ಊರುಗಡೂರಿನ ಬಾಲಕನ ಹತ್ಯೆ ಪ್ರಕರಣ, ಇದುವರೆಗೆ ಏನೆಲ್ಲಾ ಆಯ್ತು

Shivamogga Uragaduru case ಶಿವಮೊಗ್ಗ :  ಕ್ರಿಕೇಟ್ ಆಟದಲ್ಲಿ ಆದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಶಿವಮೊಗ್ಗದ ಹೊರವಲಯದ ಊರುಗಡೂರಿನಲ್ಲಿ ನಡೆದಿದೆ.ಎಸ್.ಎಸ್.ಎಲ್ ಸಿ ಓದುತ್ತಿದ್ದ ವಿದ್ಯಾರ್ಥಿ ಊರುಗಡೂರಿನ ನಿವಾಸಿ  ಕೊಲೆಯಾದ ದುರ್ದೈವಿಯಾಗಿದ್ದಾನೆ. ಸ್ನೇಹಿತನ ಮೇಲೆ ಅಪ್ರಾಪ್ತ ಬಾಲಕರ ಗುಂಪು ಹಲ್ಲೆ ನಡೆಸುತ್ತಿದ್ದಾಗ ಜಗಳ ಬಿಡಿಸಲು ಮೃತ ಬಾಲಕ ಹೋದಾಗ,  ಗುಂಪು ಮಾರಾಣಾಂತಿಕವಾಗಿ ಹಲ್ಲೆ ನಡೆಸಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಘಟನೆಯಿಂದಾಗಿ ಉರುಗಡೂರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಘಾನಾದಲ್ಲಿ ನಾಟಿ ಔಷಧಿ ಮಾರಲು ಹೋದ ಶಿವಮೊಗ್ಗದ 24 ಮಂದಿಗೆ ಆಘಾತ. ಏನಿದು ಘಟನೆ

 Shivamogga Uragaduru case ಕ್ರಿಕೇಟ್​ ಆಟದಲ್ಲಿ ಆದ ಗಲಾಟೆ ಕೊಲೆಯಲ್ಲಿ ಅಂತ್ಯ

ಶಿವಮೊಗ್ಗ ನಗರದಲ್ಲಿ ಜನರು ಮಾರಿಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗುವ ಹೊತ್ತಿಗೆ  ನಗರದಹೊರವಲಯಲ್ಲಿ ನಡೆದ ಬಾಲಕನ ಕೊಲೆ ಘಟನೆ ಆತಂಕ ಸೃಷ್ಟಿಸಿದೆ. ಶಿವಮೊಗ್ಗ ಹೊರ ವಲಯದ ಉರುಗಡೂರಿನಲ್ಲಿ ಬಾಲಕನ ಕೊಲೆ ಮಾಡಿರುವ ಘಟನೆ ಕಪ್ಪು ಚುಕ್ಕೆಯಂತೆ ಭಾದಿಸಿತು. ಹೌದು ಕಳೆದ ರಾತ್ರಿ ಶಿವಮೊಗ್ಗ ನಗರದ ಹೊರವಲಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಯನ್ನು ಅಪ್ರಾಪ್ತ ಬಾಲಕರ ಗುಂಪೊಂದು ಹತ್ಯೆ ಮಾಡಿದೆ. ಸ್ಥಳಕ್ಕೆ ಹಾಗೂ ಶವಾಗಾರಕ್ಕೆ ಎಸ್ಪಿ ನಿಖಿಲ್ ಬಿ ಹಾಗೂ ಶಾಸಕ ಎಸ್ಎನ್ ಚನ್ನಬಸಪ್ಪರವರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಇಲ್ಲಿನ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ  ತನ್ನ ಶಾಲೆಯಲ್ಲಿನ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಹೋಗುತ್ತಿದ್ದ. ಈ ವೇಳೇ ದಾರಿಯಲ್ಲಿ ಐದಾರು ಬಾಲಕರ ಗುಂಪು ಮೃತ ಬಾಲಕನ ಇನ್ನೊಬ್ಬ ಸ್ನೇಹಿತನ ಮೇಲೆ ಹಲ್ಲೆ ನಡೆಸಿದೆ. ಸ್ನೇಹಿತನ ಮೇಲಿನ ಹಲ್ಲೆ ತಪ್ಪಿಸಿ ಜಗಳ ಬಿಡಿಸಲು ಹೋದ ಸಂದರ್ಭದಲ್ಲಿ ಮೃತ ಬಾಲಕನಿಗೆ ಗುಂಪು ಕೈ ಕಾಲುಗಳಿಂದ ಥಳಿಸಿದೆ. ಈ ವೇಳೆ ಗಂಭೀರವಾಗಿ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಬಾಲಕ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯ್ತಾದರೂ ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾನೆ. 

ಕೃತ್ಯ ಎಸಗಿದ ಎಲ್ಲರೂ  ಸಹ ಬಾಲಕ ಓದುತ್ತಿರುವ ಶಾಲೆಯ ಡ್ರಾಪ್ ಔಟ್ ವಿದ್ಯಾರ್ಥಿಗಳಾಗಿದ್ದಾರೆ.ಈ ಬಗ್ಗೆ ಪ್ರತಿಕ್ರೀಯೆ ನೀಡಿರುವ ಎಸ್ಪಿ ನಿಖಿಲ್ ರವರು ಈಗಾಗಲೇ 7 ಜನ ಅಪ್ರಾಪ್ತರನ್ನು ಕೊಲೆ ಸಂಬಂಧ ಬಂಧಿಸಲಾಗಿದೆ. ಕ್ರಿಕೆಟ್ ಆಟದಲ್ಲಿ ನಡೆದಿದ್ದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮೃತ ಬಾಲಕನ ಸ್ನೇಹಿತನ  ಬಳಿ ಆರೋಪಿಗಳು ಕ್ರಿಕೆಟ್ ಆಟವಾಡಿದ್ದ ಹಿನ್ನೆಲೆಯಲ್ಲಿ ಗಲಾಟೆ ಮಾಡುತ್ತಿದ್ದರು. ಈ ವೇಳೆ  ಮೃತ ಬಾಲಕ ಗಲಾಟೆ ಬಿಡಿಸಲು ತೆರಳಿದ್ದ. ಆ ವೇಳೆ ಗಲಾಟೆ ನಡೆದು ಬಾಲಕನ ಮರ್ಡರ್ ಆಗಿದೆ. ಕೈಯಲ್ಲಿ ಗುದ್ದಿ ಹಲ್ಲೆ ಮಾಡಿರುವ ಹಿನ್ನೆಲೆಯಲ್ಲಿ ಸಾವಾಗಿದೆ. ಕಳೆದೆರೆಡು ದಿನಗಳ ಹಿಂದೆಯಷ್ಟೇ ಕ್ರಿಕೆಟ್ ಆಟ ಆಡಿದ್ದರು. ಈ ಹಿನ್ನೆಲೆಯಲ್ಲಿ ಗಲಾಟೆ ನಡೆದು ಕೊಲೆ ನಡೆದಿದೆ. ಕೊಲೆ ಮಾಡಿರುವ ಅಪ್ರಾಪ್ತ ಬಾಲಕರು ಗಾಂಜಾ ಸೇವನೆ ಮಾಡಿರುವ ಬಗ್ಗೆ ಪರೀಕ್ಷೆ ನಡೆಸಲಾಗುವುದು. ಊರುಗಡೂರಿನಲ್ಲಿ ವಿಶೇಷ ಬೀಟ್ ವ್ಯವಸ್ಥೆ ಮಾಡಲಾಗುವುದು. ಔಟ್ ಪೊಸ್ಟ್ ತೆರೆಯಲು ಕೂಡ ಕ್ರಮ ವಹಿಸಲಾಗಿದೆ ಎಂದು ನಿಖಿಲ್ ಹೇಳಿದ್ದಾರೆ.

SP Action 7 Arrested Shivamogga Murder Case
 Shivamogga Uragaduru ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ನೀಡಿದ ಎಸ್​ಪಿ ನಿಖಿಲ್​ ಬಿ

 Shivamogga Uragaduru case ರಾಜ್ಯ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ಘೋಷಣೆ

ಇನ್ನು ಬಾಲಕನ ಸಾವಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ 15 ಲಕ್ಷ ಪರಿಹಾರ ಘೋಷಿಸಿದ್ದಾರೆ.ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೂಲಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪರಿಹಾರ ಘೋಷಿಸಿದರು. ಹತ್ತು ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹತ್ತು ಲಕ್ಷ ಹಾಗೂ  ಶಿಕ್ಷಣ ಇಲಾಖೆಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ.  ಘಟನೆ ಸಂಬಂಧ ಜಿಲ್ಲೆಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಘಟನೆ ನಡೆದ ಬಡಾವಣೆಯಲ್ಲೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಡ್ರಗ್ಸ್ ಸೇವನೆ ಹಾಗೂ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸಲಾಗಿದೆ. ಗಾಂಜಾ ವಿರುದ್ಧ ಸಮರ ಸಾರಲಾಗಿದ್ದು, ಈ ಪ್ರಕರಣದಲ್ಲೂ ಕಂಡು ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಜಾತ್ರೆ ಹಾಗೂ ಮುಂಬರುವ ಹಬ್ಬದ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಊರುಗಡೂರು ಭಾಗದಲ್ಲಿ ಔಟ್ ಪೋಸ್ಟ್ ತೆರೆದು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದು ಕವಳಕಟ್ಟಿ ಹೇಳಿದ್ದಾರೆ.

Urugaduru case CM Siddaramaiah Announces 15 Lakh
 Shivamogga Urugaduru case ಘಟನೆ ಕುರಿತಾಗಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

 Shivamogga Uragaduru case ಹತ್ಯೆ ನಂತರದ ದಿನದ ಬೆಳವಣಿಗೆ

ವಿದ್ಯಾರ್ಥಿಯ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ರಾತ್ರಿಯೇ ಮೆಗ್ಗಾನ್ ಆಸ್ಪತ್ರೆ ಹಾಗೂ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಪೊಲೀಸ್ ಇಲಾಖೆಯ ವೈಫಲ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು ಬಾಲಕನ ಹತ್ಯೆ ಅತ್ಯಂತ ನೋವಿನ ಸಂಗತಿ. ಹಿಂದೂಗಳ ಹತ್ಯೆ ನಡೆದಾಗ ಅವರ ಹೆಣ ಹೊರಲು ಪೊಲೀಸರು ಬರುತ್ತಾರೆ. ಹಬ್ಬಗಳ ಸಮಯದಲ್ಲಿ ಕಿಡಿಗೇಡಿಗಳು ಬೈಕ್‌ನಲ್ಲಿ ಗುಂಪು ಗುಂಪಾಗಿ ಬಂದು ದಾಂಧಲೆ ಮಾಡುತ್ತಿದ್ದರೂ ಪೊಲೀಸರು ಲಘುವಾಗಿ ಪರಿಗಣಿಸುತ್ತಿದ್ದಾರೆ. ಕೇವಲ ಆರೋಪಿಗಳನ್ನು ಬಂಧಿಸುತ್ತೇವೆ ಎಂಬ ಸಿದ್ಧ ಉತ್ತರ ನೀಡಿದರೆ ಹೋದ ಜೀವ ಮರಳಿ ಬರುತ್ತದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಶವವನ್ನು ಊರುಗಡೂರಿನ ಮುಖ್ಯ ರಸ್ತೆಯಲ್ಲಿ ಪ್ರತಿಭಟಿಸಲಾಯಿತು. ಬಡಾವಣೆಯ ಎರಡು ಕೋಮಿನ ಜನರ ಶವಾಗಾರದಲ್ಲಿ ಜಮಾಯಿಸಿದ್ದರು. ಘಟನೆಗೆ ಎರಡು ಕೋಮಿನವರು ಆಕ್ರೋಶ ವ್ಯಕ್ತಪಡಿಸಿದರು.. ನಮ್ಮ ಊರಿನಲ್ಲಿ ಈ ರೀತಿ ನಡೆಯಬಾರದಿತ್ತು. ಇಲ್ಲಿ ಎರಡೂ ಕೋಮಿನ ಜನರು ಬಹಳ ಅನ್ಯೋನ್ಯತೆಯಿಂದ ಇದ್ದೆವೆ. ಆದರೆ ಹೊರಗಿನಿಂದ ಬಂದವರಿಂದ ಈ ರೀತಿ ಆಗುತ್ತಿದೆ. ಇದನ್ನು ಸರಿಪಡಿಸುವ ಕೆಲಸ ಎರಡೂ ಕೋಮಿನ ಜನರು ಮಾಡುತ್ತಿದ್ದೆವೆ. ನಾವು ಬಡಾವಣೆಯಲ್ಲಿ ಅಣ್ಣ, ತಮ್ಮಂದಿರಂತೆ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಮೃತ ವಿದ್ಯಾರ್ಥಿಯ ಮನೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಸಾಂತ್ವನ ಹೇಳಿದರು. ಎಸ್ಪಿ ನಿಖಿಲ್ ಮತ್ತು ಡಿಸಿ ಪ್ರಭುಲಿಂಗ ಕವಳಿಕಟ್ಟಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಉರುಗಡೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ. ಈವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

 Shivamogga Uragaduru case full deatiles

Shivamogga Uragaduru case full details
Shivamogga Uragaduru case full details