ಬಾಳೆಹೊನ್ನೂರು: ಚಲಿಸುತ್ತಿದ್ದಂತೆಯೇ ಕಳಚಿದ ಕೆಎಸ್‌ಆರ್‌ಟಿಸಿ ಬಸ್ ಚಕ್ರ

This Article Written by / Prathapa thirthahalli / ಮಾರ್ಚ್ 27, 2026

KSRTC Bus Rear Wheel Detaches Near Balehonnur 

KSRTC Bus ಎನ್.ಆರ್.ಪುರ: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪ ಪ್ರಯಾಣಿಕರಿಂದ ತುಂಬಿದ್ದ ಬಸ್ ಚಲಿಸುತ್ತಿದ್ದಾಗಲೇ ಚಕ್ರ ಕಳಚಿ ಬಿದ್ದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. 

indian post office : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ವ್ಯಾಪ್ತಿಯ ಅಂಚೆ ಕಚೇರಿಗಳ ವಹಿವಾಟು ತಾತ್ಕಾಲಿಕ ಸ್ಥಗಿತ | ಕಾರಣವೇನು

ಬಾಳೆಹೊನ್ನೂರಿನ ಕಾಲಭೈರವೇಶ್ವರ ದೇವಸ್ಥಾನದ ಬಳಿ  ಘಟನೆ ಸಂಭವಿಸಿದೆ. ಬಸ್ ವೇಗವಾಗಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಚಕ್ರ ಬೇರ್ಪಟ್ಟಿದೆ. ತಕ್ಷಣ ಎಚ್ಚೆತ್ತ ಚಾಲಕ ಬಸ್ಸನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಹತ್ತಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಈ ಘಟನೆಯಿಂದ ರೊಚ್ಚಿಗೆದ್ದ ಪ್ರಯಾಣಿಕರು ಮತ್ತು ಸಾರ್ವಜನಿಕರು ಸಾರಿಗೆ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಕಿಲೋಮೀಟರ್ ಓಡಿ ಗುಜರಿ ಸ್ಥಿತಿಯಲ್ಲಿರುವ ಹಳೇ ಬಸ್ಸುಗಳನ್ನು ಸರಿಯಾದ ತಾಂತ್ರಿಕ ತಪಾಸಣೆ ಮಾಡದೆ ರಸ್ತೆಗೆ ಇಳಿಸುತ್ತಿರುವುದೇ ಇಂತಹ ಘಟನೆಗಳಿಗೆ ಮೂಲ ಕಾರಣ ಎಂದು ಕಿಡಿಕಾರಿದ್ದಾರೆ.

ಸ್ಥಳಕ್ಕೆ ಬಾಳೆಹೊನ್ನೂರುಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಕ್ರಮ ಕೈಗೊಂಡಿದ್ದಾರೆ.

KSRTC Bus Rear Wheel Detaches Near Balehonnur 

KSRTC Bus Rear Wheel Detaches Near Balehonnur 
Rear Wheel Detaches Near Balehonnur 
shivamogga car decor sun control house
shivamogga car decor sun control house

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Balehonnur,KSRTC Bus Accident,Malenadu Today News,NR Pura News,Transport Department Negligence,Wheel Detached

ಮುಂದಿನ ಸುದ್ದಿ ಒದಿ