New Income Tax Rules ನವದೆಹಲಿ: ದಶಕಗಳ ಹಳೆಯ ಆದಾಯ ತೆರಿಗೆ ಕಾಯ್ದೆಗೆ ಗುಡ್‌ಬೈ ಹೇಳುವ ಸಮಯ ಬಂದಿದೆ. ಕಳೆದ ವರ್ಷ ಸಂಸತ್ತು ಅಂಗೀಕರಿಸಿದ ಸರಳೀಕೃತ ನೇರ ತೆರಿಗೆ ಕಾನೂನನ್ನು ಜಾರಿಗೆ ತರಲು ಕೇಂದ್ರ ನೇರ ತೆರಿಗೆ ಮಂಡಳಿ (CBDT) ಆದಾಯ ತೆರಿಗೆ ನಿಯಮಗಳು-2026 ಅನ್ನು ಅಧಿಕೃತವಾಗಿ ಅಧಿಸೂಚಿಸಿದೆ. ಈ ಹೊಸ ಚೌಕಟ್ಟು ಏಪ್ರಿಲ್ 1, 2026 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.
ಶಿವಮೊಗ್ಗ : ಚಿನ್ನ ಖರೀದಿಸುವ ಮುನ್ನ ಈ ಗೋಲ್ಡ್ ರೇಟಿನ ದರಪಟ್ಟಿ ಒಮ್ಮೆ ಗಮನಿಸಿ!
ಬೆಂಗಳೂರು ಸೇರಿ 8 ನಗರಗಳ ನಿವಾಸಿಗಳಿಗೆ ಭರ್ಜರಿ ಲಾಭ
ಹೊಸ ನಿಯಮದ ಪ್ರಕಾರ, ಮನೆ ಬಾಡಿಗೆ ಭತ್ಯೆ (HRA) ವಿನಾಯಿತಿ ಮಿತಿಯಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಕೇವಲ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಶೇ. 50ರಷ್ಟು ಹೆಚ್‌ಆರ್‌ಎ ವಿನಾಯಿತಿಯನ್ನು ಈಗ ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ ನಗರಗಳಿಗೂ ವಿಸ್ತರಿಸಲಾಗಿದೆ. ಉಳಿದ ನಗರಗಳ ನಿವಾಸಿಗಳಿಗೆ ಶೇ. 40ರಷ್ಟು ವಿನಾಯಿತಿ ಮುಂದುವರಿಯಲಿದೆ. ಆದರೆ, ಇನ್ನು ಮುಂದೆ ಬಾಡಿಗೆದಾರ ಮತ್ತು ಮಾಲೀಕರ ನಡುವಿನ ಸಂಬಂಧದ ವಿವರವನ್ನು ಕಡ್ಡಾಯವಾಗಿ ಘೋಷಿಸಬೇಕಾಗುತ್ತದೆ .
819 ರಿಂದ 536ಕ್ಕೆ ಇಳಿದ ಸೆಕ್ಷನ್‌ಗಳು
1961ರ ಹಳೆಯ ಕಾಯ್ದೆಯಲ್ಲಿದ್ದ ಸಂಕೀರ್ಣ ಭಾಷೆ ಮತ್ತು ಗೊಂದಲಕಾರಿ ನಿಯಮಗಳನ್ನು ಹೊಸ ಕಾಯ್ದೆ ಕಿತ್ತೊಗೆದಿದೆ. ಈ ಹಿಂದೆ 819 ರಷ್ಟಿದ್ದ ಸೆಕ್ಷನ್‌ಗಳನ್ನು 536ಕ್ಕೆ ಇಳಿಸಲಾಗಿದೆ. ಅಷ್ಟೇ ಅಲ್ಲದೆ, ಲಕ್ಷಾಂತರ ಪದಗಳ ಗಂಟನ್ನು ಬಿಡಿಸಿ, ಮೊದಲ ಬಾರಿಗೆ 39 ಕೋಷ್ಟಕಗಳು (Tables) ಮತ್ತು 40 ಸೂತ್ರಗಳನ್ನು (Formulas) ಪರಿಚಯಿಸಲಾಗಿದೆ. ಇದು ಸಾಮಾನ್ಯ ತೆರಿಗೆದಾರರಿಗೂ ಸುಲಭವಾಗಿ ಅರ್ಥವಾಗುವಂತೆ ಮಾಡಲಿದೆ.
New Income Tax Rules ಬಂಡವಾಳ ಲಾಭ ಮತ್ತು ಆಡಿಟರ್‌ಗಳ ಜವಾಬ್ದಾರಿ ಹೆಚ್ಚಳ
ಹೊಸ ನಿಯಮಗಳು ಷೇರು ಮಾರುಕಟ್ಟೆ ವಹಿವಾಟು ಮತ್ತು ಬಂಡವಾಳ ಲಾಭದ ಮೇಲಿನ ತೆರಿಗೆ ನಿಯಮಗಳನ್ನು ಬಿಗಿಗೊಳಿಸಿವೆ. ಪಾನ್ ಕಾರ್ಡ್‌ಗಳ (PAN) ನಕಲಿ ಪತ್ತೆ ಹಚ್ಚುವ ಮತ್ತು ವಿದೇಶಿ ಆದಾಯದ ತೆರಿಗೆ ಕ್ರೆಡಿಟ್ ಕ್ಲೈಮ್‌ಗಳನ್ನು ಪರಿಶೀಲಿಸುವ ಹೆಚ್ಚಿನ ಜವಾಬ್ದಾರಿಯನ್ನು ಆಡಿಟರ್‌ಗಳ ಮೇಲೆ ಹೊರಿಸಲಾಗಿದೆ. ಷೇರುಗಳ ಪರಿವರ್ತನೆಯ ಸಂದರ್ಭದಲ್ಲಿ ಅವುಗಳನ್ನು ಎಷ್ಟು ಕಾಲ ಹಿಡಿದಿಟ್ಟುಕೊಳ್ಳಲಾಗಿದೆ ಎಂಬುದನ್ನು ಲೆಕ್ಕಹಾಕಲು ಹೊಸ ಸ್ಪಷ್ಟನೆಯನ್ನು ನೀಡಲಾಗಿದೆ.
New Income Tax Rules 2026 50% HRA for Bengaluru

