ಸಿನಿಮಾದಲ್ಲಿ ವಿಶೆಷ ಪಾತ್ರದಲ್ಲಿ ಕಾರ್ಮಿಕ ಸಚಿವ ಸಂತೋಷ್​ ಲಾಡ್​, ಯಾವ ಚಿತ್ರ, ರಿಲೀಸ್ ಯಾವಾಗ

ಹಂಚಿಕೊಳ್ಳಿ
WhatsApp Facebook X Telegram
Bharathi Teacher Kannada Movie Release on jan 
Bharathi Teacher Kannada Movie Release on jan 

ಶಿವಮೊಗ್ಗ :  ಕನ್ನಡ ಭಾಷೆ ಹಾಗೂ ಸರ್ಕಾರಿ ಶಾಲೆ ಉಳಿವಿಗಾಗಿ ಭಾರತಿ ಟೀಚರ್ ಎಂಬ ಸಿನಿಮಾ ತಯಾರಾಗಿದ್ದು. ಈ ಸಿನಿಮಾ ಜನವರಿ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಕಾರ್ಮಿಕ ಸಚಿವ ಸಂತೋಷ್​​ ಲಾಡ್​ ಹಾಗೂ ನಟ ಆದಿತ್ಯ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Bharathi Teacher Kannada Movie Release on jan 
Bharathi Teacher Kannada Movie Release on jan

ಶಿವಮೊಗ್ಗ ಜಿಲ್ಲಾ ವರದಿ: ಪಶು ವೈದ್ಯ ಸಾವು! ಬಾರಲ್ಲಿ ಹಲ್ಲೆ! ಅಣ್ಣ, ಅತ್ತಿಗೆಗೆ ಏಟು, ಕಾರು ಅಪಘಾತ, ಚಿರತೆಯ ನಿಗೂಢ & 112 ರಕ್ಷಣೆಯ ಸುದ್ದಿ

ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಘವ್ ಸೂರ್ಯ ಮಾತನಾಡಿ. ಭಾರತೀಯ ಎಂಬ ಏಳನೇ ತರಗತಿ ಓದುತ್ತಿರುವ ಹುಡುಗಿಯೊಬ್ಬಳು ತನ್ನ ಊರಿನ ಪ್ರತಿಯೊಬ್ಬರನ್ನು ಸಹ ಕನ್ನಡದಲ್ಲಿ ಓದುವ ಬರೆಯುವ ಹಾಗೆ ಮಾಡುವ ದೃಢಸಂಕಲ್ಪ ಮಾಡುತ್ತಾಳೆ. ತನ್ನ ಸಂಕಲ್ಪವನ್ನು ಯಾವ ರೀತಿಯಾಗಿ ಎಲ್ಲಾ ಅಡೆತಡೆಗಳನ್ನು  ಎದುರಿಸಿ ಯಶಸ್ವಿಯಾಗಿ ನಿರ್ವಹಿಸಿ ಕೊಡುತ್ತಾಳೆ ಎಂಬ ಕಥಾಂದರ ಈ ಚಿತ್ರದಲ್ಲಿದೆ. ಈ ಚಿತ್ರದ ನಿರ್ದೇಶನ ಸಂಗೀತ ಹಾಗೂ ಸಾಹಿತ್ಯವನ್ನು ಎಂಎಲ್ ಪ್ರಸನ್ನ ರವರು ಮಾಡಿದ್ದು. ಗುರುರಾಜ್ ರೆಡ್ಡಿ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರದ ಸಿಹಿಕಹಿ  ಚಂದ್ರು ಕುಮಾರಿ ಯಶಿಕ ಗೋವಿಂದೇಗೌಡ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ ಎಂದರು.

ಈ ಚಿತ್ರದಲ್ಲಿ 10 ಹಾಡುಗಳಿದ್ದು  ಚಿತ್ರವನ್ನು 40 ದಿನಗಳ ಕಾಲ ಮಳವಳ್ಳಿ ಮೈಸೂರು ಸೇರಿದಂತೆ ವಿವಿಧಡೆ ಚಿತ್ರೀಕರಿಸಲಾಗಿದೆ. ರಾಜದಾದ್ಯಂತ ಸಿಂಗಲ್ಸ್ ಸ್ಕ್ರೀನ್ ಗಳಲ್ಲಿ ಈ ಚಿತ್ರಕ್ಕೆ ಐವತ್ತು ರೂಪಾಯಿ ಸಿನಿಮಾ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ರಾಜ್ಯದಾದ್ಯಂತ ಈ ಚಿತ್ರ ಸುಮಾರು ನೂರಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

Bharathi Teacher Kannada Movie Release on jan 

Bharathi Teacher Kannada Movie Release on jan 
Bharathi Teacher Kannada Movie Release on jan

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor