Horoscope and Panchangam | ಬೆಂಗಳೂರು | ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತುವಿನ ಪುಷ್ಯ ಮಾಸದ ಈ ದಿನ ಬಹುಳ ದಶಮಿ ಮಧ್ಯಾಹ್ನ 3.57 ರವರೆಗೆ ಇದ್ದು, ತದನಂತರ ಏಕಾದಶಿ ಆರಂಭವಾಗಲಿದೆ. ವಿಶಾಖ ನಕ್ಷತ್ರವು ರಾತ್ರಿ 1.01 ರವರೆಗೆ ಇರಲಿದ್ದು, ನಂತರ ಅನುರಾಧ ನಕ್ಷತ್ರವು ಪ್ರವೇಶಿಸಲಿದೆ. ಅಮೃತ ಘಳಿಗೆಯು ಮಧ್ಯಾಹ್ನ 3.21 ರಿಂದ ಸಂಜೆ 5.07 ರವರೆಗೆ ಇರಲಿದೆ.ರಾಹುಕಾಲವು ಮಧ್ಯಾಹ್ನ 3.00 ರಿಂದ 4.30 ರವರೆಗೆ ಹಾಗೂ ಯಮಗಂಡ ಕಾಲವು ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ

10 ದಿನದಲ್ಲಿ 50 ಪೆರ್ಸೆಂಟ್ ಲಾಭದ ಆಸೆಗೆ ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದೆಷ್ಟು ಲಕ್ಷ ಗೊತ್ತಾ..?
ಇವತ್ತಿನ ರಾಶಿಫಲ
ಮೇಷ | ಹೊಸ ಕಾರ್ಯಗಳ ಆರಂಭ, ಆಪ್ತರಿಂದ ಪ್ರೇರಣೆ, ದಿನವೂ ಉತ್ಸಾಹಭರಿತವಾಗಿರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ
ವೃಷಭ | ಪ್ರಮುಖ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದ್ದು, ಆರ್ಥಿಕ ಲಾಭ. ಒಂದು ಆಮಂತ್ರಣವು ಮನಸ್ಸಿಗೆ ಸಂತೋಷ ನೀಡಲದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅಡೆತಡೆ ನಿಭಾಯಿಸುವಿರಿ.
10 ದಿನದಲ್ಲಿ 50 ಪೆರ್ಸೆಂಟ್ ಲಾಭದ ಆಸೆಗೆ ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದೆಷ್ಟು ಲಕ್ಷ ಗೊತ್ತಾ..?
ಮಿಥುನ | ಆಪ್ತರೊಂದಿಗೆ ಮಾತಿನ ಚಕಮಕಿ. ಶ್ರಮದ ದಿನ, ಸಾಲದ ಸಮಸ್ಯೆ ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ, ವ್ಯಾಪಾರ ಹಾಗೂ ಉದ್ಯೋಗಗಳಲ್ಲಿ ಕಿರಿಕಿರಿ.
ಕರ್ಕಾಟಕ | ಪ್ರಮುಖ ತೀರ್ಮಾನಗಳಲ್ಲಿ ಪದೇ ಪದೇ ಬದಲಾವಣೆ ಮಾಡಿಕೊಳ್ಳಲಿದ್ದಾರೆ. ಆರ್ಥಿಕ ಬಿಕ್ಕಟ್ಟು, ಕೈಗೊಂಡ ಕೆಲಸ ಸಕಾಲಕ್ ಮುಗಿಯವುದಿಲ್ಲ. ಪ್ರಯಾಣದಲ್ಲಿ ವಿಘ್ನ ಮತ್ತು ಬಂಧು ಮಿತ್ರರೊಂದಿಗೆ ಭಿನ್ನಾಭಿಪ್ರಾಯ, ಉದ್ಯೋಗ ವ್ಯವಹಾರ ಮಂದಗತಿಯಲ್ಲಿ ಸಾಗಲಿವೆ.
ಸಿಂಹ | ಹೊಸ ಕೆಲಸಗಳ ಆರಂಭಕ್ಕೆ ಮುನ್ನುಡಿ. ಮನೆಯಲ್ಲಿ ಶುಭ ಕಾರ್ಯ, ಬಂಧು ಮಿತ್ರರ ಜೊತೆಗಿನ ಅಸಮಾಧಾನ ದೂರವಾಗಲಿವೆ. ವಸ್ತು ರೂಪದಲ್ಲಿ ಲಾಭ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರಗತಿ.

ಕನ್ಯಾ | ಕೆಲಸದ ವೇಗ ಕುಂಠಿತವಾಗಲಿದೆ. ದೂರ ಪ್ರಯಾಣ, ವ್ಯಾಪಾರ ಮತ್ತು ಉದ್ಯೋಗದ ವಿಷಯಗಳಲ್ಲಿ ಅಡಚಣೆ ಇರಲಿವೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.
ಶಿವಮೊಗ್ಗದಲ್ಲಿ 91000! ಉಳಿದ ಕಡೆ ಎಷ್ಟಿದೆ ಅಡಕೆ ದರ! ಅಡಿಕೆ ರೇಟು ಓದಿ
ತುಲಾ | ನೂತನ ಕಾರ್ಯಗಳಲ್ಲಿ ಯಶಸ್ಸು ಕಾಣುವರು. ಪ್ರಯಾಣ ರದ್ದಾಗುವುದು, ವೃತ್ತಿ ಜೀವನದ ಗುರಿಗ ತಲುಪುವಲ್ಲಿ ಸಫಲರಾಗಲಿದ್ದಾರೆ.
ವೃಶ್ಚಿಕ | ವ್ಯವಹಾರಗಳಲ್ಲಿ ಅಡೆತಡೆ, ಹಣಕಾಸಿನ ಹೊಂದಾಣಿಕೆ ಕಷ್ಟವಾಗಬಹದು, ಸಾಲ ಮಾಡಬೇಕಾಗಬಹುದು. ಶ್ರಮ ವಹಿಸಿದರೂ ಪ್ರತಿಫಲ ತೃಪ್ತಿಕರವಾಗಿರುವುದಿಲ್ಲ. ವ್ಯಾಪಾರದಲ್ಲಿ ವಿವಾದ
ಧನುಸ್ಸು | ಹೊಸ ವ್ಯಕ್ತಿಗಳ ಪರಿಚಯ, ಮನೆಯಲ್ಲಿ ಸಮಾರಂಭ ನಡೆಸಲಿದ್ದಾರೆ. ಹಳೆಯ ಬಾಕಿ ಹಣ ವಸೂಲಾಗುವ ಸಾಧ್ಯತೆ, ಆರೋಗ್ಯದಲ್ಲಿ ಚೇತರಿಕೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ವಾತಾವರಣವು ಉತ್ಸಾಹದಾಯಕವಾಗಿರಲಿದೆ.
ಮಕರ | ಕೈಗೊಂಡ ಕೆಲಸಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿವೆ. ಬಾಕಿ ಹಣ ಕೈಸೇರಲಿದೆ. ಕುಟುಂಬದಲ್ಲಿ ಶುಭ ಕಾರ್ಯ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ.

ಶಿವಮೊಗ್ಗ ಸಿಮ್ಸ್ ಹಾಸ್ಟೆಲ್‌ನಲ್ಲಿ ರೇಡಿಯಾಲಜಿ ವಿಭಾಗದ ಪಿಜಿ ವೈದ್ಯ ಆತ್ಮಹತ್ಯೆ
ಕುಂಭ | ಕೆಲವು ವ್ಯವಹಾರಗಳಲ್ಲಿ ಹಿನ್ನಡೆ. ಧನವ್ಯಯ ಹಾಗೂ ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಅನಾರೋಗ್ಯ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಗೊಂದಲದ ಪರಿಸ್ಥಿತಿ ಇರಲಿದೆ.
ಮೀನ | ಆರ್ಥಿಕ ಸಹಾಯಕ್ಕಾಗಿ ಸಾಲದ ಪ್ರಯತ್ನ. ಅಂದುಕೊಂಡ ಕೆಲಸಗಳಲ್ಲಿ ವಿಳಂಬ, ಆಲೋಚನೆಗಳು ಫಲಪ್ರದವಾಗುವುದಿಲ್ಲ. ಅನಿರೀಕ್ಷಿತ ಪ್ರಯಾಣ ಮತ್ತು ಕೆಲಸದ ಒತ್ತಡ, ವ್ಯಾಪಾರ ಸಾಧಾರಣ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ಮನೆ ಮಾಲೀಕರು ಶಿವಮೊಗ್ಗದಲ್ಲಿದ್ದಾಗ ಆನವಟ್ಟಿಯಲ್ಲಿ ನಡೀತು ಈ ಘಟನೆ
