ಶಿವಮೊಗ್ಗ ವಿಮಾನ ನಿಲ್ದಾಣದೊಳಗೆ ಕರಡಿ ಪ್ರತ್ಯಕ್ಷ, ವಿಡಿಯೋ ನೋಡಿ

ಶಿವಮೊಗ್ಗ: ಜಿಲ್ಲೆಯ ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಆವರಣಕ್ಕೆ ಇಂದು ಬೆಳಿಗ್ಗೆ ಕರಡಿಯೊಂದು ನುಗ್ಗಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಪ್ರಯಾಣಿಕರಲ್ಲಿ ಭೀತಿ ಮೂಡಿಸಿದೆ.

ಶಿವಮೊಗ್ಗ: ಎನ್.ಟಿ ರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಸಾವು, 

ಬೆಳಿಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ಕಾಚಿನಕಟ್ಟೆಯ ಜ್ಯೋತಿ ನಗರದ ಕಡೆಯಿಂದ ಬಂದ ಕರಡಿ, ವಿಮಾನ ನಿಲ್ದಾಣದ ಕಾಂಪೌಂಡ್ ಹತ್ತಿ ಒಳ ನುಗ್ಗಿದೆ ಎಂದು ಹೇಳಲಾಗುತ್ತಿದೆ . ಮುತ್ತೋಡು ಅರಣ್ಯ ಪ್ರದೇಶದಿಂದ ಬಂದಿರಬಹುದಾದ ಈ ಕರಡಿ, ಕೆಸವೆ, ಲಕ್ಕವಳ್ಳಿ ಹಾಗೂ ಕಾಚಿನಕಟ್ಟೆ ಮಾರ್ಗವಾಗಿ ವಿಮಾನ ನಿಲ್ದಾಣದ ಆವರಣ ತಲುಪಿದೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆಯೇ ವಿಮಾನ ನಿಲ್ದಾಣದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಲಾಗಿದ್ದು, ಉಂಬ್ಳೆಬೈಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಕರಡಿಯನ್ನು ಸೆರೆ ಹಿಡಿಯಲಾಗಿದ್ದು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

Bear Enters Airport Panic Among Passengers

shivamogga car decor sun control house
shivamogga car decor sun control house
Bear Enters Airport Panic Among Passengers
Bear Enters Airport Panic Among Passengers