Shivamogga 112 Emergency Response story / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲಾ ಪೊಲೀಸ್ ವ್ಯಾಪ್ತಿಯ 112 ವಿಭಾಗದ ಪೊಲೀಸರು ತಮಗೆ ಬರುವ ಪ್ರತಿಕರೆಯನ್ನು ಸಹ ಮುತುವರ್ಜಿಯಿಂದ ನಿರ್ವಹಿಸುತ್ತಾರೆ ಎಂಬುದಕ್ಕೆ ಪೂರಕ ಎಂಬಂತೆ ಕೆಲವೊಂದು ಮಾನವೀಯ ಘಟನೆಗಳು ನಡೆದಿವೆ. ಆ ಬಗೆಗಿನ ಮಾಹಿತಿ ಇಲ್ಲಿದ್ದು ಪೊಲೀಸರು ಅನಾಮಧೇಯ ಶವ ಪತ್ತೆ, ಕೌಟುಂಬಿಕ ಕಲಹ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಗಲಾಟೆ ಸೇರಿದಂತೆ ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಸಾಗರ: ಸಿಗಂದೂರು ಸೇತುವೆ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಥಾರ್ ಜೀಪ್
ಅಪರಿಚಿತ ಮೃತದೇಹ ರವಾನೆ
ತುಂಗಾನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ಗೋಪಿಶೆಟ್ಟಿ ಕೆರೆ ಏರಿ ಬಳಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರು 112 ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಇಆರ್ ವಿ ಸಿಬ್ಬಂದಿ, ಮೃತದೇಹದ ಬಗ್ಗೆ ಮಾಹಿತಿ ಕಲೆಹಾಕಿ ಠಾಣೆಯ ಗಮನಕ್ಕೆ ತಂದರು. ತದನಂತರ ಆಂಬ್ಯುಲೆನ್ಸ್ ಮೂಲಕ ಶವವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆ ಮಾಡಿದರು.
ಮದುವೆ ವಿಚಾರದ ಗಲಾಟೆ ಶಮನ
ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮದುವೆಗೆ ಹುಡುಗಿ ನೋಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗುತ್ತಿರುವ ಬಗ್ಗೆ 112 ಗೆ ದೂರು ಬಂದಿತ್ತು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿ ಗಲಾಟೆಯನ್ನು ನಿಯಂತ್ರಿಸಿ, ಎರಡೂ ಕಡೆಯವರಿಗೆ ಸೂಕ್ತ ತಿಳುವಳಿಕೆ ಮತ್ತು ಎಚ್ಚರಿಕೆ ನೀಡಿ ಸಮಸ್ಯೆಯನ್ನ ಸ್ಥಳದಲ್ಲಿಯೇ ಇತ್ಯರ್ಥಪಡಿಸಿದ್ದಾರೆ.
ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ, ವಿಡಿಯೋ ನೋಡಿ
ಯುವಕರಿಗೆ ಎಚ್ಚರಿಕೆ
ಇನ್ನೂ ನ್ಯೂಟೌನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಜೇಡಿಕಟ್ಟೆ ಚಾನೆಲ್ ಬಳಿ ಯುವಕರು ಗಲಾಟೆ ಮಾಡುತ್ತಿರುವ ಕುರಿತು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಯುವಕರು ಹೋಳಿ ಆಡಿ ಬಂದು ಸ್ನಾನ ಮಾಡುತ್ತಿದ್ದು, ಯಾವುದೇ ಗಲಾಟೆ ಮಾಡಿಕೊಂಡಿಲ್ಲ ಎಂಬುದು ಗೊತ್ತಾಗಿದೆ. ಆದಾಗ್ಯು ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಯುವಕರಿಗೂ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿದರು

ಕೌಟುಂಬಿಕ ಸಮಸ್ಯೆಗೆ ಸ್ಪಂದನೆ
ತುಂಗಾನಗರ ಸ್ಟೆಷನ್ ಲಿಮಿಟ್ಸ್ನಲ್ಲಿ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು 112 ಪೊಲೀಸರಿಗೆ ಕರೆ ಮಾಡಿ ದೂರು ಹೇಳಿದ್ದರು. ಈ ಸಂಬಂಧ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಇಆರ್ ವಿ ಸಿಬ್ಬಂದಿ, ದೂರುದಾರರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದರು. ಪ್ರಕರಣ ಯಾವುದೇ ರೀತಿಯಲ್ಲಿದ್ದರೂ 112 ಸಿಬ್ಬಂದಿ ನೆರವಾಗುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಯ್ತು
ಮದ್ಯವ್ಯಸನಿಗೆ ನೆರವು
ಆನಂದಪುರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮಾರ್ಚ್ 06 ರಂದು ಅನಾಮಧೇಯ ವ್ಯಕ್ತಿಯೊಬ್ಬ ವಿಪರೀತ ಮದ್ಯಪಾನ ಮಾಡಿ ಸುಸ್ತಾಗಿ ಬಿದ್ದಿದ್ದರು. ಈ 112 ಗೆ ಕರೆ ಬಂದ ಬೆನ್ನಲ್ಲೆ ಸ್ಥಳಕ್ಕೆ ಬಂದ ಪೊಲೀಸರು ಆತನನ್ನ ವಿಚಾರಿಸಿದ್ದಾರೆ. ಮದ್ಯಪಾನದಿಂದಾಗಿ ಸುಸ್ತಾಗಿ ಬಿದ್ದಿರುವುದಾಗಿ ಆತ ಹೇಳಿದ್ದ. ಹೀಗಾಗಿ ಆತನ ತಾಯಿಯನ್ನು ಸ್ಥಳಕ್ಕೆ ಕರೆಸಿ, ಸಂತ್ರಸ್ತನನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
