ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು

ಶಿವಮೊಗ್ಗ | ಶಿವಮೊಗ್ಗದ ಗೋಲ್ಡನ್ ಸಿಟಿ ಲೇಔಟ್‌ನಲ್ಲಿ ಕಟ್ಟಡ ಕಾಮಗಾರಿ ವೇಳೆ ಎರಡನೇ ಮಹಡಿಯಿಂದ ಬಿದ್ದು ಗಾರೆ ಮೇಸ್ತ್ರಿಯೊಬ್ಬರು ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮೃತರನ್ನು ರೇವಣ್ಣ (67) ಎಂದು ಗುರುತಿಸಲಾಗಿದೆ.

ಶಿವಮೊಗ್ಗ:  ಯುವಕನಿಗೆ 20 ವರ್ಷ ಜೈಲು ಶಿಕ್ಷೆ, 1 ಲಕ್ಷ ದಂಡ, ಕಾರಣವೇನು ಗೊತ್ತಾ,,?  

ಡೆಂಟಲ್ ಕಾಲೇಜು ಸಮೀಪವಿರುವ ಗೋಲ್ಡನ್ ಸಿಟಿ ಲೇಔಟ್‌ನ ಸೈಟ್ ನಂಬರ್ 69ರಲ್ಲಿ ನೂತನ ಮನೆ ನಿರ್ಮಾಣವಾಗುತ್ತಿತ್ತು. ನಿನ್ನೆ ರೇವಣ್ಣ ಅವರು ಎರಡನೇ ಮಹಡಿಯ ಆರ್‌ಸಿಸಿ (RCC) ಸ್ಲ್ಯಾಬ್‌ಗೆ ನೀರು ಹರಿಸಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಇದರಿಂದ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. 

ಗಾಯಗೊಂಡ ರೇವಣ್ಣ ಅವರನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ  ಬೇರೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga Construction Worker Dies

Shivamogga  Sharavathi Project Sagara PoliceShimoga Court Shivamogga Careers Ripponpete Shivamogga Unknown Body Found Near Tuppur Hybrid Vegetable Seeds Shikaripura Laborer Dies Shivamogga Court Bhadravati Court Unidentified Man Soraba Ghana Detains Bhadravathi Arson Anandapura Shivamogga Shivaratri Rules Swathantryada Ota Court Orders Walk-in Interview Shivamogga Court KFD Fatality Shivamogga Round up
Shivamogga
shivamogga car decor sun control house
car decor sun control house