ನೋಡ್ತಾ..ನೋಡ್ತಾ ನಡೆದು ಹೋಯ್ತು ಮೂರು ಅಪ*ಘಾತ! ಬಸ್​, ಕಾರು, ಆಂಬುಲೆನ್ಸ್​, ಒಮಿನಿ, ಆಟೋ!!

ಶಿವಮೊಗ್ಗ /ಮಲೆನಾಡು ಟುಡೆ ಸುದ್ದಿ / ಯುಗಾದಿ ಹಬ್ಬದ ದಿನವೇ ಶಿವಮೊಗ್ಗದಲ್ಲಿ ಮೂರು ಕಡೆಗಳಲ್ಲಿ ಅಪ*ಘಾತ ಸಂಭವಿಸಿದೆ. ಶಿವಮೊಗ್ಗ ತಾಲ್ಲೂಕಿನ ಗಾಜನೂರು, ನಗರದ ಉಷಾ ನರ್ಸಿಂಗ್ ಹೋಂ ಸಮೀಪ ಹಾಗೂ ಸಾಗರ ತಾಲ್ಲೂಕಿನ ಆನಂದಪುರದ ಬಳಿಯಲ್ಲಿ ಭೀಕರ ಅಪಘಾ*ತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. 

Malenadu Today Shivamogga
vehicle collisions across Shivamogga

ಗಾಜನೂರು ಬಳಿ ಅಪಘಾತ ಓರ್ವರ ಸಾವು

ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ರಾಸ್  ಬಳಿ ಮಂಗಳೂರಿನಿಂದ ಬರುತ್ತಿದ್ದ ಮದನೇಶ್ವರ ಖಾಸಗಿ ಬಸ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವಕ ಮೃತಪಟ್ಟಿದ್ದಾನೆ. ಮೃತರು ಶಿವಮೊಗ್ಗದ ಬುದ್ಧನಗರ ನಿವಾಸಿ 28 ವರ್ಷದ ಪ್ರೇಮ್ ಕುಮಾರ್. ಶಿವಮೊಗ್ಗದಿಂದ ಗಾಜನೂರು ಕಡೆಗೆ ತೆರಳುತ್ತಿದ್ದ ಆಟೋದಲ್ಲಿ ಪ್ರೇಮ್ ಕುಮಾರ್ ಜೊತೆಗೆ 21 ವರ್ಷದ ಮನೋಜ್, ಪವನ್ ಹಾಗೂ ಗಿರೀಶ್ ಪ್ರಯಾಣಿಸುತ್ತಿದ್ದರು. ಎದುರಿನಿಂದ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಆಟೋ ಸಂಪೂರ್ಣವಾಗಿ ಜಖಂಗೊಂಡಿದ್ದು, ಗಾಯಗೊಂಡಿರುವವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಢಲಾಗುತ್ತಿದೆ.

ಉಷಾ ನರ್ಸಿಂಗ್ ಹೋಂ ಬಳಿ ಆಂಬುಲೆನ್ಸ್​ ಕಾರು ಡಿಕ್ಕಿ

ನಗರದ ಉಷಾ ನರ್ಸಿಂಗ್ ಹೋಂ ಸಮೀಪ ಮಾರ್ಚ್ 19 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬ್ರೀಝಾ ಕಾರು ಮತ್ತು ಖಾಸಗಿ ಅಂಬ್ಯುಲೆನ್ಸ್ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಕಾಶೀಪುರದಿಂದ ಹನ್ಸವಾಡಿಗೆ ತೆರಳುತ್ತಿದ್ದ ಕಾರಿಗೆ ಸೊರಬ ಕಡೆಯಿಂದ ಬಂದ  ಆಂಬ್ಯುಲೆನ್ಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಮೂರು ಬಾರಿ ಪಲ್ಟಿಯಾಗಿ ನಿಂತಿದ್ದು, ಕಾರಿನಲ್ಲಿದ್ದ ಸುರೇಶ್, ದೀಪಾ, 14 ವರ್ಷದ ಮಗು ಹಾಗೂ 74 ವರ್ಷದ ವೃದ್ಧ ಕಿಶನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂಗೊಂಡಿದ್ದು, ಹಿಂದಿನ ಗಾಜು ಪುಡಿಯಾಗಿದೆ. ಈ ಕುರಿತು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Malenadu Today Shivamogga
vehicle collisions across Shivamogga

ಆನಂದಪುರದಲ್ಲಿ ಭೀಕರ ಅಪಘಾ*ತ

ಆನಂದಪುರ ಸಮೀಪದ ಐಗಿನ ಬೈಲು ಕ್ರಾಸ್ ಬಳಿ ಮಾರುತಿ ಓಮಿನಿ ಹಾಗೂ 407 ಲಗೇಜ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಆನಂದಪುರದಿಂದ ಸಾಗರ ಮಾರ್ಗವಾಗಿ ಚಲಿಸುತ್ತಿದ್ದ ಓಮಿನಿ ಕಾರು ಮತ್ತು ಸಾಗರದಿಂದ ಆನಂದಪುರ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನ ಡಿಕ್ಕಿಯಾಗಿದ್ದು, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[su_image_carousel source=”media: 33250,33254,33253,33252,33251″ controls_style=”light” crop=”16:9″ target=”self”]

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

vehicle collisions across Shivamogga
vehicle collisions across Shivamogga

what were the consequences of the multiple vehicle collisions across Shivamogga district?