ಅಪರಿಚಿತರು ಪೋನ್​ ಕೇಳ್ದಾಗ ಕೊಡ್ತಿದ್ದೀರಾ, ಹಾಗಾದ್ರೆ ಈ ಸುದ್ದಿ ನೋಡಿ

ಭದ್ರಾವತಿ :  ಕೆಲ ಅಪರಿಚಿತ ವ್ಯಕ್ತಿಗಳು ನಂಬರ್​​ ಇರುವ ಚೀಟಿಯೊಂದನ್ನು ಹಿಡಿದು ನಮ್ಮ ಬಳಿ ಫೋನ್​ ಇಲ್ಲ ನನ್ನ ಪರಿಚಯಸ್ತರಿಗೆ ಪೋನ್​ ಮಾಡಬೇಕು ಪೋನ್ ಕೊಡ್ತೀರ ಎಂದು ಸಪ್ಪೆ ಮುಖ ಮಾಡಿಕೊಂಡು ಕೇಳ್ತಾರೆ, ಆಗ ಮಾನವೀಯತೆ ದೃಷ್ಟಿಯಿಂದ ಏನ್​​ ಸಮಸ್ಯೆ ಇದೆಯೋ ಏನೋ ಎಂದು ನಾವು ಕೊಟ್ಟು ಬಿಡುತ್ತೇವೆ, ಆದರೆ ಕೆಲವೊಮ್ಮೆ ಆ ಮಾನವೀಯತೆಯೇ ನಮಗೆ ಮುಳ್ಳಾಗಬುದು. ಅದಕ್ಕೆ ನಿದರ್ಶನವೆಂಬಂತೆ ಇಲ್ಲೊಬ್ಬ ಆಸಾಮಿ ಪೋನ್​ ಮಾಡುವುದಾಗಿ ಪೋನ್​ ಕೇಳಿ ಅದನ್ನು ಕದ್ದೊಯ್ಯಲು ಯತ್ನಿಸಿದ್ದಾನೆ.

ಶಿವಮೊಗ್ಗ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ನಾಪತ್ತೆ; ಎಲ್ಲಾದರು ಕಂಡರೆ ಪೊಲೀಸರಿಗೆ ತಿಳಿಸಿ

ಹೌದು ಈ ಘಟನೆ ನಡೆದಿದ್ದು ಭದ್ರಾವತಿಯ ನ್ಯೂಟೌನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ  ದೂರುದಾರ ವ್ಯಕ್ತಿಯ ಬಳಿ ಬಂದ ಅಪರಿಚಿತನೊಬ್ಬ, ತುರ್ತು ಕಾರಣ ನೀಡಿ ಫೋನ್ ಮಾಡುವ ನೆಪದಲ್ಲಿ ಮೊಬೈಲ್ ಪಡೆದಿದ್ದಾನೆ. ಸಹಾಯ ಮಾಡುವ ಉದ್ದೇಶದಿಂದ ದೂರುದಾರರು ಫೋನ್ ನೀಡಿದ ತಕ್ಷಣ, ಆ ವ್ಯಕ್ತಿ ಮೊಬೈಲ್ ಹಿಡಿದು ಪರಾರಿಯಾಗಲು ಯತ್ನಿಸಿದ್ದಾನೆ. 

ಆದರೆ, ತಕ್ಷಣವೇ ಜಾಗರೂಕರಾದ ದೂರುದಾರರು ಕಳ್ಳನನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. 

Bhadravati Mobile Snatching Attempt Fails

Bhadravati Mobile Snatching Attempt Fails
Bhadravati Mobile Snatching Attempt Fails
shivamogga car decor sun control house
shivamogga car decor sun control house