ನನ್ನ ಮಗಳನ್ನು ಅಪಘಾತದಲ್ಲಿ ಕಳೆದುಕೊಂಡ ನೋವು ನನಗಿದೆ, ಆರಗ ಜ್ಞಾನೇಂದ್ರ

ಹಂಚಿಕೊಳ್ಳಿ
WhatsApp Facebook X Telegram
Araga Jnanendra Visits Sanketh's Family
Araga Jnanendra Visits Sanketh's Family

Araga Jnanendra ಶಿವಮೊಗ್ಗ: ನನ್ನ ಮಗಳಿಗೆ ಕೇವಲ 5 ವರ್ಷ ವಯಸ್ಸಾಗಿದ್ದಾಗ ಆಕೆಯನ್ನು ಅಪಘಾತದಲ್ಲಿ ಕಳೆದುಕೊಂಡು ನೋವನ್ನು ಅನುಭವಿಸಿದ್ದೇನೆ. ಮಕ್ಕಳನ್ನು ಕಳೆದುಕೊಂಡಾಗ ಪೋಷಕರಿಗೆ ಆಗುವ ವೇದನೆ ಏನು ಎಂಬುದು ನನಗೆ ಗೊತ್ತು, ಎಂದು ಶಾಸಕಆರಗ ಜ್ಞಾನೇಂದ್ರ ಹೇಳಿದರು. 

ಶಿವಮೊಗ್ಗ ಮಾರಿಕಾಂಬ ಜಾತ್ರೆ, ತಾಳಗುಪ್ಪ ಬೆಂಗಳೂರು ವಿಶೇಷ ಟ್ರೈನ್​

ನಗರದ ಊರಗಡೂರಿನಲ್ಲಿ ಇತ್ತೀಚೆಗೆ ಹತ್ಯೆಗೀಡಾದ 10ನೇ ತರಗತಿಯ ವಿದ್ಯಾರ್ಥಿ ಸಂಕೇತ್ ನಿವಾಸಕ್ಕೆ ಭೇಟಿ ನೀಡಿದ ಅವರು, ಮೃತನ ಪೋಷಕರಿಗೆ ಧೈರ್ಯ ತುಂಬಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಕ್ಕಳನ್ನು ಕಳೆದುಕೊಂಡಾಗ ತುಂಬಾ ಬೇಸರವಾಗುತ್ತೆ ನನ್ನ ಮಗಳಿಗೆ 5 ವರ್ಷವಿದ್ದಾಗ ಅಪಘಾತದಲ್ಲಿ ಆಕೆ  ತೀರಿ ಹೋದಳು. ಆಗ ನನಗೆ ಬಹಳಾ ಬೇಸರವಾಗಿತ್ತು. ಹಾಗೆಯೇ ಇಲ್ಲಿ  ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡು ಮಗನ ಬಗ್ಗೆ ಕನಸು ಕಟ್ಟಿಕೊಂಡಿದ್ದ ಪೋಷಕರ ಕನಸು ಭಗ್ನಗೊಂಡಿದೆ. ಎಂದರು,

ಕೊಲೆಗಡುಕರು ಅಪ್ರಾಪ್ತರು ಎಂಬ ಕಾರಣಕ್ಕೆ ಯಾವುದೇ ರಿಯಾಯಿತಿ ನೀಡಬಾರದು. ಸರ್ಕಾರ ಕೂಡಲೇ ಈ ಪ್ರಕರಣಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಿ ಕಾನೂನು ಹೋರಾಟ ನಡೆಸಬೇಕು, ಎಂದು ಆಗ್ರಹಿಸಿದರು. ಅಲ್ಲದೆ, ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿ ದೊಡ್ಡದಾಗಿರುವುದರಿಂದ ಮತ್ತೊಂದು ಹೊಸ ಠಾಣೆಯ ಅಗತ್ಯವಿದೆ ಎಂದು ಒತ್ತಾಯಿಸಿದರು. 

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಲ್ಪಸಂಖ್ಯಾತ ಸಮುದಾಯಕ್ಕೆ ಅತಿಯಾದ ಧೈರ್ಯ ಬಂದಿದೆ. ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ಅಕ್ರಮ ದಂಧೆಗಳು ಮತ್ತು ಗಾಂಜಾ ಹಾವಳಿ ಶಿವಮೊಗ್ಗದಲ್ಲಿ ಹೆಚ್ಚಾಗಿದೆ ಎಂದು ಆರೋಪಿಸಿದರು. ಅಲ್ಪಸಂಖ್ಯಾತ ಏರಿಯಾಗಳಿಗೆ ಹೋಗಲು ಪೊಲೀಸರು ಉದಾಸೀನ ಮಾಡುತ್ತಿದ್ದಾರೆ ಮತ್ತು ಕೆಲವು ಸಿಬ್ಬಂದಿ ಅಕ್ರಮ ದಂಧೆಕೋರರೊಂದಿಗೆ ಶಾಮೀಲಾಗಿದ್ದಾರೆ. ಅಂತವರನ್ನು ಕೂಡಲೇ ವರ್ಗಾವಣೆ ಮಾಡದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಅವರು ಎಚ್ಚರಿಸಿದರು.

Araga Jnanendra Visits Sanketh’s Family

Malenadu Today Shivamogga
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor