Daily Horoscope Kannada / ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ/ ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ , ಶಿಶಿರ ಋತು, ಮಾಘ ಮಾಸದ ಈ ದಿನದಂದು ಸಂಜೆ 5.48ರ ವರೆಗೆ ಅಮಾವಾಸ್ಯೆ ಇರುತ್ತದೆ ಹಾಗೂ ತದನಂತರ ಫಾಲ್ಗುಣ ಶುದ್ಧ ಪಾಡ್ಯಮಿ ಆರಂಭವಾಗುತ್ತದೆ. ರಾತ್ರಿ 9.52ರ ವರೆಗೆ ಧನಿಷ್ಠ ನಕ್ಷತ್ರವಿದ್ದು, ನಂತರ ಶತಭಿಷ ನಕ್ಷತ್ರ ಪ್ರವೇಶವಾಗಲಿದೆ,ರಾಹುಕಾಲ ಮಧ್ಯಾಹ್ನ 3.00 ಗಂಟೆಯಿಂದ 4.30ರ ವರೆಗೆ ಇರಲಿದ್ದು, ಯಮಗಂಡ ಕಾಲ ಬೆಳಗ್ಗೆ 9.00ರಿಂದ 10.30ರ ವರೆಗೆ ಇರುತ್ತದೆ.
ದಿನಭವಿಷ್ಯ
(Feb 17 2026 Daily Horoscope Kannada Rashi Bhavishya & Rahukala Details ,ಇಂದಿನ ರಾಶಿ ಭವಿಷ್ಯ (17-02-2026): ಮೇಷ, ಕರ್ಕಾಟಕ, ಮೀನ ರಾಶಿಯವರಿಗೆ ಧನಲಾಭ. ಮಕರ ರಾಶಿಗೆ ಭೂಲಾಭ. ನಿಮ್ಮ ರಾಶಿಯ ಇಂದಿನ ಫಲ, ಪಂಚಾಂಗ ಮತ್ತು ರಾಹುಕಾಲದ ಸಂಪೂರ್ಣ ವಿವರ ಇಲ್ಲಿದೆ)

ಮೇಷ / ಅತ್ಯಂತ ಉತ್ಸಾಹದ ದಿನ, ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಲಿದ್ದಾರೆ. ವಸ್ತು ಲಾಭ, ವ್ಯಾಪಾರದಲ್ಲಿ ವಿಸ್ತರ, ಉದ್ಯೋಗಿಗಳಿಗೆ ಪದೋನ್ನತಿ,ಒತ್ತಡ ನಿವಾರಣೆಯಾಗಲಿವೆ.
ವೃಷಭ / ಆರ್ಥಿಕ ವಿಷಯಗಳಲ್ಲಿ ಸ್ವಲ್ಪ ಮಟ್ಟಿನ ನಿರಾಸೆ, ದೈಹಿಕ ಶ್ರಮದ ದಿನ, ಬಂಧುಗಳೊಂದಿಗೆ ಮನಸ್ತಾಪ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.
ಮಿಥುನ / ಅಂದುಕೊಂಡ ಕೆಲಸ ಮುಂದೆ ಸಾಗದು, ಆಲೋಚನೆಗಳಲ್ಲಿ ಅಸ್ಥಿರತೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಶ್ರಮದ ದಿನ
ಕರ್ಕಾಟಕ / ಅತ್ಯಂತ ಶುಭದಾಯಕ ದಿನ, ಹೊಸ ಕೆಲಸಗಳಿಗೆ ಚಾಲನೆ , ಧನಲಾಭ ಹಾಗೂ ವಸ್ತು ಲಾಭ, ಶುಭವಾರ್ತೆ ಕೇಳಿಬರಲಿದ್ದು, ಉದ್ಯೋಗದಲ್ಲಿ ಪ್ರಭಾವ ಮತ್ತು ವರ್ಚಸ್ಸು ಹೆಚ್ಚಲಿದ್ದು, ವ್ಯಾಪಾರದಲ್ಲಿ ಅಭಿವೃದ್ಧಿ
ಶಿವಮೊಗ್ಗ, ಸಾಗರ, ಶಿರಸಿ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ದರ ಪಟ್ಟಿ ಇಲ್ಲಿದೆ
ಸಿಂಹ / ಮಾತುಕತೆ ಅಥವಾ ಚರ್ಚೆ ಫಲಪ್ರದವಾಗಲಿದ್ದು, ಮನೆಯಲ್ಲಿ ಹಾಗೂ ಹೊರಗಡೆ ಅನುಕೂಲಕರ ವಾತಾವರಣ. ಹೊಸ ವಿಷಯ ಕಲಿಯುವ ಆಸಕ್ತಿ ಮೂಡಲಿದ್ದು, ವಸ್ತು ಲಾಭ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಉತ್ಸಾಹ
ಕನ್ಯಾ / ಇಕ್ಕಟ್ಟಿನ ಪರಿಸ್ಥಿತಿ ಅಥವಾ ತೊಂದರೆ ಎದುರಾಗಬಹುದು. ದೂರ ಪ್ರಯಾಣ, ಕೌಟುಂಬಿಕ ಸಮಸ್ಯೆ ಕಾಡಬಹುದು. ಅನಾರೋಗ್ಯದ ಸೂಚನೆ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ ಹೆಚ್ಚಾಗಲಿದೆ.

ತುಲಾ / ಇಂದು ಪ್ರಮುಖ ಕೆಲಸ ಮುಂದೂಡುವ ಸಾಧ್ಯತೆಯಿದ್ದು, ತಾವು ತೆಗೆದುಕೊಂಡ ನಿರ್ಧಾರಗಳಲ್ಲಿ ಬದಲಾವಣೆ ಮಾಡಿಕೊಳ್ಳಲಿದ್ದಾರೆ. ದೈವ ದರ್ಶನ, ಬಂಧುಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ
ವೃಶ್ಚಿಕ / ಹೊಸ ಕೆಲಸಗಳಿಗೆ ನಾಂದಿ ಹಾಡಲಿದ್ದು, ಸಮಾಜದಲ್ಲಿ ಗೌರವ ಪಡೆಯಲಿದ್ದಾರೆ. ವಾಹನ ಖರೀದಿ ಯೋಗವಿದ್ದು, ಹಳೆಯ ವಿವಾದ ಬಗೆಹರಿಯಲಿವೆ. ಉದ್ಯೋಗ ಮತ್ತು ವ್ಯಾಪಾರ ಅತ್ಯಂತ ಉತ್ಸಾಹದಿಂದ ಸಾಗಲಿದೆ,
ಶಿವಮೊಗ್ಗ : 100 ರೂಪಾಯಿಗೆ ಸಿಗುತ್ತೆ 30 ಕೆಜಿ ಕುರಿ. ಎಲ್ಲಿ ,ಏನಿದು ಸುದ್ದಿ
ಧನು / ಕೆಲಸ ಕಾರ್ಯಗಳಲ್ಲಿ ವಿಳಂಬ, ಆರ್ಥಿಕ ಪರಿಸ್ಥಿತಿ ನಿರಾಸೆ. ಕೆಲಸದಲ್ಲಿ ಶ್ರಮ ಜಾಸ್ತಿ, ಆರೋಗ್ಯದಲ್ಲಿ ವ್ಯತ್ಯ. ವ್ಯಾಪಾರದಲ್ಲಿ ನಿರುತ್ಸಾಹ, ವರ್ಗಾವಣೆ ಸಾಧ್ಯತೆ, ಒತ್ತಡ ಹೆಚ್ಚಾಗಬಹುದು.
ಮಕರ / ಶುಭವಾರ್ತೆ, ಆರ್ಥಿಕವಾಗಿ ಅಭಿವೃದ್ಧಿ. ಕೈಗೊಂಡ ಕೆಲಸಗಳಲ್ಲಿ ಜಯ, ಭೂಮಿ ಲಾಭ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ವಾತಾವರಣ ಉತ್ಸಾಹದಾಯಕವಾಗಿರಲಿದೆ
ಕುಂಭ / ಖರ್ಚು ಹೆಚ್ಚಾಗಲಿದ್ದು, ಬಂಧು ಮಿತ್ರರೊಂದಿಗೆ ಜಗಳ. ಆರ್ಥಿಕ ವ್ಯವಹಾರ ಮಂದಗತಿಯಲ್ಲಿ ಸಾಗಲಿದ್ದು, ಹಠಾತ್ ಪ್ರಯಾಣ ಎದುರಾಗಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಲಿದ್ದು, ಕೆಲವು ಲೆಕ್ಕಾಚಾರ ಅಥವಾ ಅಂದಾಜುಗಳಲ್ಲಿ ತಪ್ಪುಗಳಾಗಬಹುದು.
ಮೀನ / ಅತ್ಯಂತ ಶುಭ ದಿನವಾಗಿದ್ದು, ಶುಭವಾರ್ತೆಗಳು ಕೇಳಿ ಬರಲಿವೆ. ಅನಿರೀಕ್ಷಿತ ಧನಲಾಭ, ಗಣ್ಯ ವ್ಯಕ್ತಿಗಳ ಪರಿಚಯ. ಹಳೆಯ ವಿವಾದ ಪರಿಹಾರವಾಗಲಿದ್ದು, ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸಲಿದ್ದಾರೆ. ಉದ್ಯೋಗಿಗಳಿಗೆ ಸಂತೋಷದ ದಿನ

ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.




