ಜೀ ಕನ್ನಡ ನ್ಯೂಸ್ ಸಾಧಕರ ಪ್ರಶಸ್ತಿ 2026:ಬಿ.ಎಸ್. ಯಡಿಯೂರಪ್ಪರಿಗೆ ಅತ್ಯುನ್ನತ ಜೀವಮಾನ ಸಾಧನೆ ಪ್ರಶಸ್ತಿ

ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ಪಥದಲ್ಲಿ ತನ್ನದೇ ಆದ ಅಚ್ಚಳಿಯದ ಮುದ್ರೆ ಒತ್ತಿರುವ ನಾಡಿನ ಗಣ್ಯ ವ್ಯಕ್ತಿಗಳನ್ನು ಗೌರವಿಸಲು ಕನ್ನಡಿಗರ ಹೆಮ್ಮೆಯ ಜೀ ಕನ್ನಡ ನ್ಯೂಸ್‌ ವಾಹಿನಿಯು ZEE Kannada News Achievers Awards 2026 ಸಮಾರಂಭವನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಿದೆ. ಈ ಪ್ರತಿಷ್ಠಿತ ಪುರಸ್ಕಾರ ಪ್ರಧಾನ ಸಮಾರಂಭವು ಫೆಬ್ರವರಿ 12ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಪ್ರತಿಷ್ಠಿತ ‘ದಿ ಲಲಿತ್ ಅಶೋಕ್’ ಹೋಟೆಲ್‌ನಲ್ಲಿ ನಡೆಯಲಿದೆ.

Zee Kannada News ಈ ಭವ್ಯ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ವಹಿಸಿ ಆಶೀರ್ವಚನ ನೀಡಲಿದ್ದಾರೆ. ವೇದಿಕೆಯ ಮೇಲೆ ರಾಜಕೀಯ ಧುರೀಣರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರುಗಳಾದ ಹೆಚ್.ಕೆ. ಪಾಟೀಲ್, ರಾಮಲಿಂಗಾ ರೆಡ್ಡಿ, ಡಾ. ಜಿ. ಪರಮೇಶ್ವರ್, ಈಶ್ವರ್ ಖಂಡ್ರೆ, ಶಿವರಾಜ್ ತಂಗಡಗಿ, ರಹೀಮ್ ಖಾನ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಮತ್ತು ಶಾಸಕ ವಿ. ಸುನಿಲ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.

ರಾಜ್ಯದ ಆಡಳಿತ ಮತ್ತು ಜನಸೇವೆಯಲ್ಲಿ ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ಸಾಲಿನ ಅತ್ಯುನ್ನತ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ವಿಶೇಷವಾಗಿದೆ. ಇವರೊಂದಿಗೆ ಕಲಾ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್. ನಾರಾಯಣ್, ಅಂತರಾಷ್ಟ್ರೀಯ ಸ್ನೂಕರ್ ಕ್ರೀಡಾಪಟು ಚಿತ್ರಾ ಮಗಿಮೈರಾಜ್ ಹಾಗೂ ಅಕ್ಷರ ಲೋಕದ ಕಾಯಕಯೋಗಿ ಲೈಬ್ರೇರಿಯನ್ ಅಂಕೇಗೌಡ ಎಂ. ಅವರಿಗೂ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ನೈಜ ಜೀವನದಲ್ಲಿ ನಾಯಕತ್ವ, ಬದ್ಧತೆ ಮತ್ತು ಪ್ರಾಮಾಣಿಕತೆಯ ಮೂಲಕ ಸಮಾಜದ ಮೇಲೆ ಪ್ರಭಾವ ಬೀರಿದವರನ್ನು ಗುರುತಿಸಿ ಬೆನ್ನುತಟ್ಟುವುದು ಈ ಪ್ರಶಸ್ತಿಯ ಮೂಲ ಆಶಯವಾಗಿದೆ. ಕಲೆ, ಸಂಸ್ಕೃತಿ ಮತ್ತು ಸಾರ್ವಜನಿಕ ಸೇವೆಯಲ್ಲಿ ಶ್ರೇಷ್ಠತೆಯನ್ನು ಮೆರೆದ ವ್ಯಕ್ತಿಗಳ ಗೌರವಾರ್ಥ ಈ ಕಾರ್ಯಕ್ರಮವು ಸಾಕ್ಷಿಯಾಗಲಿದೆ.

ಈ ಸಮಾರಂಭವನ್ನು ಸನ್‌ಪ್ಯೂರ್ ಆಯಿಲ್ ಪ್ರಸ್ತುತಪಡಿಸುತ್ತಿದ್ದು, ತನಿಷ್ಕ್ ಹಾಗೂ ಸ್ಮಾರ್ಟ್‌ಕ್ವಿಕ್ ಬಂಧನ್ ಪ್ರಾಪರ್ಟೀಸ್ ಮುಖ್ಯ ಪ್ರಾಯೋಜಕತ್ವ ವಹಿಸಿವೆ. ಫ್ಯಾಷನ್ ವಿಭಾಗದಲ್ಲಿ ಟಿಆರ್‌ಎಸ್ ಫ್ಯಾಷನ್ಸ್ ಹಾಗೂ ಅಬಯಾ ಗೋಲ್ಡ್ ಬೈಯರ್ಸ್ ಸಹಯೋಗ ನೀಡಿದ್ದು, ಕಲ್ಯಾಣ್ ಫುಡ್ಸ್ ಮತ್ತು ದಾನಗಣಪತಿ ಫೈನಾನ್ಸ್ ವಿಶೇಷ ಪಾಲುದಾರರಾಗಿದ್ದಾರೆ. ಅಲ್ಲದೆ, ನಂದಿನಿ ಸಂಸ್ಥೆಯು ಕಾರ್ಯಕ್ರಮದ ರಿಫ್ರೆಶ್‌ಮೆಂಟ್ ಪಾಲುದಾರರಾಗಿದ್ದು, ನಾಡಿನ ಪ್ರತಿಷ್ಠಿತ ದಿನಪತ್ರಿಕೆ ‘ಪ್ರಜಾವಾಣಿ’ ಈ ಕಾರ್ಯಕ್ರಮದ ಅಧಿಕೃತ ಮುದ್ರಣ ಪಾಲುದಾರರಾಗಿ ಕೈಜೋಡಿಸಿದೆ. ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಾಯಕರನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಜೀ ಕನ್ನಡ ನ್ಯೂಸ್ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

Zee Kannada News Achievers Awards 2026

Zee Kannada News
Zee Kannada News
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು