horoscope and panchanga ಪರಾಭವ ನಾಮ ಸಂವತ್ಸರ ಉತ್ತರಾಯಣ, ವಸಂತ ಋತು ಹಾಗೂ ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿ ಬೆಳಿಗ್ಗೆ 6.51 ರವರೆಗೆ ಇರಲಿದ್ದು, ತದನಂತರ ಚತುರ್ದಶಿ ಆರಂಭವಾಗಲಿದೆ. ಪುಬ್ಬ ನಕ್ಷತ್ರವು ಮಧ್ಯಾಹ್ನ 3.20 ರವರೆಗೆ ಇರಲಿದ್ದು, ಆನಂತರ ಉತ್ತರ ನಕ್ಷತ್ರ ಪ್ರವೇಶವಾಗಲಿದೆ. ಅಮೃತ ಘಳಿಗೆಯು ಬೆಳಿಗ್ಗೆ 8.55 ರಿಂದ 10.31 ರವರೆಗೆ ಇರಲಿದೆ.. ಮಧ್ಯಾಹ್ನ 3.00 ರಿಂದ 4.30 ರವರೆಗೆ ರಾಹುಕಾಲವಿದ್ದು, ಬೆಳಿಗ್ಗೆ 9.00 ರಿಂದ 10.30 ರವರೆಗೆ ಯಮಗಂಡ ಕಾಲ ಇರಲಿದೆ.

ಶಿವಮೊಗ್ಗ : ಅಸಲಿಗೆ ಅಡಿಕೆ ರೇಟು ಕರೆಕ್ಟ್ ಆಗಿ ಎಷ್ಟಿದೆ!? ಏನಾಗ್ತಿದೆ?
ಇವತ್ತಿನ ರಾಶಿಭವಿಷ್ಯ
ಮೇಷ / ಕೈಗೊಳ್ಳುವ ಕಾರ್ಯಗಳಲ್ಲಿ ಅಡಚಣೆ. ಸಾಲ ಮಾಡುವ ಪ್ರಸಂಗ ಎದುರಾಗಬಹುದು ಮತ್ತು ಅನಿರೀಕ್ಷಿತ ಪ್ರಯಾಣ ಕೈಗೊಳ್ಳಬೇಕಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಲಾಭ ಸಿಗಲಿದ್ದು, ಉದ್ಯೋಗಿಗಳಿಗೆ ಬದಲಾವಣೆಗಳು ಕಂಡುಬರಲಿವೆ.
ವೃಷಭ / ಕೌಟುಂಬಿಕ ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆ ಬಾಧಿಸಲಿವೆ. ಹಣಕಾಸಿನ ಖರ್ಚು ಹೆಚ್ಚಾಗಲಿದ್ದು, ಮನೆಯೊಳಗೆ ಹಾಗೂ ಹೊರಗೆ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಲಿದೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ಈ ದಿನ ಸಾಮಾನ್ಯದಿನ
ಮಿಥುನ / ಶುಭ ಕಾರ್ಯ, ಹಣ ವ್ಯಯ. ಸಮಾಜದಲ್ಲಿ ವಿಶೇಷವಾದ ಗೌರವ ಪ್ರಾಪ್ತಿಯಾಗಲಿದ್ದು, ಹಳೆಯ ಸ್ನೇಹಿತರ ಭೇಟಿಯಾಗಲಿದ್ದಾರೆ. ವೃತ್ತಿ ಹಾಗೂ ಉದ್ಯೋಗದಲ್ಲಿ ಹೊಸ ಉತ್ಸಾಹ ಮೂಡಲಿದೆ.

ಕರ್ಕಾಟಕ / ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ಆರ್ಥಿಕ ವ್ಯವಹಾರದಲ್ಲಿ ಲಾಭ ಕಡಿಮೆ, ನಿಗದಿತ ಕಾರ್ಯಗಳು ಮುಂದೂಡಲ್ಪಡಲಿವೆ. ವ್ಯಾಪಾರ ಹಾಗೂ ಉದ್ಯೋಗ ಸ್ಥಳಗಳಲ್ಲಿ ಗೊಂದಲಎದುರಾಗಲಿದೆ.
ಶಿವಮೊಗ್ಗಕ್ಕೆ ಮಣ್ಣು ಸಾಗಿಸ್ತಿದ್ದಾಗ ಮೇಲೆ ಕೆಳಗಾಗಿ ರಸ್ತೆ ಬದಿ ಬಿದ್ದ ಲಾರಿ!
ಸಿಂಹ / ಕುಟುಂಬದ ಸದಸ್ಯರೊಂದಿಗೆ ಇದ್ದಂತಹ ವಿವಾದ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಿದ್ದಾರೆ. ಅಂದುಕೊಂಡ ಕಾರ್ಯಗಳು ಕೈಗೂಡಲಿದ್ದು, ಪ್ರಭಾವ ವೃದ್ಧಿಯಾಗಲಿದೆ. ಆರ್ಥಿಕ ಲಾಭ, ಉದ್ಯೊಗ ಹಾಗೂ ವಾಣಿಜ್ಯ ವ್ಯವಹಾರ ಅತ್ಯಂತ ಉತ್ಸಾಹದಾಯಕವಾಗಿರಲಿವೆ.
ಕನ್ಯಾ / ಬಂಧು ಮಿತ್ರರೊಂದಿಗೆ ವಿವಾದ ಎದುರಾಗುವ ಸಂಭವವಿದೆ. ಹಣಕಾಸಿನ ಮುಗ್ಗಟ್ಟು, ಅನಿರೀಕ್ಷಿತ ಪ್ರಯಾಣ ಒದಗಿಬರಲಿವೆ. ಅನಾರೋಗ್ಯ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಏರಿಳಿತ ಕಂಡುಬರಲಿವೆ.
ತುಲಾ / ಮನೆಯಲ್ಲಿ ಶುಭ ಕಾರ್ಯ. ಆರ್ಥಿಕವಾಗಿ ಉತ್ತಮ ಪ್ರಗತಿ, ಕೈಗೊಂಡ ಕೆಲಸಗಳಲ್ಲಿ ಯಶಸ್ಸು. ಪುಣ್ಯಕ್ಷೇತ್ರಗಳಿಗೆ ಭೇಟಿ, ದೂರದ ಸಂಬಂಧಿಕರ ಆಗಮನವಾಗಲಿದೆ. ವೃತ್ತಿ ಹಾಗೂ ಉದ್ಯೋಗದಲ್ಲಿ ಅತ್ಯುತ್ತಮ ಪ್ರೋತ್ಸಾಹ ದೊರೆಯಲಿದೆ.
ವೃಶ್ಚಿಕ / ಪ್ರಮುಖ ಕಾರ್ಯ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಸಾಗಲಿವೆ. ಹಣ ಮತ್ತು ವಸ್ತು ಲಾಭವಾಗಲಿದ್ದು, ಯಶಸ್ಸು ಲಭಿಸಲಿದೆ. ಶುಭ ಸುದ್ದಿ ಕೇಳಿಬರಲಿದ್ದು, ಉದ್ಯೋಗ ಹಾಗೂ ವ್ಯಾಪಾರ ಅತ್ಯುತ್ಸಾಹದಿಂದ ನಡೆಯಲಿವೆ.
ಧನುಸ್ಸು / ಆರಂಭಿಸಿದ ಕೆಲಸಗಳು ಪೂರ್ಣಗೊಳ್ಳಲಿದೆ. ಅತಿಯಾದ ಶ್ರಮ ವಹಿಸಬೇಕಾಗಲಿದ್ದು, ಸ್ನೇಹಿತರೊಂದಿಗೆ ವಾಗ್ವಾದ ಆಗಬಹುದು, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಲಿದೆ.
ಮಕರ / ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ವೃಥಾ ಪ್ರಯಾಸ, ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿವೆ. ಕೆಲಸ ಮುಂದಕ್ಕೆ ಸಾಗದೆ ಉದ್ಯೋಗ ಹಾಗೂ ವ್ಯಾಪಾರ ಮಂದಗತಿಯಲ್ಲಿ ಸಾಗಲಿವೆ.

ಶಿವಮೊಗ್ಗ : ಅಸಲಿಗೆ ಅಡಿಕೆ ರೇಟು ಕರೆಕ್ಟ್ ಆಗಿ ಎಷ್ಟಿದೆ!? ಏನಾಗ್ತಿದೆ?
ಕುಂಭ / ಹೊಸ ಜನರ ಪರಿಚಯವಾಗಲಿದೆ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದ್ದು, ಆಸ್ತಿ ವಿಚಾರಗಳಲ್ಲಿ ಹೊಸ ಒಪ್ಪಂದಗಳು ನಡೆಯಲಿವೆ. ವ್ಯಾಪಾರ ವಿಸ್ತರಿಸುವ ಚಿಂತನೆ ಮಾಡಲಿದ್ದು, ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ ದೊರೆಯಲಿದೆ.
ಮೀನ / ಭೂಮಿಗೆ ಸಂಬಂಧಿಸಿದ ವಿವಾದ ಇತ್ಯರ್ಥವಾಗಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಎಲ್ಲಾ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದ್ದು, ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಸಂಪೂರ್ಣ ಅನುಕೂಲಕರ ವಾತಾವರಣ ಇರಲಿದೆ.
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
