ರೀಲ್ಸ್​​ ಅಜ್ಜಿ ಲಕ್ಷ್ಮೀ ನಾಯ್ಕ್​​ ಇನ್ನಿಲ್ಲ

ಯಲ್ಲಾಪುರ :  ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಮೊಮ್ಮಗನೊಂದಿಗೆ ಹಾಸ್ಯಭರಿತ ವೀಡಿಯೊಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದ ರೀಲ್ಸ್​​ ಅಜ್ಜಿ ಇದೀಗ ನಿಧನರಾಗಿದ್ದಾರೆ.

ಪ್ರಖ್ಯಾತ ಜಾಹಿರಾತು ಉದ್ಯಮಿ, ಶಿವಮೊಗ್ಗದ ಆನಂದ್ ಸುಬ್ಬರಾವ್ ಇನ್ನಿಲ್ಲ! ಗುರುಗ್ರಾಮದಲ್ಲಿ 13ನೇ ಮಹಡಿಯಿಂದ ಜಿಗಿದು ಸಾವು!

ಹೌದು, ಸಾಮಾಜಿಕ ಜಾಲತಾಣ ಬಳಸುವ ಬಹುತೇಕರು ಈ ಅಜ್ಜಿಯನ್ನು ನೋಡಿಯೇ ಇರುತ್ತಾರೆ. ಇವರ ಹೆಸರು ಲಕ್ಷ್ಮಿ ನಾಯ್ಕ (93). ಯಲ್ಲಾಪುರದ ಮಂಚಿಕೇರಿಯವರಾದ ಇವರು, ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಸೂರಜ್ ಅವರ ಅಜ್ಜಿ. ಸೂರಜ್ ಅವರೊಂದಿಗೆ ವೀಡಿಯೊಗಳಲ್ಲಿ ಅದ್ಭುತವಾಗಿ ನಟಿಸುತ್ತಿದ್ದ ಇವರು ರೀಲ್ಸ್ ಅಜ್ಜಿ ಎಂದೇ ಖ್ಯಾತಿ ಪಡೆದಿದ್ದರು.

ಈ ಅಜ್ಜಿಗೆ ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ ಮತ್ತು ಕಣ್ಣಿನ ದೃಷ್ಟಿಯೂ ಮಂಜಾಗಿತ್ತು. ಆದರೂ ಮೊಮ್ಮಗ ಸೂರಜ್ ಹೇಳಿಕೊಟ್ಟಂತೆ ಅತ್ಯಂತ ಉತ್ಸಾಹದಿಂದ ನಟಿಸಿ ನಮ್ಮನ್ನೆಲ್ಲಾ ನಗೆಗಡಲಿನಲ್ಲಿ ತೇಳಿಸುತ್ತಿದ್ದರು. ಈ ಅದ್ಭುತ ಪ್ರತಿಭೆಯ ಅಜ್ಜಿ ಇದೀಗ ವಯೋಸಹಜ ಕಾರಣಗಳಿಂದಾಗಿ ದೈವಾಧೀನರಾಗಿದ್ದಾರೆ.

Instagram Reels Ajji Lakshmi Naik Passes Away

Instagram Reels Ajji Lakshmi Naik Passes Away
Instagram Reels Ajji Lakshmi Naik Passes Away
shivamogga car decor sun control house
shivamogga car decor sun control house