ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್.ಎಸ್. ಸುಂದರೇಶ್ ಅವರ ಅಧಿಕಾರಾವಧಿಯನ್ನು ರಾಜ್ಯ ಸರ್ಕಾರವು ಮುಂದಿನ ಆದೇಶದವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಸರ್ಕಾರ ಫೆ 27 ರಂದು ಹೊರಡಿಸಿರುವ ಆದೇಶದಲ್ಲಿರುವಂತೆ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರುಗಳ ಅವಧಿಯನ್ನು ಮುಂದುವರೆಸಲಾಗಿದೆ. ಈ ಆದೇಶದ ಅನ್ವಯ ಹೆಚ್.ಎಸ್. ಸುಂದರೇಶ್ ಅವರ ಅಧ್ಯಕ್ಷ ಸ್ಥಾನವು ಇಂದೇ ಮುಕ್ತಾಯಗೊಳ್ಳಬೇಕಿತ್ತಾದರೂ, ಸರ್ಕಾರದ ಹೊಸ ನಿರ್ಣಯದಿಂದಾಗಿ ಅವರು ಮುಂದಿನ ಆದೇಶದವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.
SUDA Chairman HS Sundaresh Term Extended


