ಶಿವಮೊಗ್ಗ: ಜಿಲ್ಲೆಯ ಹರಿಗೆ ಸಮೀಪದ ಭದ್ರಾ ಚಾನೆಲ್‌ನಲ್ಲಿ ಈಜಲು ಹೋದ 13 ವರ್ಷದ ಬಾಲಕಲನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಮೃತನನ್ನು ಹರಿಗೆ ನಿವಾಸಿ, ಎಂಟನೇ ತರಗತಿ ವಿದ್ಯಾರ್ಥಿ ಶಂಕರ್ ಎಂದು ಗುರುತಿಸಲಾಗಿದೆ.
ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು
ಶನಿವಾರ ಮಧ್ಯಾಹ್ನ ಶಂಕರ್ ತನ್ನ ಐವರು ಸ್ನೇಹಿತರೊಂದಿಗೆ ಮಲವಗೊಪ್ಪದ ಚನ್ನಬಸವೇಶ್ವರ ದೇವಸ್ಥಾನದ ಸಮೀಪವಿರುವ ಭದ್ರಾ ಚಾನೆಲ್‌ಗೆ ಈಜಲೆಂದು ತೆರಳಿದ್ದನು. ಗೆಳೆಯರೆಲ್ಲರೂ ನೀರಿನಲ್ಲಿ ಆಟವಾಡಿ ದಡಕ್ಕೆ ಮರಳಿದರೂ, ಶಂಕರ್ ಮಾತ್ರ ಮೇಲೆ ಬರಲಿಲ್ಲ. ಇದರಿಂದ ಗಾಬರಿಗೊಂಡ ಸಹಪಾಠಿಗಳು ತಾವೇ ಹುಡುಕಾಟ ನಡೆಸಿದ್ದಾರೆ. ಆದರೆ ಸಂಜೆಯಾದರೂ ಆತ ಪತ್ತೆಯಾಗದಿದ್ದಾಗ ಮನೆಯವರಿಗೆ ವಿಷಯ ತಿಳಿದಿದೆ.
ಬಾಲಕ ನಾಪತ್ತೆಯಾದ ಸ್ಥಳದಿಂದ ಶೋಧ ಕಾರ್ಯ ಆರಂಭಿಸಲಾಗಿತ್ತು. ಆದರೆ ನಿನ್ನೆ ಘಟನೆ ನಡೆದ ಜಾಗದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಚಾನೆಲ್ ಟ್ಯೂಬ್ ಬಳಿ ಶಂಕರ್‌ನ ಮೃತದೇಹ ಪತ್ತೆಯಾಗಿದೆ.
Shivamogga 13 Year Old Boy Drowns in Channel


Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.