Shimoga Kote Marikamba Jatra 2026 Shivamogga | ಶಿವಮೊಗ್ಗ ನಗರದ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಆಶ್ರಯದಲ್ಲಿಇದೇ ಫೆಬ್ರವರಿ 24 ರಿಂದ ಫೆಬ್ರವರಿ 28 ರವರೆಗೆ ಒಟ್ಟು 5 ದಿನಗಳ ಕಾಲ ಅದ್ದೂರಿಯಾಗಿ ಮಾರಿ ಜಾತ್ರೆ ನಡೆಯಲಿದೆ. ಈ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಆವರಣದಲ್ಲಿ ಹಾಕಲಾಗುವ ಅಂಗಡಿಗಳ ಹರಾಜು ಮತ್ತು ಕೋಳಿ ಹರಾಜು ಪ್ರಕ್ರಿಯೆಯು ಫೆಬ್ರವರಿ 12, 2026 ರಂದು ಸಮಿತಿಯ ಭವನದಲ್ಲಿ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಹೈಕೋರ್ಟ್ನಲ್ಲಿ ಪಿಐಎಲ್! ಸರ್ಕಾರಕ್ಕೆ ಶಿವಮೊಗ್ಗ ಪಾಲಿಕೆ ಕುರಿತು ನೋಟಿಸ್ ಜಾರಿ! ಪೂರ್ತಿ ವಿವರ ಇಲ್ಲಿ ಓದಿ
- ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಹರಾಜಿನ ಒಂದು ದಿನ ಮುಂಚಿತವಾಗಿಯೇ ಸಮಿತಿಯ ಹೆಸರಿಗೆ 50,000 ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
- ಹರಾಜಿನಲ್ಲಿ ಯಶಸ್ವಿ ಬಿಡ್ಡುದಾರರು ಹರಾಜು ಕೂಗಿದ ಪೂರ್ಣ ಹಣವನ್ನು ಒಂದೇ ಕಂತಿನಲ್ಲಿ ಸ್ಥಳದಲ್ಲಿಯೇ ಪಾವತಿಸಬೇಕಾಗುತ್ತದೆ.
- ಅಂತಿಮವಾಗಿ ಬಿಡ್ ಅನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಸಂಪೂರ್ಣ ಹಕ್ಕನ್ನು ಆಡಳಿತ ಮಂಡಳಿಯು ಕಾಯ್ದಿರಿಸಿಕೊಂಡಿದೆ.
- ಜಾತ್ರೆಯ ಸಿದ್ಧತೆಯ ಭಾಗವಾಗಿ ಗಾಂಧಿ ಬಜಾರ್‌ನಲ್ಲಿರುವ ಮಾರಿಕಾಂಬೆಯ ತವರು ಮನೆ ಮತ್ತು ದೇವಿಯ ಗದ್ದುಗೆಯ ಬಳಿ ಭವ್ಯವಾದ ಪೆಂಡಾಲ್ ನಿರ್ಮಾಣ ಮಾಡಲು ಹಾಗೂ ನಗರದಾದ್ಯಂತ ದೀಪಾಲಂಕಾರ ವ್ಯವಸ್ಥೆ ಮಾಡಲು ಕೋಟೇಶನ್ ಆಹ್ವಾನಿಸಲಾಗಿದೆ.
ಈ ಕಾಮಗಾರಿಗಳನ್ನು ನಿರ್ವಹಿಸಲು ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಾಗಿ ಸಮಿತಿಯ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಯವರನ್ನು ಭೇಟಿಯಾಗಿ ವಿವರಗಳನ್ನು ಪಡೆದು ತಮ್ಮ ಕೋಟೇಶನ್ ಸಲ್ಲಿಸಬಹುದಾಗಿದೆ. ಈ ಪ್ರಕಟಣೆಯನ್ನು ಕಾರ್ಯಕಾರಿ ಸಮಿತಿಯ ಅಪ್ಪಣೆ ಮೇರೆಗೆ ಅಧ್ಯಕ್ಷರಾದ ಎಸ್. ಕೆ. ಮರಿಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಅವರು ಹೊರಡಿಸಿದ್ದಾರೆ.

ಚುನಾವಣೆಗಾಗಿ ಹೊಸ ಟೆಕ್ನಿಕ್ ಬಳಸಿದ ಶಿವಮೊಗ್ಗ ಮಹಾನಗರ ಪಾಲಿಕೆ! ಏನದು ನೋಡಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Shimoga Kote Marikamba Jatra 2026: Shop and Poultry Auction on February 12 – Details Here ಕೋಟೆ ಮಾರಿಕಾಂಬೆ ಜಾತ್ರೆ! ಫೆಬ್ರವರಿ 12 ರಂದು ದೊಡ್ಡ ಹರಾಜು! ಸಮಿತಿ ನೀಡಿದ ಪ್ರಕಟಣೆಯಲ್ಲಿ ಹಲವು ವಿಚಾರ!

