ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಪರಾಭವ ನಾಮ ಸಂವತ್ಸರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಬಿದಿಗೆ ತಿಥಿಯು ಶನಿವಾರ ಬೆಳಗಿನ ಜಾವ 4.21ರ ವರೆಗೆ ಇರಲಿದೆ. ರೇವತಿ ನಕ್ಷತ್ರ ಶನಿವಾರ ಬೆಳಗಿನ ಜಾವದವರೆಗೆ ಇರಲಿದ್ದೆ ಅಮೃತ ಘಳಿಗೆ ರಾತ್ರಿ 1.51 ರಿಂದ 3.24ರ ವರೆಗೆ ಒದಗಿಬರಲಿದೆ. ರಾಹುಕಾಲ ಬೆಳಗ್ಗೆ 10.30 ರಿಂದ 12.00ರ ವರೆಗೆ ಹಾಗೂ ಯಮಗಂಡ ಕಾಲ ಮಧ್ಯಾಹ್ನ 3.00 ರಿಂದ 4.30ರ ವರೆಗೆ ಇರಲಿದೆ.

ಇವತ್ತಿನ ರಾಶಿಭವಿಷ್ಯ
ಮೇಷ / ಕೆಲಸದ ವಿಚಾರದಲ್ಲಿ ಹೊಸ ಸುದ್ದಿ, ಸಂಬಂಧಿಕರೊಂದಿಗೆ ಮನಸ್ತಾಪ, ಅನಾರೋಗ್ಯ ಕಾಡಬಹುದು. ಕೌಟುಂಬಿಕ ಸಮಸ್ಯೆ ಎದುರಾಗಲಿದ್ದು ವ್ಯಾಪಾರ ವಹಿವಾಟುಗಳಲ್ಲಿ ಸಾಮಾನ್ಯ ದಿನ. ಉದ್ಯೋಗ ಕ್ಷೇತ್ರದಲ್ಲಿ ನಿರುತ್ಸಾಹ
ವೃಷಭ / ಶುಭ ಕಾರ್ಯಗಳು ಜರುಗಲಿವೆ. ಅತ್ಯಮೂಲ್ಯವಾದ ಮಾಹಿತಿಯೊಂದು ಲಭ್ಯವಾಗಲಿದ್ದು ಆಪ್ತರೊಂದಿಗೆ ಉತ್ತಮ ಒಡನಾಟ ಇರಲಿದೆ. ಹೊಸ ಉದ್ಯೋಗಾವಕಾಶ, ವಸ್ತು ಲಾಭ. ವ್ಯಾಪಾರದಲ್ಲಿ ಲಾಭದಾಯಕ ವಾತಾವರಣ ಇರಲಿದ್ದು ಉದ್ಯೋಗದಲ್ಲಿ ಮಹತ್ವದ ಬೆಳವಣಿಗೆಗಳು ಕಂಡುಬರಲಿವೆ.

ಮಿಥುನ /ಹೊಸ ಉದ್ಯೋಗ. ವಿವಿಧ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಅವಕಾಶ. ಶುಭ ಸುದ್ದಿ, ಆಸ್ತಿ ವಿವಾದಗಳು ಬಗೆಹರಿಯಲಿವೆ. ವ್ಯಾಪಾರದಲ್ಲಿ ಉತ್ತಮ ಲಾಭ ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಉತ್ಸಾಹದಿಂದ ಕಾರ್ಯನಿರ್ವಹಿಸುವರು.
ಕರ್ಕಾಟಕ / ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಖರ್ಚು ಹಾಗೂ ಶ್ರಮ ಹೆಚ್ಚಾಗಲಿದೆ. ಕೈಗೊಂಡ ಕೆಲಸ ಅರ್ಧದಲ್ಲೇ ಕೈಬಿಡುವ ಸನ್ನಿವೇಶ ಎದುರಾಗಬಹುದು. ಹಠಾತ್ ಪ್ರಯಾಣ , ವ್ಯಾಪಾರದಲ್ಲಿ ಒತ್ತಡ ಕಂಡುಬರಲಿವೆ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆ.
ಸಿಂಹ / ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ಆರ್ಥಿಕ ಅಡಚಣೆ, ಸಾಲದ ಪ್ರಯತ್ನ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿದ್ದು ಅನಿರೀಕ್ಷಿತವಾಗಿ ಪ್ರಯಾಣ ಮಾಡಬೇಕಾಗುತ್ತದೆ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಲಿದೆ.
ಕನ್ಯಾ / ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ಮನ್ನಣೆ ದೊರೆಯಲಿದೆ. ಸಂತೋಷದ ಸುದ್ದಿ ಕೇಳುವಿರಿ, ಹೊಸ ವಾಹನ ಹಾಗೂ ಜಮೀನು ಖರೀದಿಸುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಅಭಿವೃದ್ಧಿ. ಉದ್ಯೋಗದಲ್ಲಿರುವವರಿಗೆ ಕೆಲಸದ ಒತ್ತಡದಿಂದ ಕೊಂಚ ವಿರಾಮ ಸಿಗಲಿದೆ.

21 ವರ್ಷದ ಯುವಕನಿಗೆ 20 ವರ್ಷ ಜೈಲು, 50 ಸಾವಿರ ದಂಡ! ಶಿವಮೊಗ್ಗ ಕೋರ್ಟ್ ಆದೇಶ
ತುಲಾ / ಹೊಸ ಉದ್ಯೋಗ. ಸಮಾಜದಲ್ಲಿ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದ್ದು ದೂರದ ಊರುಗಳಿಂದ ಬಹುಮುಖ್ಯವಾದ ಮಾಹಿತಿಯೊಂದು ಬರಲಿದೆ. ವ್ಯಾಪಾರ ವಹಿವಾಟು ಮತ್ತಷ್ಟು ವಿಸ್ತರಣೆಯಾಗಲಿವೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರೆಯಲಿದೆ.
ವೃಶ್ಚಿಕ / ಕೈಗೊಳ್ಳಬೇಕಾಗಿದ್ದ ಪ್ರಯಾಣ ಮುಂದೂಡಲ್ಪಡಲಿವೆ. ದೈಹಿಕ ಹಾಗೂ ಮಾನಸಿಕ ಶ್ರಮ. ವ್ಯಾಪಾರ ವಹಿವಾಟು ನಿಧಾನಗತಿಯಲ್ಲಿ ಸಾಗಲಿದ್ದು ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾಗಬಹುದು.
ಧನುಸ್ಸು / ಅನಿರೀಕ್ಷಿತವಾಗಿ ಪ್ರಯಾಣ. ನಿರೀಕ್ಷಿಸದ ರೀತಿಯಲ್ಲಿ ಹಣ ಖರ್ಚಾಗಲಿದೆ. ಕೌಟುಂಬಿಕ ಜವಾಬ್ದಾರಿ ಹೊರೆ ಹೆಚ್ಚಾಗಲಿದೆ. ಮನೆಯಲ್ಲಿ ಹಾಗೂ ಹೊರಗಡೆ ಹಲವು ಸಮಸ್ಯೆ ಎದುರಿಸಬೇಕಾಗಲಿದ್ದು ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಅಡೆತಡೆ ಎದುರಾಗಲಿವೆ.
ಮಕರ / ಕೆಲವು ಕಾರ್ಯಗಳು ಯಾವುದೇ ವಿಘ್ನಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಹೊಸ ಉದ್ಯೋಗ ಪಡೆಯುವ ಅವಕಾಶವಿದ್ದು ಭೂಮಿಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥವಾಗಲಿವೆ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದು ವ್ಯಾಪಾರದಲ್ಲಿ ಅಭಿವೃದ್ಧಿ, ಉದ್ಯೋಗ ಸ್ಥಳದಲ್ಲಿ ಅನುಕೂಲಕರ ವಾತಾವರಣ ಇರಲಿದೆ.
ಕುಂಭ / ಕೆಲವು ಕೆಲಸಗಳನ್ನು ಮುಂದೂಡುವರು. ಕುಟುಂಬ ಸದಸ್ಯರೊಂದಿಗೆ ಮನಸ್ತಾಪ. ದೇವಸ್ಥಾನಗಳಿಗೆ ಭೇಟಿ, ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿನ ನಿರಾಸೆ. ಉದ್ಯೋಗದಲ್ಲಿ ಬದಲಾವಣೆ.
ಮೀನ /ಪ್ರಭಾವ ಹಾಗೂ ಜನಪ್ರಿಯತೆ ಹೆಚ್ಚಾಗಲಿದೆ. ಶುಭ ಸುದ್ದಿ ಬೀಳಲಿದೆ, ಅಂದುಕೊಂಡ ಕೆಲಸ ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವರು. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಸಂಪೂರ್ಣ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ.

ಸೈಬರ್ ಬುಲ್ಲಿಯಿಂಗ್ ಬಗ್ಗೆ ಶಿವಮೊಗ್ಗ ಎಸ್ಪಿ ಪೋಸ್ಟ್! ಡಿಜಿಟಲ್ ಕಿರುಕುಳದ ಬಗ್ಗೆ ನಿಮಗೆ ಗೊತ್ತಾ!
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.