SHIMOGA NEWS LIVE

ಆಯನೂರು : ಮಗಳು ಮಹೀನ್​ ಸಾಧನೆ! ತಂದೆ ಜಬೀರ್​ಗೆ ಹಿರಿಮೆಯ ಗರಿ! ಏನಂದ್ರು ನೋಡಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶಿವಮೊಗ್ಗ ತಾಲೂಕಿನ ಆಯನೂರು ಮೂಲದ ವಿದ್ಯಾರ್ಥಿನಿ ಮಹೀನ್ ಖಾನಮ್ ಆಫ್ರಿದಿ ಅವರು ಒಟ್ಟು 600 ಅಂಕಗಳಿಗೆ 596 ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈಕೆಯ ಸಾಧನೆಗೆ ಅವರ ಕುಟುಂಬಸ್ಥರು, ಸಂಬಂಧಿಕರು, ನೆರೆಹೊರೆಯವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಇದೇ ಸ್ಟೋರಿಗೆ ಸಂಬಂಧಿಸಿದ ಇನ್ನೊಂದು ಸುದ್ದಿ ಇಲ್ಲಿದೆ : ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹೀನ್ ಖಾನಮ್ ಅಫ್ರಿದಿಗೆ 600/596 ಅಂಕ!

ಶಿವಮೊಗ್ಗದ ಪೇಸ್ ಪಿಯು (PACE PU) ಕಾಲೇಜಿನ ವಿದ್ಯಾರ್ಥಿನಿ ಮಹೀನ್ ಹಿಂದಿ ಭಾಷೆ, ಭೌತಶಾಸ್ತ್ರ ಹಾಗೂ ಗಣಿತ ವಿಷಯಗಳಲ್ಲಿ ತಲಾ 100 ಅಂಕಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ತಲಾ 99 ಅಂಕಗಳನ್ನು ಹಾಗೂ ಇಂಗ್ಲಿಷ್‌ನಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ.

ಆಯನೂರು : ಮಗಳು ಮಹೀನ್​ ಸಾಧನೆ! ತಂದೆ ಜಬೀರ್​ಗೆ ಹಿರಿಮೆಯ ಗರಿ!

ಆಯನೂರಿನಲ್ಲಿ ಟಿಂಬರ್ ವ್ಯಾಪಾರಿಯಾಗಿರುವ ತಂದೆ ಜಬೀರ್ ಅಹ್ಮದ್ ಖಾನ್ ಮತ್ತು ತಾಯಿ ಆಯೇಷಾ ಸಿದ್ದಿಕಿ ತಮ್ಮ ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳು ಮೊದಲಿನಿಂದಲೂ ವ್ಯಾಸಂಗದಲ್ಲಿ ಟಾಪ್​ಲ್ಲಿದ್ದಳು. ಎಸ್ಎಸ್ಎಲ್ಸಿ (SSLC) ಪರೀಕ್ಷೆಯಲ್ಲಿಯೂ ಶೇಕಡಾ 98 ರಷ್ಟು ಅಂಕಗಳನ್ನು ಪಡೆದಿದ್ದಳು . ತಮ್ಮ ಹಿರಿಯ ಮಗಳಂತೆಯೇ ಮಹೀನ್ ಕೂಡ ವೈದ್ಯಕೀಯ ಶಿಕ್ಷಣವನ್ನು ಪಡೆಯುವ ಗುರಿಯನ್ನು ಹೊಂದಿದ್ದಾಳೆ ಎಂದು ತಿಳಿಸಿದ್ದಾರೆ.

ಇನ್ನೂ ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶಿವಮೊಗ್ಗದ ಪೇಸ್ ಪಿಯು ಕಾಲೇಜಿನ ಆಡಳಿತ ಮಂಡಳಿ, ಕಾಲೇಜಿನ ಒಟ್ಟು 697 ವಿದ್ಯಾರ್ಥಿಗಳ ಪೈಕಿ 479 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದೆ. 210 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ ಎಂದು ತಿಳಿಸಿದೆ.

ಕಾಲೇಜಿನ ಇತರ ಟಾಪರ್‌ಗಳ ಪೈಕಿ ಸಾಧ್ವಿ ಎಂ.ಎಸ್. 600 ಕ್ಕೆ 594 ಅಂಕ, ಅಂಕಿತ್ ಯು.ವಿ. 600 ಕ್ಕೆ 589 ಅಂಕ, ಸಿಂಚನಾ ಪಿ.ಒ. 600 ಕ್ಕೆ 589 ಅಂಕ ಹಾಗೂ ಧೃತಿ ಎಚ್. ಭಟ್ ಅವರು 600 ಕ್ಕೆ 589 ಅಂಕಗಳನ್ನು ಗಳಿಸಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

II PU toper Mahin Khanum Afridi from Ayanur Secures 596 Marks ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಆಯನೂರು ಗ್ರಾಮದ ಮಹೀನ್ ಖಾನಮ್ ಆಫ್ರಿದಿಗೆ 596 ಅಂಕ ಯಾರಿವಳು!
II PU toper Mahin Khanum Afridi from Ayanur Secures 596 Marks ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಆಯನೂರು ಗ್ರಾಮದ ಮಹೀನ್ ಖಾನಮ್ ಆಫ್ರಿದಿಗೆ 596 ಅಂಕ ಯಾರಿವಳು!

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ