ಆನಂದಪುರ: ಅಡಿಕೆ ವ್ಯಾಪಾರಿ ವಿನಯ್ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

ಹಂಚಿಕೊಳ್ಳಿ
WhatsApp Facebook X Telegram
Anandapura 27-Year-Old Vinay Dies
Anandapura 27-Year-Old Vinay Dies

ಸಾಗರ: ತಾಲೂಕಿನ ಆನಂದಪುರದಲ್ಲಿ  ಅಡಿಕೆ ವ್ಯಾಪಾರ ಮಾಡುತ್ತಿದ್ದ ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅಶೋಕ ರಸ್ತೆಯ ನಿವಾಸಿ ನಾಗರಾಜ್ ಎಂಬುವವರ ಪುತ್ರ ವಿನಯ್ (27) ಮೃತಪಟ್ಟ ದುರ್ದೈವಿ. 

ಕಳೆದ ಕೆಲವು ದಿನಗಳಿಂದ ವಿನಯ್ ತೀವ್ರ ಮೌನಕ್ಕೆ ಜಾರಿದ್ದರು ಎಂದು ಹೇಳಲಾಗಿದೆ. ಅವರು ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ ಮತ್ತು ಮನಸ್ಸಿನಲ್ಲಿದ್ದ ನೋವು ಅಥವಾ ವಿಚಾರಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಮನೆಯವರು ಎಷ್ಟೇ ಮಾತನಾಡಿಸಲು ಪ್ರಯತ್ನಿಸಿದರೂ ಸಕಾರಾತ್ಮಕವಾಗಿ ಸ್ಪಂದಿಸದೆ ಒಬ್ಬಂಟಿಯಾಗಿಯೇ ಇರುತ್ತಿದ್ದರು ಎಂದು ವರದಿಯಾಗಿದೆ. 

ಶಿವಮೊಗ್ಗ, ಸಾಗರ, ಶಿರಸಿ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ದರ ಪಟ್ಟಿ ಇಲ್ಲಿದೆ

ನಿನ್ನೆ ಬೆಳಿಗ್ಗೆಯಿಂದ ಸಂಜೆಯವರೆಗೂ ವಿನಯ್ ಕೋಣೆಯಿಂದ ಹೊರಬಾರದಿರುವುದನ್ನು ಗಮನಿಸಿದ ಪೋಷಕರಿಗೆ ಅನುಮಾನ ಮೂಡಿದೆ. ತಕ್ಷಣ ಕೋಣೆಯೊಳಗೆ ಹೋಗಿ ನೋಡಿದಾಗ ವಿನಯ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ

ಘಟನೆಗೆ ಸಂಬಂಧಿಸಿದಂತೆ ಆನಂದಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Anandapura 27-Year-Old Vinay Dies

Anandapura 27-Year-Old Vinay Dies
Anandapura 27-Year-Old Vinay Dies
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor