Daily Predictions ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಈ ದಿನದಂದು ಶುಕ್ಲ ತದಿಗೆ ತಿಥಿಯು ಬೆಳಿಗ್ಗೆ 10.27 ರವರೆಗೆ ಇದ್ದು ಆನಂತರ ಚೌತಿ ಆರಂಭವಾಗಲಿದೆ. ಧನಿಷ್ಠ ನಕ್ಷತ್ರವಿರಲಿದೆ. ಅಮೃತ ಘಳಿಗೆ ಸಂಜೆ 6.51 ರಿಂದ 8.32 ರವರೆಗೆ ಇರಲಿದೆ.ರಾಹುಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆಇರಲಿದೆ. ಯಮಗಂಡ ಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ

ಇಂದಿನ ರಾಶಿಫಲ
ಮೇಷ : ಕೈಗೊಂಡ ಕಾರ್ಯಗಳಲ್ಲಿ ಅಭೂತಪೂರ್ವ ಯಶಸ್ಸು ಸಿಗಲಿದೆ. ಶುಭ ಸಮಾಚಾರ ಮನೆಬಾಗಿಲಿಗೆ ಬರಲಿವೆ. ಉದ್ಯೋಗದ ಇಂಟರ್ವ್ಯೂಗಳಲ್ಲಿ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಆಸ್ತಿ ಲಾಭ, ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ವ್ಯಾಪಾರದಲ್ಲಿ ಹೂಡಿಕೆ ಉದ್ಯೋಗಿಗಳಿಗೆ ಪದೋನ್ನತಿಯ ಭಾಗ್ಯ

ವೃಷಭ : ಬಂಧು ಮಿತ್ರರೊಂದಿಗೆ ಭಿನ್ನಾಭಿಪ್ರಾಯ. ವೃಥಾ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಳಂಬ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ. ದೇವಸ್ಥಾನಕ್ಕೆ ಭೇಟಿ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ.
ಮಿಥುನ : ಹೆಚ್ಚಿನ ಶ್ರಮ, ಓಡಾಟ , ಜವಾಬ್ದಾರಿಗಳ ಒತ್ತಡ. ದೂರ ಪ್ರಯಾಣ ಹಾಗೂ ಅನಾರೋಗ್ಯ. ಆಧ್ಯಾತ್ಮಿಕ ಚಿಂತನೆಯಿಂದ ದೈವದರ್ಶನ ಪಡೆಯಲಿದ್ದು ವ್ಯಾಪಾರ ವ್ಯವಹಾರ ಸಾಮಾನ್ಯ ಗತಿಯಲ್ಲಿ ಸಾಗಲಿವೆ. ಉದ್ಯೋಗಿಗಳಿಗೆ ವಿಧೇಯತೆ ಕೆಲಸ ಮಾಡುವುದು
ಕರ್ಕಾಟಕ : ಆಸಕ್ತಿದಾಯಕ ಮಾಹಿತಿ ಲಭ್ಯವಾಗಲಿದ್ದು ಬಾಕಿ ಹಣ ವಸೂಲಿಯಾಗಲಿದೆ. ಆಮಂತ್ರಣ ಸಿಗಲಿದೆ. ಆಸ್ತಿ ಖರೀದಿ. ವ್ಯಾಪಾರ ವಿಸ್ತರಣೆ ಪ್ರಯತ್ನ ಕೈಗೂಡಲಿದ್ದು ಉದ್ಯೋಗಿಗಳಿಗೆ ಕೆಲಸದಲ್ಲಿ ಅನುಕೂಲಕರ ಬದಲಾವಣೆ ಕಂಡುಬರಲಿವೆ
ಸಿಂಹ : ಮನೆಯಲ್ಲಿ ಮತ್ತು ಹೊರಗಡೆ ಪ್ರೋತ್ಸಾಹದಾಯಕ ವಾತಾವರಣ , ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಶುಭ ಕಾರ್ಯ, ಕೆಲಸ ಕಾರ್ಯಗಳಲ್ಲಿ ಜಯ. ಔತಣಕೂಟ, ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೊಸ ಉತ್ಸಾಹ
ಕನ್ಯಾ : ಅಡೆತಡೆ ಎದುರಾಗುವ ಸಾಧ್ಯತೆ, ತಾಳ್ಮೆ ಮುಖ್ಯ. ಆರ್ಥಿಕ ಮುಗ್ಗಟ್ಟಿನ ಕಾರಣ ಹೊಸ ಸಾಲ. ಅಶಾಂತಿ ಹಾಗೂ ಅನಾರೋಗ್ಯ , ಆಧ್ಯಾತ್ಮಿಕ ಚಿಂತನೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ, ಉದ್ಯೋಗದಲ್ಲಿ ತಾಳ್ಮೆ ಇರಲಿ.

ತುಲಾ: ಹೊಸ ಸಾಲ , ಮನಸ್ಸು ಚಂಚಲವಾಗಿರಲಿದೆ. ಜವಾಬ್ದಾರಿ ಜಾಸ್ತಿ, ಹೊರೆ ಹೆಚ್ಚಾಗಿ ಅನಾರೋಗ್ಯ. ಶ್ರಮಕ್ಕೆ ತಕ್ಕ ಪ್ರತಿಫಲ, ವ್ಯಾಪಾರ ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿ.
ವೃಶ್ಚಿಕ : ಎಲ್ಲಾ ಕೆಲಸ ಸುಗಮವಾಗಿ ಪೂರ್ಣಗೊಳ್ಳಲಿದೆ. ಆರ್ಥಿಕ ಪ್ರಗತಿ. ಸಾಲದ ಬಾಧೆಯಿಂದ ಮುಕ್ತಿ ಸಿಗಲಿದೆ. ಹೊಸ ಬಟ್ಟೆ ಅಥವಾ ವಸ್ತು ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಮಾಚಾರ, ಉನ್ನತ ಸ್ಥಾನಕ್ಕೇರುವ ಅವಕಾಶಮ, ವ್ಯಾಪಾರದಲ್ಲಿ ಹೊಸ ದಾರಿ.
ಧನುಸ್ಸು : ಆರ್ಥಿಕ ಪರಿಸ್ಥಿತಿ ಸಾಧಾರಣ, ವಾಗ್ವಾದಗಳಿಂದ ತಪ್ಪಿಸಿಕೊಳ್ಳಿ. ಆಸ್ತಿ ವಿಚಾರದಲ್ಲಿ ತಕರಾರು ಮತ್ತು ಕೆಲಸ ಮುಂದೂಡಲ್ಪಡಲಿವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ,
ಮಕರ : ನವ ಚೈತನ್ಯದಿಂದ ಕೆಲಸಗಳನ್ನು ಮಾಡಿ,ಆತ್ಮೀಯರ ಬೆಂಬಲ ಸಿಗಲಿದೆ. ಗಣ್ಯ ವ್ಯಕ್ತಿಗಳ ಪರಿಚಯ, ಹೊಸ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಆಕಸ್ಮಿಕ ಧನಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ .
ಕುಂಭ : ವ್ಯವಹಾರಗಳಲ್ಲಿ ಸಾಮಾನ್ಯದಿನ, ಪಟ್ಟ ಶ್ರಮಕ್ಕೆ ತಕ್ಕ ಫಲ. ಆಸ್ತಿ ವಿಚಾರದಲ್ಲಿ ವಿವಾದ ಎದುರಾಗಲಿದ್ದು, ಆರೋಗ್ಯ ಜಾಗ್ರತೆ ,ಆಧ್ಯಾತ್ಮಿಕತೆಯತ್ತ ಮನಸ್ಸು ಹರಿಯಲಿದೆ. ವ್ಯಾಪಾರದಲ್ಲಿ ಏರಿಳಿತ. ಕೆಲಸದ ಸ್ಥಳದಲ್ಲಿ ಬದಲಾವಣೆ.

ಮೀನ : ಹೊಸ ಕೆಲಸ ಸಿಗುವ ಯೋಗವಿದೆ. ಹಳೆಯ ಸ್ನೇಹಿತರ ಭೇಟಿ. ಹಣಕಾಸಿನ ಸ್ಥಿತಿ ಗಣನೀಯವಾಗಿ ಸುಧಾರಿಸಲಿದೆ. ಸಕಾಲದಲ್ಲಿ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿ ಉತ್ಸಾಹ , ಉದ್ಯೋಗಸ್ಥರಿಗೆ ವೇತನ ಹೆಚ್ಚಳ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!



