ಖಾಯಂ ವೈದ್ಯರಿಲ್ಲದ ಜಾಗದಲ್ಲಿ ಡಾಕ್ಟರ್ ಸಮೀಕ್ಷಾ ರೆಡ್ಡಿ ಕರ್ತವ್ಯ ನಿರ್ವಹಿಸುವಂತಾಗಿದ್ದು ದೌರ್ಭಾಗ್ಯವೇ ಸರಿ. 

This Article Written by / Prathapa thirthahalli / ಮಾರ್ಚ್ 30, 2026

Samiksha Reddy Death High-Level Inquiry Complete Dr. Sameeksha Case CCTV & Call Logs Truth

Samiksha Reddy Death ಶಿವಮೊಗ್ಗ : ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಯುವ ವನ್ಯಜೀವಿ ವೈದ್ಯೆ ಡಾಕ್ಟರ್ ಸಮೀಕ್ಷಾ ರೆಡ್ಡಿಯವರು ನೀರಾನೆ ದಾಳಿಗೆ ಸಾವನ್ನಪ್ಪಿದ ಪ್ರಕರಣದ ತನಿಖೆ ತಾರ್ಕಿಕ ಅಂತ್ಯ ಕಂಡಿದೆ. ಶಿವಮೊಗ್ಗ ವೃತ್ತ ಸಿಸಿಎಫ್ ಹನುಮಂತಪ್ಪರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ತನಿಖೆ ಪೂರ್ಣಗೊಂಡಿದ್ದು, ವರದಿ ಅರಣ್ಯ ಸಚಿವರಿಗೆ ನೀಡಲಾಗಿದೆ. ವರದಿ ಪರಿಶೀಲಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡಲಿದ್ದಾರೆ  ಎಂಬುದು ಮೂಲಗಳಿಂದ ತಿಳಿದು ಬಂದಿದೆ. 

ಶಿವಮೊಗ್ಗ : ಅಸಲಿಗೆ ಅಡಿಕೆ ರೇಟು ಕರೆಕ್ಟ್​ ಆಗಿ ಎಷ್ಟಿದೆ!? ಏನಾಗ್ತಿದೆ?

ವರದಿಯ ಸಾರಾಂಶ ಏನೇ ಬರಲಿ.ಡಾಕ್ಟರ್ ಸಮೀಕ್ಷಾ ರೆಡ್ಡಿಯವರ ಸಾವಿಗೆ ಕಾರಣವೇನು. ಅದರ  ಹೊಣೆಯನ್ನು ಸಮೀಕ್ಷಾ ರೆಡ್ಡಿ ಅವರ ಹೆಗಲಿಗೆ ಕಟ್ಟುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ಅಧಿಕಾರಿಗಳು ಹೇಳಿದಂತೆ ಅವರಾಗಿಯೇ ಕೇಜ್ ಬಳಿ ಹೋಗಿ ಆವರಣದೊಳಗೆ ಇಳಿದಿದ್ದು ಸ್ವಯಂಕೃತ ಅಪರಾಧ ಎಂದು ಹೇಳಲಾಗಿದೆ. ಇವರ ಸಾವಿನ ನಂತರವಾದ್ರೂ, ರಾಜ್ಯದ ಪ್ರಾಣಿ ಸಂಗ್ರಹಾಲಯ ಮತ್ತು ಸಫಾರಿಗಳಲ್ಲಿ ಅಮೂಲಾಗ್ರ ಬದಲಾವಣೆಗಳಾಗಲಿ ಎಂಬುದು ಜನತೆಯ ಆಗ್ರಹವಾಗಿದೆ.

Samiksha Reddy Death ವನ್ಯಜೀವಿ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಸಮೀಕ್ಷಾ ರೆಡ್ಡಿಯವರು ಇಷ್ಟು ಸಣ್ಣ ವಯಸ್ಸಿನಲ್ಲಿ ಸಾವನ್ನಪ್ಪಿರುವುದು ಅವರ ಕುಟುಂಬ ಹಾಗು ಸ್ನೇಹ ಬಳಗಕ್ಕೆ ನುಂಗಲಾರದ ತುತ್ತಾಗಿದೆ. ಅವರು ಸಫಾರಿಗೆ ಅಪ್ರೆಂಟಿಸ್ ಹುದ್ದೆಯಲ್ಲಿ ನೇಮಕವಾಗಿದ್ದೇ ಇಲ್ಲಿ ಕಾನೂನಿನ ಲೋಪವಾಗಿದೆ. ಕರ್ನಾಟಕ ಝೂ ಪ್ರಾಧಿಕಾರ ನಿಯಮದಂತೆ ಸಫಾರಿಗಳಲ್ಲಿ ವನ್ಯಜೀವಿ ವೈದ್ಯರನ್ನು ಅಪ್ರೆಂಟಿಸ್ ಹುದ್ದೆಯ ಅಡಿ ನೇಮಕ ಮಾಡಿಕೊಳ್ಳುವಂತಿಲ್ಲ.ಇಲ್ಲಿ ವೈದ್ಯರನ್ನು ಖಾಯಂ ಇಲ್ಲವೇ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶವಿದೆ.

ಸಮೀಕ್ಷಾ ರೆಡ್ಡಿಯವರಿಗೆ ದಿನಕ್ಕೆ 620 ರೂಪಾಯಿಯಂತೆ ಕ್ಯಾಷ್ ನಲ್ಲಿ ಸಂಬಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಸಂಬಳವನ್ನು ಅಕೌಂಟ್ ಪೇ ಇಲ್ಲವೇ ಚೆಕ್ ನಲ್ಲಿ ನೀಡಬೇಕು. ಆದರೆ ಇಲ್ಲಿ ಕೈಗಡ ಸಂಬಳ ನೀಡಲಾಗಿದೆ. 

ಅಪ್ರೆಂಟಿಸ್ ಹುದ್ದೆಗೆ ಅವಕಾಶ ನೀಡಿದ ಪರಿಣಾಮವೇ ಯುವ ಪ್ರತಿಭೆಯೊಂದು ಅರಳುವ ಮುನ್ನವೇ ಬಾಡಿ ಹೋಗಿದೆ. ಈ ಅಪ್ರೆಂಟಿಸ್ ಹುದ್ದೆಯನ್ನು ಸೃಷ್ಟಿಸಿದ್ದು ಯಾರು?  ಪಶುವೈದ್ಯಕೀಯ ವ್ಯಾಸಂಗ ಪೂರ್ಣ ಗೊಳಿಸಿ ಆಗ ತಾನೆ ವೈದ್ಯರಾಗಿ ಬರುವವರಿಗೆ ವನ್ಯಜೀವಿಗಳ ನೋಡಿಕೊಳ್ಳುವ ಜವಬ್ದಾರಿ ಹೆಗಲಿಗೆ ಹಾಕಿದರೆ ಹೇಗೆ. ಅನುಭವ ಇರುವ ಖಾಯಂ ವೈದ್ಯರ ಕೆಳಗೆ ಕೆಲಸ ಮಾಡಿದಾಗಲೇ ಯುವ ವೈದ್ಯರಿಗೆ ಜ್ಞಾನಾರ್ಜನೆಯಾಗುವುದು. ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಖಾಯಂ ವೈದ್ಯರಿಲ್ಲ. ಹಿಂದಿದ್ದ ಡಾಕ್ಟರ್ ಸುಜೀತ್ ಈಗ ವಂತಾರ ದಲ್ಲಿ ವನ್ಯಜೀವಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ಅವರ ಕೆಳಗೆ ಡಾಕ್ಟರ್ ಮುರಳಿ ಕೆಲಸ ಮಾಡಿದ್ದರು. ಹುಲಿ ಸಿಂಹ ಚಿರತೆ, ನೀರಾನೆ, ಇಂತಹ ಕ್ರೂರ ಪ್ರಾಣಿಗಳ ಆರೋಗ್ಯ ವ್ಯತ್ಯಾಸವಾದರೆ ಮ್ಯಾಜಿಕ್ ಮಾಡಿ ಅವುಗಳ ಬಳಿ ಹೋಗಲು ಸಾಧ್ಯವಿಲ್ಲ. ಅನುಭವ ಹೊಂದಿದ ವೈದ್ಯರೇ ಅವುಗಳನ್ನು ಡಾರ್ಟ್ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಮತ್ತೆ ಆಂಟಿ ಡಾರ್ಟ್ ಮಾಡಬೇಕಾಗುತ್ತದೆ. ವಿಶೇಷ ಸಂದರ್ಭ ಹೊರತು ಪಡಿಸಿ ರಾತ್ರಿ ಹೊತ್ತು ವನ್ಯಪ್ರಾಣಿಗಳ ಬಳಿ ಯಾವ ವೈದ್ಯರು ಹೋಗುವುದಿಲ್ಲ. ಕೇಜ್ ಗಳ ಸಿಸಿ ಕ್ಯಾಮರವನ್ನು ಅವಲೋಕಿಸಿಯೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. 

ಆದರೆ ಖಾಯಂ ವೈದ್ಯರಿಲ್ಲದ ಜಾಗದಲ್ಲಿ ಡಾಕ್ಟರ್ ಸಮೀಕ್ಷಾ ರೆಡ್ಡಿ ಕರ್ತವ್ಯ ನಿರ್ವಹಿಸುವಂತಾಗಿದ್ದು ದೌರ್ಭಾಗ್ಯವೇ ಸರಿ. ಡಾಕ್ಟರ್ ಮುರುಳಿ ರಾಜಿನಾಮೆ ಕೊಟ್ಟ ನಂತರವಾದರೂ, ಹೊರಗುತ್ತಿಗೆ ಆಧಾರದಲ್ಲಿ ವನ್ಯಜೀವಿ ವೈದ್ಯರನ್ನು ನೇಮಿಸಿಕೊಳ್ಳಬಹುದಿತ್ತು. ಆದರೆ ಅದ್ಯಾವುದೇ ಕಾನೂನಿನ ಕ್ರಮಗಳು ಸಫಾರಿಯಲ್ಲಿ ನಡೆಯಲೇ ಇಲ್ಲ. ಕಾಡಿನ ನಿಯಮವೇ ಇಲ್ಲಿ ಕೂಡ ಪಾಲನೆಯಾಗಿದ್ದರಿಂದ ಡಾಕ್ಟರ್ ಸಮೀಕ್ಷ ರೆಡ್ಡಿ ಬೆಲೆ ತೆತ್ತಬೇಕಾಯಿತು. 

Samiksha Reddy Death High-Level Inquiry Complete

Samiksha Reddy Death High-Level Inquiry Complete Dr. Sameeksha Case CCTV & Call Logs Truth
Samiksha Reddy Death High-Level Inquiry Complete
shivamogga car decor sun control house
shivamogga car decor sun control house

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

CCF Hanumanthappa report,Dr. Samiksha Reddy death investigation,Eshwar Khandre press meet Shimoga,Tyavarekoppa Hippo attack case

ಮುಂದಿನ ಸುದ್ದಿ ಒದಿ