ಸೈಡ್​ಲ್ಲಿ ಹೋಗ್ತಿದ್ದವನಿಗೆ ಗುದ್ದಿ, ಕಂಬಕ್ಕೆ ಡಿಕ್ಕಿಯಾಗಿ ಜಜ್ಜಿ ದಂತಾದ ಕಾರು! ಓರ್ವ ಸಾ*ವು

Published: 26 ಮಾರ್ಚ್ 2026, 12:09 ಅಪರಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

ಶಿವಮೊಗ್ಗ ಸುದ್ದಿ / ಹೊಳೆಹೊನ್ನೂರು ಸಮೀಪ ಜಂಬರಘಟ್ಟೆ ಬಳಿ ಕಾರೊಂದು ಅಪ್​ಸೆಟ್​ ಆಗಿ, ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದವರೊಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದೆ. ನಿನ್ನೆದಿನ ಈ ಘಟನೆ ನಡೆದಿದ್ದು ಕಲ್ಲಜ್ಜನಾಳ್ ಗ್ರಾಮದ ನಿವಾಸಿ 60 ವರ್ಷದ ರಾಜಪ್ಪ ಸಾವನ್ನಪ್ಪಿದವರು.  road incident Near Jambaraghatte Pedestrian dead as Speeding Car Loses Control…

ಶಿವಮೊಗ್ಗ ಸುದ್ದಿ / ಹೊಳೆಹೊನ್ನೂರು ಸಮೀಪ ಜಂಬರಘಟ್ಟೆ ಬಳಿ ಕಾರೊಂದು ಅಪ್​ಸೆಟ್​ ಆಗಿ, ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದವರೊಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದೆ. ನಿನ್ನೆದಿನ ಈ ಘಟನೆ ನಡೆದಿದ್ದು ಕಲ್ಲಜ್ಜನಾಳ್ ಗ್ರಾಮದ ನಿವಾಸಿ 60 ವರ್ಷದ ರಾಜಪ್ಪ ಸಾವನ್ನಪ್ಪಿದವರು. 

road incident Near Jambaraghatte Pedestrian dead as Speeding Car Loses Control
road incident Near Jambaraghatte Pedestrian dead as Speeding Car Loses Control

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಹಾರಾಟ ನಿಗದಿಯಂತೆ ನಡೆಯುತ್ತಾ? ಕುತೂಹಲ ಮೂಡಿಸಿದ ಸಂಸದರ ಮಾತು!

ರಾಜಪ್ಪ ಹೊಳೆಹೊನ್ನೂರು ಕಡೆಯಿಂದ ಕಲ್ಲಜ್ಜನಾಳ್ ಕಡೆಗೆ ನಡ್ಕೊಂಡು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಚನ್ನಗಿರಿ ಮಾರ್ಗವಾಗಿ ಶಿವಮೊಗ್ಗದ ಕಡೆಗೆ ಬಂದ ಕಾರು, ಚಾಲಕನ ಹತೋಟಿ ತಪ್ಪಿ ರಾಜಪ್ಪರಿಗೆ ಡಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ರಾಜಪ್ಪ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಡಿಕ್ಕಿಯಾದ ಕಾರು, ಅದೇ ಸ್ಪೀಡ್​ನಲ್ಲಿ , ಅಲ್ಲೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ತೆಂಗಿನ ಮರಕ್ಕೆ ಗುದ್ದಿ ಸೈಡಿಗೆ ಉರುಳಿದೆ. ಇನ್ನೂ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

road incident Near Jambaraghatte Pedestrian dead as Speeding Car Loses Control
road incident Near Jambaraghatte Pedestrian dead as Speeding Car Loses Control

ಶಿವಮೊಗ್ಗ : ಅಸಲಿಗೆ ಅಡಿಕೆ ರೇಟು ಕರೆಕ್ಟ್​ ಆಗಿ ಎಷ್ಟಿದೆ!? ಏನಾಗ್ತಿದೆ?

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

road incident Near Jambaraghatte Pedestrian dead as Speeding Car Loses Control

END OF STORY

ajjimane ganesh

Senior Journalist | Malenadu Today
✓ Verified Journalist