ಈ ದಿನದ ಭವಿಷ್ಯ ಮತ್ತು ಪಂಚಾಂಗ : ಬಹಳಷ್ಟು ಕುತೂಹಲವಿದೆ

ಪರಾಭವ ನಾಮ ಸಂವತ್ಸರ ಉತ್ತರಾಯಣ ವಸಂತ ಋತುವಿನ ಚೈತ್ರ ಮಾಸದ ಅಷ್ಟಮಿಯು ರಾತ್ರಿ 7.33 ರವರೆಗೆ ಇರಲಿದ್ದು, ತದನಂತರ ನವಮಿ ಆರಂಭವಾಗಲಿದೆ. ಪೂರ್ವಾಷಾಢ ನಕ್ಷತ್ರವು ಬೆಳಿಗ್ಗೆ 8.25 ರವರೆಗೆ ಇದ್ದು, ಬಳಿಕ ಉತ್ತರಾಷಾಢ ನಕ್ಷತ್ರ ಪ್ರವೇಶಿಸಲಿದೆ. ಅಮೃತ ಘಳಿಗೆ ರಾತ್ರಿ 3.24 ರಿಂದ 5.10 ರವರೆಗೆ ಇರುತ್ತದೆ. ಸೂರ್ಯೋದಯವು ಬೆಳಿಗ್ಗೆ 5.51 ಕ್ಕೆ ಹಾಗೂ ಸೂರ್ಯಾಸ್ತವು ಸಂಜೆ 6.10 ಕ್ಕೆ ಆಗಲಿದ್ದು, ರಾಹುಕಾಲ ಬೆಳಿಗ್ಗೆ 10.30 ರಿಂದ 12.00 ರವರೆಗೆ ಮತ್ತು ಯಮಗಂಡ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಈ ದಿನದ ಭವಿಷ್ಯ

ಮೇಷ / ಸೂಕ್ತ ಸಮಯದಲ್ಲಿ ಸಹಾಯ ದೊರೆಯಲಿದ್ದು, ಕೈಗೊಂಡ ಕೆಲಸ ಅಡೆತಡೆಗಳಿಲ್ಲದೆ ಸುಗಮವಾಗಿ ಸಾಗಲಿವೆ. ಹಣಕಾಸಿನ ಲಾಭವಾಗುವ ಸಾಧ್ಯತೆಗಳಿದ್ದು, ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಪ್ರಗತಿ ಕಂಡುಬರಲಿದೆ.

ವೃಷಭ / ಅಂದುಕೊಂಡ ಕೆಲಸಗಳಲ್ಲಿ ವಿಳಂಬವಾಗಲಿದ್ದು, ಆರ್ಥಿಕ ವಹಿವಾಟು ನಿಧಾನಗತಿಯಲ್ಲಿ ಸಾಗಲಿವೆ. ದೂರ ಪ್ರಯಾಣ , ದೈಹಿಕ ಶ್ರಮ, ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ, ಆರೋಗ್ಯದಲ್ಲಿ ಏರುಪೇರಾಗಬಹುದು ವ್ಯಾಪಾರ ಮತ್ತು ಉದ್ಯೋಗ ಸ್ಥಳಗಳಲ್ಲಿ ಕೆಲವೊಂದು ಕಿರಿಕಿರಿ ಎದುರಾಗುವ ಲಕ್ಷಣಗಳಿವೆ.

ಮಿಥುನ /ಈ ದಿನ ಅನುಕೂಲಕರವಾಗಿರುವುದಿಲ್ಲ ಹಾಗೂ ಹೆಗಲ ಮೇಲಿನ ಜವಾಬ್ದಾರಿ ಹೆಚ್ಚಾಗಲಿವೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೀರಿ, ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಹೆಚ್ಚಿನ ನಿರೀಕ್ಷೆ ಮುಟ್ಟಲಾಗದು.

ಕರ್ಕಾಟಕ / ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸು ಮೂಡಲಿದ್ದು, ಆರ್ಥಿಕ ವ್ಯವಹಾರ ಸಕಾರಾತ್ಮಕವಾಗಿ ಸಾಗಲಿವೆ ವ್ಯಾಪಾರ ಹಾಗೂ ಉದ್ಯೋಗಸ್ಥರಿಗೆ ಎಲ್ಲ ರೀತಿಯಿಂದಲೂ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.

ಸಿಂಹ / ಪ್ರತಿಯೊಂದು ಕೆಲಸಗಳಲ್ಲೂ ಯಶಸ್ಸು ಲಭಿಸಲಿದ್ದು, ಶುಭ ಸುದ್ದಿಯೊಂದು ಕಿವಿಗೆ ಬೀಳಲಿದೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿನ ಬೆಳವಣಿಗೆ ಮುಖದಲ್ಲಿ ಮಂದಹಾಸ ಮೂಡಿಸಲಿವೆ.

ದಿನದ ಭವಿಷ್ಯ ಮತ್ತು ಪಂಚಾಂಗ

ಕನ್ಯಾ /ಕೆಲಸದ ಒತ್ತಡ ಹಾಗೂ ದೈಹಿಕ ಶ್ರಮ ಹೆಚ್ಚಾಗಲಿದೆ. ಕೈಗೊಂಡ ಕಾರ್ಯಗಳಲ್ಲಿ ವಿಘ್ನ ಎದುರಾಗಲಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿ ಎದುರಾಗುವ ಸವಾಲುಗಳು ಎದುರಾಗಲಿದೆ.

ತುಲಾ / ಆರ್ಥಿಕ ವ್ಯವಹಾರಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಲಿದ್ದು, ದೇವಾಲಯಗಳಿಗೆ ಭೇಟಿ ನೀಡುವರು. ಕುಟುಂಬದ ಸದಸ್ಯರ ನಡುವೆ ವೈಮನಸ್ಸು ಮೂಡುವ ಸಾಧ್ಯತೆಗಳಿವೆ ಮತ್ತು ಅನಾರೋಗ್ಯ ವ್ಯಾಪಾರ, ಉದ್ಯೋಗದಲ್ಲಿ ನಿರೀಕ್ಷಿತ ಪ್ರತಿಫಲ ಸಿಗದೆ ನಿರಾಸೆ ಕಾಡಬಹುದು.

ವೃಶ್ಚಿಕ / ಹಣಕಾಸಿನ ಲಾಭವಾಗಲಿದೆ ಹಾಗೂ ಹೊಸ ಜನರೊಂದಿಗೆ ಸಂಪರ್ಕ ಬೆಳೆಯಲಿದ್ದು, ಉದ್ಯೋಗಾವಕಾಶಗಳಿಗಾಗಿ ಸಂದರ್ಶನಗಳ ಕರೆ ಬರಲಿದೆ ವ್ಯಾಪಾರ, ಉದ್ಯೋಗ ಕ್ಷೇತ್ರಗಳಲ್ಲಿನ ಕಾರ್ಯಚಟುವಟಿಕೆಗಳು ಅತ್ಯಂತ ಉತ್ಸಾಹದಿಂದ ಸಾಗಲಿವೆ.

ಧನುಸ್ಸು / ಈ ರಾಶಿಯ ದಿನದ ಭವಿಷ್ಯ ಹೀಗಿದೆ. ಅಡೆತಡೆಗಳು ಎದುರಾಗಲಿದ್ದು, ಸ್ನೇಹಿತರೊಂದಿಗೆ ವಿನಾಕಾರಣ ವಿವಾದ ಏರ್ಪಡಬಹುದು ಮತ್ತು ಉದ್ಯೋಗ ಹಾಗೂ ವ್ಯಾಪಾರದಲ್ಲಿ ತೊಡಕಾಗಬಹದು.

ಮಕರ / ಅಚ್ಚರಿ ಮೂಡಿಸುವಂತಹ ವಿಚಾರ ತಿಳಿದುಬರಲಿವೆ ಹಾಗೂ ನೂತನ ವಸ್ತುಗಳ ಖರೀದಿ, ಹಣಕಾಸಿನ ಲಾಭವಾಗಲಿದ್ದು,ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ನಿಮ್ಮ ನಿರ್ಧಾರಗಳೇ ಅಂತಿಮವಾಗಲಿದ್ದು, ಮೇಲುಗೈ ಸಾಧಿಸಲಿದ್ದೀರಿ.

ಕುಂಭ / ಕೈಗೊಳ್ಳುವ ಪ್ರಯಾಣಗಳಲ್ಲಿ ಕೆಲವೊಂದು ಅಡೆತಡೆ ಉಂಟಾಗಲಿದ್ದು, ಹಣಕಾಸಿನ ಅಗತ್ಯತೆಗಾಗಿ ಸಾಲದ ಮೊರೆ ಹೋಗಬೇಕಾಗಬಹುದು. ವ್ಯಾಪಾರ ಹಾಗೂ ಉದ್ಯೋಗ ಸ್ಥಳಗಳಲ್ಲಿ ಗೊಂದಲಮಯ ಪರಿಸ್ಥಿತಿ ನಿರ್ಮಾಣವಾಗಲಿದೆ.

ಮೀನ / ಹೊಸ ಉದ್ಯೋಗಾವಕಾಶ ಒಲಿದು ಬರಲಿದ್ದು, ನೂತನ ವ್ಯವಹಾರ ಹುಟ್ಟುಹಾಕಲಿದ್ದೀರಿ ಹೊಸ ವಾಹನ ಖರೀದಿಸುವ ಯೋಗವಿದೆ ವ್ಯಾಪಾರ ಹಾಗೂ ಉದ್ಯೋಗದಲ್ಲಿನ ಬೆಳವಣಿಗೆಗಳು ಅತ್ಯಂತ ತೃಪ್ತಿದಾಯಕವಾಗಿರಲಿವೆ.

Daily Horoscope and Panchanga Sri Parabhava Nama Samvatsara ಪರಾಭವ ನಾಮ ಸಂವತ್ಸರದ ದಿನದ ಪಂಚಾಂಗ ಈ ದಿನದ ಭವಿಷ್ಯ
Daily Horoscope and Panchanga Sri Parabhava Nama Samvatsara ಪರಾಭವ ನಾಮ ಸಂವತ್ಸರದ ದಿನದ ಪಂಚಾಂಗ ಈ ದಿನದ ಭವಿಷ್ಯ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw