ಅಪ್ಪ ಅಮ್ಮ ಭೇದ ಬಾವ ಮಾಡುತ್ತಿದ್ದಾರೆ ಎಂದು ಸೇತುವೆಗೆ ಹಾರಲು ಯತ್ನಿಸಿದ ಬಾಲಕ, ಆಮೇಲೆ ಏನಾಯ್ತು 

ಹಂಚಿಕೊಳ್ಳಿ
WhatsApp Facebook X Telegram
Shivamogga Police Rescue 16-Year-Old Boy
Shivamogga Police Rescue 16-Year-Old Boy

ಶಿವಮೊಗ್ಗ: ಮನೆಯಲ್ಲಿ ತಂದೆ-ತಾಯಿಯ ಬೇಧಭಾವದಿಂದ ಮನನೊಂದು ತುಂಗಾ ನದಿಗೆ ಹಾರಲು ಯತ್ನಿಸಿದ 16 ವರ್ಷದ ಬಾಲಕನನ್ನು ಶಿವಮೊಗ್ಗ ಪೊಲೀಸರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ . ಈ ಘಟನೆಯು ಭಾನುವಾರ ರಾತ್ರಿ ನಗರದ ವಾದಿ-ಎ-ಹುದಾ ಸೇತುವೆಯ ಬಳಿ ನಡೆದಿದೆ.

ಶಿವಮೊಗ್ಗ ಏರ್​ಪೋರ್ಟ್ ಸಮಾಚಾರ! ತುಂಗಾ ಸ್ಟೇಷನ್​ನಲ್ಲಿ ಕೊಲೆಯತ್ನದ FIR!

ಮಾರ್ಚ್​ 29 ರ ರಾತ್ರಿ ಊರಗಡೂರು ಸರ್ಕಲ್‌ನಲ್ಲಿ ERSS (ತುರ್ತು ಸ್ಪಂದನಾ ವಾಹನ) ಗಸ್ತಿನಲ್ಲಿದ್ದಾಗ, ಬಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ERV ವಾಹನದ ರೆಸ್ಪಾಂಡರ್, ತುಂಗಾನಗರ ಪೊಲೀಸ್ ಠಾಣೆಯ ಸಿ.ಹೆಚ್.ಸಿ  ಶಬ್ಬೀರ್ ಬೇಗ್ ಮತ್ತು ಡಿಎಆರ್ ಶಿವಮೊಗ್ಗದ ಚಾಲಕ ಮಂಜುನಾಥ್ ಎ.ಹೆಚ್.ಸಿ ಅವರು ಕೂಡಲೇ ಸ್ಥಳಕ್ಕೆ ಧಾವಿಸಿದರು.

ನದಿಗೆ ಹಾರಲು ಸಿದ್ಧನಾಗಿದ್ದ ಬಾಲಕನನ್ನು ಸಾರ್ವಜನಿಕರ ನೆರವಿನಿಂದ ಸುರಕ್ಷಿತವಾಗಿ ರಕ್ಷಿಸಲಾಯಿತು. ನಂತರ ಆತನನ್ನು ಸಮಾಧಾನಪಡಿಸಿ, ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸೂಕ್ತ ತಿಳುವಳಿಕೆ ನೀಡಿದ ಪೊಲೀಸರು, ಪೋಷಕರನ್ನು ಸ್ಥಳಕ್ಕೆ ಕರೆಸಿ ಹಿತವಚನ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

Shivamogga Police Rescue 16-Year-Old Boy

Shivamogga Police Rescue 16-Year-Old Boy
Shivamogga Police Rescue 16-Year-Old Boy
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor