ಶಿವಮೊಗ್ಗ : ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ನುಗ್ಗಿದ ಲಾರಿ 

ಶಿವಮೊಗ್ಗ : ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಅಡಿಕೆ ತೋಟಕ್ಕೆ ನುಗ್ಗಿದ ಘಟನೆ ಏಪ್ರಿಲ್ 9ರಂದು ನಡೆದಿದೆ. ಲಾರಿ ನುಗ್ಗಿದ ರಭಸಕ್ಕೆ ತೋಟದಲ್ಲಿದ್ದ ಹಲವಾರು ಅಡಿಕೆ ಸಸಿಗಳು ಜಖಂಗೊಂಡಿದ್ದು, ದೂರುದಾರರು ತಕ್ಷಣವೇ 112 ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ವತಿಯಿಂದ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಯಾವಾಗ?

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಇಆರ್‌ವಿ (ERV) ಸಿಬ್ಬಂದಿಗಳು ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ.

ಬಳಿಕ ಸ್ಥಳಕ್ಕೆ ಕ್ರೇನ್ ತರಿಸಿದ ಪೊಲೀಸರು, ತೋಟದೊಳಗೆ ಸಿಲುಕಿಕೊಂಡಿದ್ದ ಲಾರಿಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಚಾಲಕ ಹಾಗೂ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಸ್ಥಳದಲ್ಲೇ ದೂರು ವಿಲೇವಾರಿ ಮಾಡುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಲಾಗಿದೆ.

Shivamogga Lorry Rams Areca Plantation

Shivamogga Lorry Rams Areca Plantation
Shivamogga Lorry Rams Areca Plantation
shivamogga car decor sun control house
car decor sun control house