ಶಿವಮೊಗ್ಗ | ಹೂವಿನ ಗಿಡ ಕಡಿಯುವ ವಿಚಾರದಲ್ಲಿ ನಡೆದ ಕ್ಷುಲ್ಲಕ ಜಗಳವೊಂದು ವಿಕೋಪಕ್ಕೆ ಹೋಗಿ, ಮಹಿಳೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ವ್ಯಕ್ತಿಗೆ ಭದ್ರಾವತಿಯ ನ್ಯಾಯಾಲಯವು ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ ಸಂಚಾರದಲ್ಲಿ ಈ ದಿನ ಮಾರ್ಗ ಬದಲಾವಣೆ: ಯಾವಾಗ, ಏಕೆ..?
ಘಟನೆ ವಿವರ
ಭದ್ರಾವತಿ ತಾಲೂಕಿನ ಗುಡುಮಘಟ್ಟೆ ಗ್ರಾಮದ ಸುನಿಲ್ ಕುಮಾರ್ ಎಂಬುವವರು ತಮ್ಮ ಮನೆಯ ಮುಂದಿನ ಖಾಲಿ ಸೈಟಿನಲ್ಲಿ ಹೂವಿನ ಗಿಡಗಳನ್ನು ಬೆಳೆಸಿದ್ದರು. ಆದರೆ, ಈ ಗಿಡಗಳು ಪಕ್ಕದ ಮನೆಯ ರಮೇಶ್ ಪೂಜಾರ್ ಎಂಬುವವರ ಗೋಡೆಗೆ ತಾಗುತ್ತಿವೆ ಎಂಬ ಕಾರಣಕ್ಕೆ 2021ರ ಸೆಪ್ಟೆಂಬರ್ 28ರಂದು ರಮೇಶ್ ಗಿಡಗಳನ್ನು ಕಡಿಯಲು ಮುಂದಾಗಿದ್ದನು. ಈ ವೇಳೆ ಸುನಿಲ್ ಅವರ ತಾಯಿ ಶಾರದಮ್ಮ ಅವರು ಗಿಡ ಕಡಿಯಬೇಡಿ” ಎಂದು ಮನವಿ ಮಾಡಿದಾಗ, ರಮೇಶ್ ಏಕಾಏಕಿ ಮಚ್ಚಿನಿಂದ ಅವರ ಪಾದಕ್ಕೆ ಮತ್ತು ದೊಣ್ಣೆಯಿಂದ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದನು ಎನ್ನಲಾಗಿದೆ.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಎಎಸ್‌ಐ ಕೃಷ್ಣ ನಾಯ್ಕ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ತಿಪ್ಪೇಶ್ ರಾವ್ ಅವರುವಾದ ಮಂಡಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಭದ್ರಾವತಿಯ 1ನೇ ಎ.ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ರವಿಕುಮಾರ್ ವಿ. ಅವರು, ಆರೋಪಿ ರಮೇಶ್ ಪೂಜಾರ್ (42) ಮೇಲಿನ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.
Bhadravathi Court Sentences Man to 2 Years Jail



