ಟೊಮೆಟೊ ಚೀಪ್, ನುಗ್ಗೆಕಾಯಿ ಕಾಸ್ಟ್ಲಿ: ಶಿವಮೊಗ್ಗದಲ್ಲಿನ ತರಕಾರಿ, ಸೊಪ್ಪಿನ ರೇಟ್ ಎಷ್ಟಿದೆ ನೋಡಿ

Shivamogga  | Shivamogga APMC Market Vegetable Prices | ತರಕಾರಿ ಬೆಲೆ ಏರುತ್ತಿದೆ. ಈ ನಡುವೆಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ  ನಿನ್ನೆ ದಿನ ದಾಖಲಾದ ತರಕಾರಿಗಳ ಬೆಲೆಯ ವಿವರ ಇಲ್ಲಿದೆ. ಶಿವಮೊಗ್ಗದ ವಿನೋಬನಗರದಲ್ಲಿರುವ ಸಗಟು ತರಕಾರಿ ಮಾರುಕಟ್ಟೆಯಲ್ಲಿ ದಾಖಲಿಸಿದ ದರಪಟ್ಟಿಯ ಪ್ರಕಾರ,  ಹಸಿ ಮೆಣಸು ಪ್ರತಿ ಕೆಜಿಗೆ 60 ರೂಪಾಯಿ ಹಾಗೂ ಬಜ್ಜಿ ಮೆಣಸು 50 ರೂಪಾಯಿಗೆ ಮಾರಾಟವಾಗುತ್ತಿದೆ. 

Malenadu Today Shivamogga
ಶಿವಮೊಗ್ಗ, ಟೊಮೆಟೊ ಬೆಲೆ ಇಳಿಕೆ – Shivamogga APMC Rates Shivamogga APMC Market Vegetable Prices List Today

ಡಬಲ್ ಬೀನ್ಸ್ 60 ರೂಪಾಯಿ ಹಾಗೂ ಎಂ.ಝಡ್ ಮತ್ತು ರಿಂಗ್ ಬೀನ್ಸ್ 50 ರೂಪಾಯಿ ಆಗಿದೆ. ಟೊಮೆಟೊ ಬೆಲೆ ಇಳಿಕೆಯಾಗಿದ್ದು ಪ್ರತಿ ಕೆಜಿಗೆ 4 ರೂಪಾಯಿಯಿಂದ 16 ರೂಪಾಯಿಯವರೆಗೆ ಸಿಗುತ್ತಿದ್ದರೆ ಈರುಳ್ಳಿ 30 ರಿಂದ 40 ರೂಪಾಯಿ ಹಾಗೂ ಆಲೂಗಡ್ಡೆ 26 ರಿಂದ 30 ರೂಪಾಯಿಯ ಆಸುಪಾಸಿನಲ್ಲಿದೆ. ನುಗ್ಗೆಕಾಯಿ ಬೆಲೆ ಏರಿಕೆಯಾಗಿದ್ದು 120 ರೂಪಾಯಿಗೆ ಮಾರಾಟವಾಗುತ್ತಿದ್ದರೆ ಬೆಳ್ಳುಳ್ಳಿ 100 ರಿಂದ 200 ರೂಪಾಯಿ ಹಾಗೂ ನಿಂಬೆಹಣ್ಣು 100 ಕಾಯಿಗೆ 100 ರಿಂದ 200 ರೂಪಾಯಿದೆ. ಹೀರೇಕಾಯಿ ಮತ್ತು ಬೆಂಡೆಕಾಯಿ 30 ರೂಪಾಯಿ, ಹಾಗಲಕಾಯಿ, ತೊಂಡೆಕಾಯಿ ಹಾಗೂ ಕ್ಯಾಪ್ಸಿಕಂ 50 ರೂಪಾಯಿಗೆ ಮಾರಾಟವಾಗುತ್ತಿವೆ. ಸೊಪ್ಪುಗಳ ದರವನ್ನು ನೋಡುವುದಾದರೆ ಕೊತ್ತಂಬರಿ ಸೊಪ್ಪು 50 ರಿಂದ 80 ರೂಪಾಯಿ, ಸಬ್ಬಸಿಗೆ 140 ರಿಂದ 160 ರೂಪಾಯಿ, ಮೆಂತೆ ಸೊಪ್ಪು 160 ರಿಂದ 180 ರೂಪಾಯಿ ಹಾಗೂ ಪಾಲಕ್ ಸೊಪ್ಪು 100 ರಿಂದ 120 ರೂಪಾಯಿಗೆ 100 ಕಟ್ಟುಗಳಂತೆ ಮಾರಾಟವಾಗುತ್ತಿದೆ.

Malenadu Today Shivamogga
ಶಿವಮೊಗ್ಗ, ಟೊಮೆಟೊ ಬೆಲೆ ಇಳಿಕೆ – Shivamogga APMC Rates Shivamogga APMC Market Vegetable Prices List Today
ಶಿವಮೊಗ್ಗ, ಟೊಮೆಟೊ ಬೆಲೆ ಇಳಿಕೆ – Shivamogga APMC Rates Shivamogga APMC Market Vegetable Prices List Today

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.