ಬಿಡಾರದ ಆನೆಗಳಿಗೂ ತಟ್ಟಿದ ಇರಾನ್​ ಯುದ್ದ, ಏನಿದು ಸುದ್ದಿ 

ಶಿವಮೊಗ್ಗ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ಎದುರಾಗಿರುವ ಅನಿಲ ಬಿಕ್ಕಟ್ಟು ಇದೀಗ ಮಲೆನಾಡಿನ ಸಕ್ರೆಬೈಲು ಆನೆ ಬಿಡಾರಕ್ಕೂ ತಟ್ಟಿದೆ. ಗ್ಯಾಸ್ ಕೊರತೆಯಿಂದಾಗಿ ಆನೆಗಳ ಆಹಾರ ತಯಾರಿಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅನಿವಾರ್ಯವಾಗಿ ಮಾವುತರು ಮತ್ತು ಕಾವಾಡಿಗರು ಸೌದೆ ಒಲೆಗಳ ಮೊರೆ ಹೋಗಿದ್ದಾರೆ.

ಶಿವಮೊಗ್ಗ : ಚಿನ್ನ ಖರೀದಿಸುವ ಮುನ್ನ ಈ ಗೋಲ್ಡ್​ ರೇಟಿನ ದರಪಟ್ಟಿ ಒಮ್ಮೆ ಗಮನಿಸಿ!

ಸಕ್ರೆಬೈಲು ಬಿಡಾರದಲ್ಲಿ ಪ್ರಸ್ತುತ ಸುಮಾರು 24 ಆನೆಗಳಿದ್ದು, ಅವುಗಳಿಗೆ ಪ್ರತಿದಿನ ಕ್ವಿಂಟಾಲ್​​ಗಟ್ಟಲೆ ಹುರುಳಿ ಅನ್ನ ಸೇರಿದಂತೆ ಪೌಷ್ಟಿಕ ಆಹಾರವನ್ನು ಬೇಯಿಸಿ ನೀಡಬೇಕಾಗುತ್ತದೆ. ಇಷ್ಟು ದಿನ ಗ್ಯಾಸ್ ಒಲೆಗಳ ಮೂಲಕ ಸುಲಭವಾಗಿ ಆಹಾರ ಸಿದ್ಧಪಡಿಸಲಾಗುತ್ತಿತ್ತು.ಆದರೆ ಇದೀಗ ಅಷ್ಟೂ ಅನೆಗಳಿಗೆ ಆಹಾರ ತಯಾರಿಸಲು ಹೆಚ್ಚಿನ ಪ್ರಮಾಣದ ಗ್ಯಾಸ್​​ನ  ಅಗತ್ಯವಿರುವುದರಿಂದ ಗ್ಯಾಸ್​ ಕೊರತೆಯನ್ನು ಅರಿತ ಕಾವಾಡಿಗರು ಸೌಧೆ ಒಲೆಯನ್ನು ಅವಲಂಭಿಸಿದ್ದಾರೆ.

ಕಾವಾಡಿಗರು ಮತ್ತು ಮಾವುತರು ಅಡುಗೆ ಮಾಡಲು, ಈಗ ಹಳೆಯ ಕೆಡ್ಡಾದಲ್ಲಿ ಬಿದ್ದಿರುವ ಒಣ ಕಟ್ಟಿಗೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ನೆಲದಲ್ಲಿ ಗುಂಡಿ ತೆಗೆದು ಸಾಂಪ್ರದಾಯಿಕ ಒಲೆಗಳನ್ನು ನಿರ್ಮಿಸಿಕೊಂಡಿರುವ ಸಿಬ್ಬಂದಿ, ಅಲ್ಲಿಯೇ ಆನೆಗಳಿಗೆ ಬೇಕಾದ ಆಹಾರವನ್ನು ಬೇಯಿಸುತ್ತಿದ್ದಾರೆ. 

Iran Israel War Impact Gas Shortage Hits Sakrebailu

Iran Israel War Impact Gas Shortage Hits Sakrebailu
Iran Israel War Impact Gas Shortage Hits Sakrebailu
shivamogga car decor sun control house
shivamogga car decor sun control house