Dina Bhavishya and Panchanga / ಮಲೆನಾಡು ಟುಡೆ ಸುದ್ದಿ / ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು, ಫಾಲ್ಗುಣ ಮಾಸ ಶುಕ್ಲ ದ್ವಾದಶಿ ತಿಥಿ ರಾತ್ರಿ 8.38 ರವರೆಗೆ ಇರಲಿದ್ದು, ತದನಂತರ ತ್ರಯೋದಶಿ ಆರಂಭವಾಗಲಿದೆ. ಪುನರ್ವಸು ನಕ್ಷತ್ರ ಬೆಳಗ್ಗೆ 9.45 ರವರೆಗೆ ಇರಲಿದೆ. ಅಮೃತ ಗಳಿಗೆಯು ಬೆಳಗ್ಗೆ 7.26 ರಿಂದ 8.57 ರವರೆಗೆ ಇರಲಿದೆ. ರಾಹುಕಾಲ ಬೆಳಗ್ಗೆ 9.00 ರಿಂದ 10.30 ರವರೆಗೆ ಹಾಗೂ ಯಮಗಂಡ ಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರುತ್ತದೆ.

ಇವತ್ತಿನ ರಾಶಿಭವಿಷ್ಯ/Dina Bhavishya and Panchanga
ಮೇಷ / ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಲಿವೆ. ಕೆಲಸಗಳಲ್ಲಿ ಆತುರಪಡದಿರುವುದು ಒಳಿತು ಮತ್ತು ಸಂಬಂಧಿಕರೊಂದಿಗೆ ಮೌನವೇ ಉತ್ತಮ.ವ್ಯಾಪಾರಸ್ಥರಿಗೆ ಹಾಗೂ ಉದ್ಯೋಗಿಗಳಿಗೆ ಶ್ರಮದ ದಿನ
ವೃಷಭ / ಹೊಸ ಕೆಲಸ ಆರಂಭಿಸಲು ಸಕಾಲ. ದೂರ ಪ್ರಯಾಣ, ಪುಣ್ಯಕ್ಷೇತ್ರಗಳ ದರ್ಶನ, ಧನ ಲಾಭ, ವ್ಯವಹಾರದಲ್ಲಿ ಶುಭಸೂಚನೆ, ಉದ್ಯೋಗದಲ್ಲಿ ಹೊಸ ಅವಕಾಶ.
ಮಿಥುನ / ಕುಟುಂಬ ಹಾಗೂ ಆರೋಗ್ಯದ ಸಮಸ್ಯೆ. ಕೆಲಸದಲ್ಲಿ ಅಡೆತಡೆ, ದೂರ ಪ್ರಯಾಣ ಹಾಗೂ ಸಂಬಂಧಿಕರೊಂದಿಗೆ ಜಗಳ. ವ್ಯಾಪಾರದಲ್ಲಿ ನಿಧಾನ, ಉದ್ಯೋಗದಲ್ಲಿ ಕೆಲಸದ ಹೊರೆ.
ಕರ್ಕಾಟಕ / ನೂತನ ಉದ್ಯೋಗ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ವ್ಯವಹಾರ ಭರವಸೆದಾಯಕವಾಗಿರಲಿದ್ದು, ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ.
ಸಿಂಹ / ಸೂಕ್ತ ಫಲಿತಾಂಶ ಕಾಣುವುದಿಲ್ಲ. ವಿವಾದಗಳಿಂದ ದೂರವಿರುವುದು ಉತ್ತಮ. ದಿಢೀರ್ ಪ್ರಯಾಣ, ವ್ಯಾಪಾರದಲ್ಲಿ ಲಾಭಕಡಿಮೆ ಹಾಗೂ ಉದ್ಯೋಗದಲ್ಲಿ ಕಷ್ಟದ ದಿನ
ಕನ್ಯಾ / ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ, ದೇವಾಲಯಗಳಿಗೆ ತೆರಳುವಿರಿ, ಆದಾಯದಲ್ಲಿ ಹೆಚ್ಚಳ. ವ್ಯಾಪಾರದಲ್ಲಿ ಉತ್ಸಾಹ ಮತ್ತು ಉದ್ಯೋಗದಲ್ಲಿ ಕೊಂಚ ನೆಮ್ಮದಿ ಸಿಗಲಿದೆ.

ತುಲಾ / ಹೊಸ ವಿಷಯ ಕಲಿಯಲಿದ್ದು, ಪ್ರಯತ್ನಗಳಿಗೆ ತಕ್ಕ ಪ್ರತಿಫಲ. ಬೆಲೆಬಾಳುವ ವಸ್ತು ಖರೀದಿಸಲಿದ್ದೀರಿ. ವ್ಯವಹಾರ ಪ್ರೋತ್ಸಾಹದಾಯಕವಾಗಿರಲಿದ್ದು, ಉದ್ಯೋಗದಲ್ಲಿ ಅನುಕೂಲಕರ ಸುದ್ದಿ ಕೇಳಿಬರಲಿವೆ.
ವೃಶ್ಚಿಕ / ಪ್ರಯಾಣಗಳು ಮುಂದೂಡಲ್ಪಡಲಿವೆ. ಅಡೆತಡೆ,ಭಿನ್ನಾಭಿಪ್ರಾಯ ಹಾಗೂ ಆರೋಗ್ಯದ ಸಮಸ್ಯೆ‘. ವ್ಯಾಪಾರದಲ್ಲಿ ಕಿರಿಕಿರಿ ಮತ್ತು ಉದ್ಯೋಗದಲ್ಲಿ ಶ್ರಮಕ್ಕೆ ತಕ್ಕ ಫಲ.
ಧನುಸ್ಸು / ಅನಿರೀಕ್ಷಿತ ಖರ್ಚು ಮತ್ತು ಹೆಚ್ಚುವರಿ ಜವಾಬ್ದಾರಿ. ವ್ಯಾಪಾರದಲ್ಲಿ ಸಾಮಾನ್ಯದಿನ, ಉದ್ಯೋಗದಲ್ಲಿ ಕಿರಿಕಿರಿ, ಆರೋಗ್ಯದ ಸಮಸ್ಯೆ.

ಮಕರ / ಉದ್ಯೋಗದ ಪ್ರಯತ್ನ ಫಲಪ್ರದವಾಗಲಿವೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ದಿನಕಳೆಯುವಿರಿ. ವ್ಯವಹಾರ ಅನುಕೂಲಕರ, ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಫಲ.
ಕುಂಭ/ ಪ್ರಯತ್ನಗಳಿಗೆ ಯಶಸ್ಸು, ಸಹೋದರರಿಂದ ಧನ ಲಾಭ. ಔತಣಕೂಟ ಹಾಗೂ ಮನರಂಜನೆಯಲ್ಲಿ ಭಾಗಿಯಾಗಲಿದ್ದೀರಿ. ಆಸ್ತಿ ವಿವಾದ, ವ್ಯವಹಾರದಲ್ಲಿ ಮುನ್ನಡೆ ಮತ್ತು ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ
ಮೀನ / ಆದಾಯ ಕಡಿಮೆ, ಸಾಲ ಮಾಡುವ ಪರಿಸ್ಥಿತಿ ದಿಢೀರ್ ಪ್ರಯಾಣ, ಸಂಬಂಧಿಕರೊಂದಿಗೆ ಜಗಳ. ವ್ಯವಹಾರದಲ್ಲಿ ಇನ್ನಷ್ಟು ಶ್ರಮ, ಉದ್ಯೋಗದಲ್ಲಿ ಕೆಲವು ಕಿರಿಕಿರಿ
February 28 2026 Dina Bhavishya and Panchanga Details ಫೆಬ್ರವರಿ 28, 2026ರ ಇಂದಿನ ಪಂಚಾಂಗ ಹಾಗೂ ಮೇಷ, ವೃಷಭ, ಕನ್ಯಾ ಸೇರಿದಂತೆ 12 ರಾಶಿಗಳ ದಿನ ಭವಿಷ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
