಚೈತ್ರ ಮಾಸದ ತ್ರಯೋದಶಿ ದಿನ ಭವಿಷ್ಯ ಹಾಗೂ ದ್ವಾದಶ ರಾಶಿಗಳ ಫಲಾಫಲPanchangam Details for Chaitra Masa Trayodashi