ಶಿವಮೊಗ್ಗ: ಸಫಾರಿಯಲ್ಲಿ ಗರ್ಭಿಣಿ ನೀರಾನೆ ಹಂಸಿಣಿ ಆರೋಗ್ಯದ ಬಗ್ಗೆ ಅಮರಾಕ್ಷರ್​ ಏನಂದ್ರು 

ಹಂಚಿಕೊಳ್ಳಿ
WhatsApp Facebook X Telegram
ಡಾ ಸಮೀಕ್ಷಾ ರೆಡ್ಡಿ Hippo Health Critical at Tyavarekoppa Safari
Hippo Health Critical at Tyavarekoppa Safari

Hippo Healthಶಿವಮೊಗ್ಗ :ತ್ಯಾವರೇಕೊಪ್ಪ ಹುಲಿ ಮತ್ತು ಸಿಂಹ ಧಾಮದ ಸಫಾರಿಯಲ್ಲಿರುವ ಹಂಸಿಣಿ ಎಂಬ ಗರ್ಭಿಣಿ ನೀರಾನೆಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಿದೆ. ಈ ಹಿಂದೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿನ ಘಟನೆಯಿಂದ ಸುದ್ದಿಯಾಗಿದ್ದ ಅದೇ ಸಫಾರಿ ಆವರಣದಲ್ಲಿ ಈಗ ಈ ನೀರಾನೆಯ ಆರೋಗ್ಯದ ಏರುಪೇರು ಆತಂಕ ಮೂಡಿಸಿದೆ.

ಶಿವಮೊಗ್ಗ: ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ನೇರ ಸಂದರ್ಶನ, ಎಲ್ಲಿ ಯಾವಾಗ

ಘಟನೆಯ ಕುರಿತು ಜೀ ಕನ್ನಡ ನ್ಯೂಸ್​ಗೆ ಮಾಹಿತಿ ನೀಡಿರುವ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ (ED) ಅಮರಾಕ್ಷರ್ ಅವರು, ನೀರಾನೆಯ ಸ್ಥಿತಿ ಸ್ವಲ್ಪ ಕಠಿಣವಾಗಿದ್ದು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಗರ್ಭದಲ್ಲಿರುವ ಮರಿಯ ಆರೋಗ್ಯವನ್ನು ಪರೀಕ್ಷಿಸಲು ಡಯಾಗ್ನಾಸಿಸ್ ಪ್ರಕ್ರಿಯೆ ನಡೆಸಲಾಗಿದ್ದು, ವರದಿ ಬಂದ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು. 

ನಂತರ ವೈದ್ಯಾಧಿಕಾರಿ ಡಾ. ವಿನಯ್ ಅವರು, ಸಫಾರಿಯಲ್ಲಿ ಪ್ರಸ್ತುತ ಎರಡು ನೀರಾನೆಗಳಿದ್ದು, ಅದರಲ್ಲಿ ಗರ್ಭಿಣಿಯಾಗಿರುವ ಹೆಣ್ಣು ನೀರಾನೆ ಗರ್ಭಿಣಿಯಾಗಿರುವುದರಿಂದ ಸ್ವಲ್ಪ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವಿವರಿಸಿದ್ದಾರೆ. ತಜ್ಞ ವೈದ್ಯರ ತಂಡವು ಈಗಾಗಲೇ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ಹಂಸಿಣಿಯ ಚೇತರಿಕೆಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಎಂದಿದ್ದಾರೆ.

ಇದೇ ವೇಳೆ, ಒಂದು ವೇಳೆ ಈ ನೀರಾನೆಗೆ ಹೆಣ್ಣು ಮರಿ ಜನಿಸಿದರೆ, ಅದಕ್ಕೆ ಇತ್ತೀಚೆಗಷ್ಟೇ ಮೃತಪಟ್ಟ ಡಾ. ಸಮೀಕ್ಷಾ ರೆಡ್ಡಿ ಅವರ ಹೆಸರಿಡಬೇಕು ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ ಹಾಗೂ ಮೃಗಾಲಯದ ಆಪ್ತ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

Hippo Health Critical at Tyavarekoppa Safari

shivamogga car decor sun control house
shivamogga car decor sun control house
Hippo Health Critical at Tyavarekoppa Safari
Hippo Health Critical at Tyavarekoppa Safari
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor