ಗುಡ್ ನ್ಯೂಸ್: ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್‌ಗೆ ನಾಳೆಯಿಂದ ಹೈಟೆಕ್ ಎಲ್‌ಎಚ್‌ಬಿ ಬೋಗಿಗಳ ಭಾಗ್ಯ!

ಶಿವಮೊಗ್ಗ: ಮಲೆನಾಡು ಮತ್ತು ಮೈಸೂರು ನಡುವೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ನೈಋತ್ಯ ರೈಲ್ವೆಯು ಹೊಸ ವರ್ಷದ ಉಡುಗೊರೆ ನೀಡಿದೆ. ತಾಳಗುಪ್ಪ–ಮೈಸೂರು–ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್ (16205/16206) ರೈಲಿಗೆ ಹಳೆಯ ಮಾದರಿಯ ಐಸಿಎಫ್ ಬೋಗಿಗಳ ಬದಲಾಗಿ ಅತ್ಯಾಧುನಿಕ ಎಲ್‌ಎಚ್‌ಬಿ (LHB) ಬೋಗಿಗಳನ್ನು ಅಳವಡಿಸಲಾಗುತ್ತಿದೆ. 

ಶಿವಮೊಗ್ಗ: ಬೈಕ್ ನೀಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ, ಕೊ*ಲೆ ಬೆದರಿಕೆ! 

ಈ ಸುಧಾರಿತ ಬೋಗಿಗಳ ಸೇವೆಯು ನಾಳೆ ಅಂದರೆ ಏಪ್ರಿಲ್ 8, 2026 ರಿಂದ ತಾಳಗುಪ್ಪ ಮತ್ತು ಮೈಸೂರು ಎರಡೂ ನಿಲ್ದಾಣಗಳಿಂದ ಅಧಿಕೃತವಾಗಿ ಆರಂಭವಾಗಲಿದೆ. ಈ ಬದಲಾವಣೆಯಿಂದಾಗಿ ರೈಲು ಪ್ರಯಾಣವು ಈಗಿನಕ್ಕಿಂತ ಹೆಚ್ಚು ಸುರಕ್ಷಿತ ಹಾಗೂ ಆರಾಮದಾಯಕವಾಗಿರಲಿದೆ. 

Talguppa-Mysuru Express ರೈಲಿನ ಹೊಸ ಸಂಯೋಜನೆ ಹೀಗಿದೆ

ಒಟ್ಟು 18 ಆಧುನಿಕ ಬೋಗಿಗಳನ್ನು ಈ ರೈಲು ಹೊಂದಿರಲಿದೆ. ಇದರಲ್ಲಿ1 ಎಸಿ ಚೇರ್ ಕಾರ್. 5 ದ್ವಿತೀಯ ದರ್ಜೆ ಚೇರ್ ಕಾರ್ ಬೋಗಿಗಳು. 10 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು.ದಿವ್ಯಾಂಗ ಸ್ನೇಹಿ ಸೌಲಭ್ಯವಿರುವ ಲಗೇಜ್ ಬ್ರೇಕ್ ವ್ಯಾನ್‌ಗಳು ಇರಲಿವೆ.

ಲಿಂಕ್ ಹಾಫ್ಮನ್ ಬುಶ್ (LHB) ಬೋಗಿಗಳು ಅಪಘಾತದ ಸಮಯದಲ್ಲಿ ಒಂದರ ಮೇಲೊಂದು ಉರುಳದಂತೆ ಡಿಸೈನ್​​ ಮಾಡಲಾಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ನೀಡುತ್ತವೆ. 

Talguppa-Mysuru Express Gets Modern LHB Coaches

Talguppa-Mysuru Express Gets Modern LHB Coaches
Talguppa-Mysuru Express Gets Modern LHB Coaches
shivamogga car decor sun control house
shivamogga car decor sun control house