ಶಿವಮೊಗ್ಗ ಬೆಂಗಳೂರು ರೈಲು ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಯಾಗಲಿದೆ. ನೈರುತ್ಯ ರೈಲ್ವೆ ಇಲಾಖೆ ತನ್ನದೆ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ಶಿವಮೊಗ್ಗ, ಮೈಸೂರು, ಬೆಂಗಳೂರು, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳನ್ನು ಸಂಪರ್ಕಿಸುವ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದೆ.

ಈ ಸಂಬಂಧ ನೀಡಿರುವ ಪ್ರಕಟಣೆಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿ 206ರಲ್ಲಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 128 ಮತ್ತು 2ರ ಬದಲಿಗೆ ರಸ್ತೆ ಮೇಲೇತುವೆ ನಿರ್ಮಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಬೀರೂರು-ತಾಳಗುಪ್ಪ ಹಾಗೂ ಅರಸೀಕೆರೆ-ಚಿಕ್ಕಜಾಜೂರು ನಡುವೆ ರೈಲ್ವೆ ಲೈನ್ ಬ್ಲಾಕ್ ಮಾಡಲಾಗಿದೆ.
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ
ಈ ಕಾರಣದಿಂದಾಗಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ತುಮಕೂರು-ಶಿವಮೊಗ್ಗ ಟೌನ್ ರೈಲು ಸಂಖ್ಯೆ 16567 ಫೆಬ್ರವರಿ 16, 19, 23, 24 ಹಾಗೂ ಮಾರ್ಚ್ 2ರಿಂದ 5ರವರೆಗೆ ಸಂಚರಿಸುವುದಿಲ್ಲ.
ಅದೇ ರೀತಿ ಶಿವಮೊಗ್ಗ ಟೌನ್-ತುಮಕೂರು ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16568 ಫೆಬ್ರವರಿ 17, 20, 24, 25 ಹಾಗೂ ಮಾರ್ಚ್ 3ರಿಂದ 6ರವರೆಗೆ ರದ್ದಾಗಲಿದೆ.

ರೈಲ್ವೇ ಪ್ರಯಾಣಿಕರೇ ಗಮನಿಸಿ, ಈ ರೈಲು ಸಂಚಾರದಲ್ಲಿ ವಿಸ್ತರಣೆ
ಹುಬ್ಬಳ್ಳಿ ಅರಸೀಕೆರೆ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16214 ಫೆಬ್ರವರಿ 23, 24ರಂದು ರದ್ದಾಗಿದ್ದರೆ, ಅರಸೀಕೆರೆ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16213 ಫೆಬ್ರವರಿ 24 ಹಾಗೂ 25ರಂದು ಸಂಚಾರ ರದ್ದುಗೊಳಿಸಲಾಗಿದೆ.
ಶಿವಮೊಗ್ಗ ಬೆಂಗಳೂರು ರೈಲು
ಶಿವಮೊಗ್ಗ ಬೆಂಗಳೂರು ರೈಲು ಕೆಎಸ್‌ಆರ್ ಬೆಂಗಳೂರು-ಶಿವಮೊಗ್ಗ-ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 12089 ಮತ್ತು 12090 ಫೆಬ್ರವರಿ 24 ಮತ್ತು 25ರಂದು ರದ್ದಾಗಿವೆ.
ಕೆಲವು ರೈಲುಗಳ ಸಮಯದಲ್ಲೂ ಬದಲಾವಣೆ ಮಾಡಲಾಗಿದ್ದು, ಶಿವಮೊಗ್ಗ-ಕೆಎಸ್‌ಆರ್ ಬೆಂಗಳೂರು ರೈಲು ಸಂಖ್ಯೆ 12090 ಫೆಬ್ರವರಿ 17, 20 ಮತ್ತು ಮಾರ್ಚ್ 3ರಿಂದ 6ರವರೆಗೆ ಶಿವಮೊಗ್ಗದಿಂದ 75 ನಿಮಿಷ ತಡವಾಗಿ ಹೊರಡಲಿದೆ.
ಅರಸೀಕೆರೆ-ಹುಬ್ಬಳ್ಳಿ ರೈಲು ಸಂಖ್ಯೆ 16213 ಫೆಬ್ರವರಿ 17, 20 ಮತ್ತು ಮಾರ್ಚ್ 3ರಿಂದ 6ರವರೆಗೆ ಅರಸೀಕೆರೆಯಿಂದ ನಿಗದಿತ ಸಮಯಕ್ಕಿಂತ 45 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿದೆ.
ಫೆಬ್ರವರಿ 25ರಂದು ಕೆಎಸ್‌ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20661 ಮಾರ್ಗ ಮಧ್ಯೆ 35 ನಿಮಿಷ ನಿಯಂತ್ರಣವಾಗಲಿದೆ.
ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20652 ಫೆಬ್ರವರಿ 24 ಮತ್ತು 25ರಂದು 75 ನಿಮಿಷಗಳ ಕಾಲ ಹಾಗೂ ಚಿಕ್ಕಮಗಳೂರು-ಶಿವಮೊಗ್ಗ ಪ್ಯಾಸೆಂಜರ್ ರೈಲು ಸಂಖ್ಯೆ 56272 ಅರ್ಧ ಗಂಟೆ ಕಾಲ ಮಾರ್ಗಮಧ್ಯೆ ವಿಳಂಬವಾಗಿ ಸಂಚರಿಸಲಿದೆ ಎಂದುನೈರುತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ರೈಲು, ಬಸ್ ನಿಲ್ದಾಣದಲ್ಲಿ ಆಟೋರಿಕ್ಷಾ ಪ್ರಿ-ಪೇಯ್ಡ್ ಕೌಂಟರ್!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ಶಿವಮೊಗ್ಗ -ಭದ್ರಾವತಿ ಮಧ್ಯೆ ರೈಲ್ವೆ ಹಳಿಯ ಮೇಲೆ ರೈಲುಗಾಡಿಗೆ ಸಿಲುಕಿ ವ್ಯಕ್ತಿ ಸಾವು! ರೈಲ್ವೆ ಟ್ರ್ಯಾಕ್ ಸ್ಟೋರಿ!
Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ ಬೆಂಗಳೂರು ರೈಲು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.

