ಆತ್ಮಹತ್ಯೆಗೆ ಪ್ರಚೋದನೆ, 26 ವರ್ಷದ ಯುವಕ ಸೇರಿ ಇಬ್ಬರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

Court ಭದ್ರಾವತಿ :  ಯುವಕನೊಬ್ಬನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಕಿರುಕುಳ ನೀಡಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ ಇಬ್ಬರು ವ್ಯಕ್ತಿಗಳಿಗೆ ಭದ್ರಾವತಿಯ ನ್ಯಾಯಾಲಯವು 10 ವರ್ಷಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಹಾಗೂ ಒಟ್ಟು 2,23,000 ರೂಪಾಯಿಗಳ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. 

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೀತು ಇ-ಪೇಪರ್​​ ಓದಿ

ಪ್ರಕರಣದ ಹಿನ್ನೆಲೆ

2021ರ ಮೇ 5ರಂದು ಮಲ್ಲಾಪುರ ಗ್ರಾಮದ ನವೀನ್ ಕುಮಾರ್ ಎಂಬುವವರಿಗೆ ನಾಗರಾಜ್ ರಾವ್ (26) ಮತ್ತು ಮಂಜೋಜಿ ರಾವ್ (50) ಎಂಬುವವರು ನಿಂದಿಸಿದ್ದರು. ನಮ್ಮ ಮನೆಯ ಹುಡುಗಿಗೆ ಮೆಸೇಜ್ ಮಾಡುತ್ತೀಯಾ? ಎಂದು ಪ್ರಶ್ನಿಸಿದ ಆರೋಪಿಗಳು, ನವೀನ್ ಕುಮಾರ್ ಮೇಲೆ ಹಲ್ಲೆ ನಡೆಸಿ, ನೀನು ಸಾಯಬೇಕು ಇಲ್ಲವೇ ಊರು ಬಿಟ್ಟು ತೊಲಗಬೇಕು ಎಂದು ಬೆದರಿಕೆ ಹಾಕಿದ್ದರು. ಈ ಅವಮಾನ ಮತ್ತು ದೌರ್ಜನ್ಯದಿಂದ ಮನನೊಂದ ನವೀನ್ ಕುಮಾರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. 

ಈ ಘಟನೆಗೆ ಸಂಬಂಧಿಸಿದಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 504, 323 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪಿಎಸ್ಐ ಮೋಹನ್ ಜಿ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು. 

ವಾದ-ಪ್ರತಿವಾದಗಳನ್ನು ಆಲಿಸಿದ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು, ಆರೋಪಿಗಳ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ಪ್ರಕಟಿಸಿದ್ದಾರೆ. ದಂಡದ ಮೊತ್ತದಲ್ಲಿ 2 ಲಕ್ಷ ರೂಪಾಯಿಗಳನ್ನು ಮೃತ ನವೀನ್ ಕುಮಾರ್ ಅವರ ಪೋಷಕರಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.

shivamogga car decor sun control house
shivamogga car decor sun control house

Court Sentences Two to 10 Years Imprisonment

Court Sentences Two to 10 Years Imprisonment
Court Sentences Two to 10 Years Imprisonment