ಡಾರ್ಕ್ ಸ್ಪಾಟ್ ಮುಕ್ತ ಶಿವಮೊಗ್ಗಕ್ಕೆ ಪಾಲಿಕೆ ಪ್ಲಾನ್: ಗೋಡೆಗಳ ಮೇಲೆ ಸ್ತ್ರೀಶಕ್ತಿ ಜಾಗೃತಿ ಕಲರವ

Shimoga City Corporation ಶಿವಮೊಗ್ಗ :  ಸಿಟಿ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಸದ ರಾಶಿ ಎದ್ದು ಕಾಣುತ್ತಿದ್ದು, ಡಾರ್ಕ್ ಸ್ಪಾಟ್ ಗಳಾಗಿ ಗೋಚರಿಸುತ್ತಿವೆ. ಇಂತಹ ಜಾಗದಲ್ಲಿ ಪೋಸ್ಟರ್ ಅಂಟಿಸುವುದು, ಯೂರಿನ್ ಪಾಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಸರ ಮಾಲಿನ್ಯವಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿಮಹಾನಗರ ಪಾಲಿಕೆ ಗೋಡೆ ಬರಹದ ಜಾಗೃತಿಗೆ ಮುಂದಾಗಿದೆ.

ಹೊಳೆಹೊನ್ನೂರು ತೋಟದಲ್ಲಿ, ಸುಟ್ಟ ಸ್ಥಿತಿಯಲ್ಲಿ ಶಿವಮೊಗ್ಗದ ಉಪನ್ಯಾಸಕರ ಶವ ಪತ್ತೆ! ನಿಗೂಢ!

ಸಮುದಾಯ ಸಂಚಾಲಕರಿಂದ ಗೋಡೆ ಬರಹ 

ಶಿವಮೊಗ್ಗದ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು ಸಮುದಾಯ ಸಂಚಾಲಕರ ಮೂಲಕ ಪ್ರತಿ ವಾರ್ಡ್ ಸ್ವಚ್ಚಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಪ್ರತಿ ಮನೆಗೆ ಕಸ ಸಂಗ್ರಹಕ್ಕಾಗಿ ವಾಹನ ವ್ಯವಸ್ಥೆ ಕಲ್ಪಿಸಿದರೂ, ಜನರ ತಮ್ಮ ಏರಿಯಗಳಲ್ಲಿ ಅಲ್ಲಲ್ಲಿ ಕಸ ಡಂಪ್ ಮಾಡುವ ಮೂಲಕ ಡಾರ್ಕ್ ಸ್ಪಾಟ್ ಗಳನ್ನಾಗಿ ಮಾಡಿದ್ದಾರೆ.

ಇಂತಹ ಜಾಗಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಿ, ಪರಿಸರವನ್ನು ಹಾಳುಗೆಡುವುತ್ತಿದ್ದಾರೆ. ಇಂತಹ ಡಾರ್ಕ್ ಸ್ಪಾಟ್ ಗಳಲ್ಲಿ ಬ್ಯೂಟಿಫಿಕೇಷನ್ ಹೆಸರಿನಲ್ಲಿ ಗೋಡೆಗಳಲ್ಲಿ ಜಾಗೃತಿ ಮೂಡಿಸುವ ಬರಹಗಳನ್ನು ಮಹಿಳೆಯರು ಬಿಡಿಸುತ್ತಿದ್ದಾರೆ. ಈ ಮೂಲಕ ಸ್ವಚ್ಚತೆಗೆ ಕರೆ ನೀಡಿದ್ದಾರೆ.

22 ಮಹಿಳೆಯರೇ ಒಟ್ಟು ಗೂಡಿ  ವಿಶೇಷವಾಗಿ ಗಿಡ ಮರಗಳ ಪೋಟೋಚಿತ್ರ ಜಾಗೃತಿ ಮೂಡಿಸುವ ಗೋಡೆ ಬರಹಗಳನ್ನು ಬರೆಯಲಾಗುತ್ತಿದೆ. ಸ್ತ್ರೀ ಶಕ್ತಿ ಸಂಘಗಳ ಯಾರು  ಏನು ಕಲಾ ಪಂಡಿತರಲ್ಲ ಎನ್ನುವುದು ವಿಶೇಷವಾಗಿದೆ.

ಸಮುದಾಯ ಸಂಚಾಲಕರು ಗೋಡೆ ಬರಹ ಹಾಗು ಪರಿಸರ ಜಾಗೃತಿಯ ಚಿತ್ರಗಳನ್ನು ಬಿಡಿಸುತ್ತಿದ್ದರೂ, ಇಂತಹ ಜಾಗದಲ್ಲಿಯೇ ಮತ್ತೆ ಕಸ ಹಾಕಲಾಗುತ್ತಿದೆ ಎಂದು ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ಜನತೆ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮಹಾ ನಗರ ಪಾಲಿಕೆ ಕರೆ ನೀಡಿದೆ. 

Shimoga City Corporation Cleans Dark Spots

Shimoga City Corporation Cleans Dark Spots
Shimoga City Corporation Cleans Dark Spots
shivamogga car decor sun control house
shivamogga car decor sun control house