ರೈಲ್ವೆ ಹಳಿ ಬಳಿ ಅಪರಿಚಿತ ಯುವಕನ ಶವ ಪತ್ತೆ, ಬಲಗೈ ಮೇಲಿದೆ ತ್ರಿಶೂಲ ಹಚ್ಚೆ..

ಕೊನೆಯ ನವೀಕರಣ: 14 ಏಪ್ರಿಲ್ 2026, 6:53 ಫೂರ್ವಾಹ್ನ

ಹಂಚಿಕೊಳ್ಳಿ
WhatsApp Facebook X Telegram
Shivamogga Train Robbery Confirmed
Shivamogga Train Robbery Confirmed

ನಗರದ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಮಾರ್ಗದ ಸಮೀಪ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ..  ರೈಲ್ವೆ  ಹಳಿಯ ಪಕ್ಕದಲ್ಲಿ ಅಂದಾಜು 30 ವರ್ಷ ವಯಸ್ಸಿನ ಪುರುಷನ ಶವ ಬಿದ್ದಿರುವುದು ಕಂಡುಬಂದಿದೆ. ಮೃತಪಟ್ಟಿರುವ ವ್ಯಕ್ತಿಯ ಹೆಸರು, ವಾಸಸ್ಥಳ ಅಥವಾ ಅವರ ಸಂಬಂಧಿಕರ ಬಗ್ಗೆ ಸದ್ಯಕ್ಕೆ ಯಾವುದೇ ನಿಖರ ಮಾಹಿತಿಗಳು ಲಭ್ಯವಾಗಿಲ್ಲ.

ರೈಲ್ವೆ ಹಳಿ ಬಳಿ ಅಪರಿಚಿತ ಯುವಕನ ಶವ ಪತ್ತೆ

ಮೃತದೇಹದ ಗುರುತು ಪತ್ತೆಹಚ್ಚುವ ನಿಟ್ಟಿನಲ್ಲಿ ಪೊಲೀಸರು ವ್ಯಕ್ತಿಯ ದೈಹಿಕ ಚಹರೆಗಳ ವಿವರಗಳನ್ನು ಒದಗಿಸಿದ್ದು ಈ ಸಂಬಂಧ ಪ್ರಕಟಣೆ‌ ನೀಡಿದ್ದಾರೆ..

ಮೃತ ವ್ಯಕ್ತಿಯು ಅಂದಾಜು 5.2 ಅಡಿ ಎತ್ತರವಿದ್ದು, ಸಾಧಾರಣವಾದ ಮೈಕಟ್ಟು ಹಾಗೂ ಕಪ್ಪು ಮೈಬಣ್ಣವನ್ನು ಹೊಂದಿದ್ದಾರೆ. ಕೋಲು ಮುಖವನ್ನು ಹೊಂದಿರುವ ಇವರ ಬಲಗೈಯ ಮೇಲೆ ತ್ರಿಶೂಲದ ಆಕಾರದ ಹಚ್ಚೆ ಗುರುತು ಇರುವುದು ಪ್ರಮುಖ ಕುರುಹಾಗಿದೆ.

ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ವಾರಸುದಾರರನ್ನು ಪತ್ತೆಹಚ್ಚಲು ಶೋಧ ಕಾರ್ಯ ಮುಂದುವರೆದಿದೆ.

ಈ ವ್ಯಕ್ತಿಯ ಬಗ್ಗೆ ಅಥವಾ ಅವರ ಕುಟುಂಬಸ್ಥರ ಬಗ್ಗೆ ಮಾಹಿತಿ ಇರುವ ಸಾರ್ವಜನಿಕರು  ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳಾದ 08182-222974 ಅಥವಾ ಮೊಬೈಲ್ ಸಂಖ್ಯೆ 9480802124 ಅನ್ನು ಸಂಪರ್ಕಿಸಲು ರೈಲ್ವೆ ಪೊಲೀಸರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ರೈಲ್ವೆ ಹಳಿ ಬಳಿ ಅಪರಿಚಿತ ಯುವಕನ ಶವ ಪತ್ತೆ, ಬಲಗೈ ಮೇಲಿದೆ ತ್ರಿಶೂಲ ಹಚ್ಚೆ..
ರೈಲ್ವೆ ಹಳಿ ಬಳಿ ಅಪರಿಚಿತ ಯುವಕನ ಶವ ಪತ್ತೆ, ಬಲಗೈ ಮೇಲಿದೆ ತ್ರಿಶೂಲ ಹಚ್ಚೆ..
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor