SHIVAMOGGA NEWS TODAY

ಶಿವಮೊಗ್ಗ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ನಾಪತ್ತೆ; ಎಲ್ಲಾದರು ಕಂಡರೆ ಪೊಲೀಸರಿಗೆ ತಿಳಿಸಿ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ  : ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ನಾಪತ್ತೆ ಪ್ರಕರಣಗಳು ವರದಿಯಾಗಿದ್ದು, ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಶಿರಾಳಕೊಪ್ಪ ಮತ್ತು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಗಳು ಸಂಭವಿಸಿವೆ.

ಶಿವಮೊಗ್ಗ: ಅಡುಗೆ ಅನಿಲ ಅಭಾವಕ್ಕೆ ಆತಂಕ ಬೇಡ; ಸಮಸ್ಯೆ ಇದ್ದಲ್ಲಿ ಈ ಹೆಲ್ಪ್​​​ಲೈನ್​ಗೆ ಫೋನ್​ ಮಾಡಿ 

ಶಿರಾಳಕೊಪ್ಪದ ಗಣೇಶನಾಯ್ಕ್ ನಾಪತ್ತೆ

ಬಿದರಿಕೊಪ್ಪ ನಿವಾಸಿ ಶೋಭಾಬಾಯಿ ಅವರ ಪತಿ ಗಣೇಶನಾಯ್ಕ್ (40 ವರ್ಷ) ಅವರು ಕಳೆದ ಮಾರ್ಚ್ 4 ರಂದು ಶಿರಾಳಕೊಪ್ಪಕ್ಕೆ ಹೋಗುವುದಾಗಿ ಮನೆಯಿಂದ ಹೊರಟವರು ಈವರೆಗೆ ಮರಳಿ ಬಂದಿಲ್ಲ. ಸುಮಾರು 5.5 ಅಡಿ ಎತ್ತರವಿರುವ ಇವರು, ಕೋಲು ಮುಖ ಮತ್ತು ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಕಣ್ಮರೆಯಾದ ಸಮಯದಲ್ಲಿ ಇವರು ಕಪ್ಪು ಬಣ್ಣದ ಪ್ಯಾಂಟ್ ಹಾಗೂ ನೀಲಿ ಬಣ್ಣದ ಶರ್ಟ್ ಧರಿಸಿದ್ದರು. ಇವರ ಬಗ್ಗೆ ಮಾಹಿತಿ ಇರುವವರು ಶಿರಾಳಕೊಪ್ಪ ಪೊಲೀಸ್ ಠಾಣೆಯ ಸಂಖ್ಯೆ: 8722983310 ಅಥವಾ 9480803367 ಗೆ ಕರೆ ಮಾಡಬಹುದು. 

ಚಿಕಿತ್ಸೆಗೆ ಬಂದಿದ್ದ ಮಂಜುನಾಥ್ ನಾಪತ್ತೆ

ಮತ್ತೊಂದು ಪ್ರಕರಣದಲ್ಲಿ, ಹೊಸಪೇಟೆ ಜಿಲ್ಲೆಯ ಕೌಲಪೇಟೆ ಮೂಲದ ಮಂಜುನಾಥ ಡಿ (40 ವರ್ಷ) ಎಂಬುವವರು ಶಿವಮೊಗ್ಗ ನಗರದಿಂದ ಕಾಣೆಯಾಗಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಇವರನ್ನು ಫೆಬ್ರವರಿ 19 ರಂದು ಚಿಕಿತ್ಸೆಗಾಗಿ ಶಿವಮೊಗ್ಗದ ಶ್ರೀಧರ ನರ್ಸಿಂಗ್ ಹೋಂಗೆ ಕರೆತರಲಾಗಿತ್ತು. ಅಲ್ಲಿಂದ ಇವರು ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ದುಂಡು ಮುಖ ಹೊಂದಿರುವ ಇವರು ಗಿಳಿ ಹಸಿರು ಬಣ್ಣದ ಫುಲ್ ಸ್ಲೀವ್ ಶರ್ಟ್ ಧರಿಸಿದ್ದಾರೆ. ಸುಳಿವು ಸಿಕ್ಕಲ್ಲಿ ಜಯನಗರ ಪೊಲೀಸ್ ಠಾಣೆ (9480803300/ 08182-261416) ಸಂಪರ್ಕಿಸಲು ಕೋರಲಾಗಿದೆ.

Two Men Missing in Shimoga

Two Men Missing in Shimoga
Two Men Missing in Shimoga
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.