ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/ ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 27, 2023 GOOGLE NEWS


ಶಿವಮೊಗ್ಗ/ ನಗರದಲ್ಲಿ Public Nuisance ಮಾಡುತ್ತಿರುವವರ ವಿರುದ್ಧ ಪೊಲೀಸರ ಕ್ರಮ ದಿನದಿಂದ ದಿನ ಬಿಗಿಗೊಳ್ಳುತ್ತಿದೆ. ನಿನ್ನೆಯು ಸಹ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರು,   Area Domination ವಿಶೇಷ ಗಸ್ತು ಮಾಡಿ ಅನುಮಾನಸ್ಪದವಾಗಿ ಕಂಡು ಬಂದವರ ವಿರುದ್ಧ ಪಿಟ್ಟಿ ಕೇಸ್ ಹಾಕಿದ್ದಾರೆ. 

ವಿವರ.

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿ Public Nuisance ಮಾಡುವ ಮತ್ತು ಅನುಮಾನಸ್ಪಾದ 12 ಜನರನ್ನು ಪೊಲೀಸ್ ಠಾಣೆಗೆ ಕರೆತರಲಾಗಿದೆ. 

ಈ ಪೈಕಿ ಎಲ್ಲರ ಪೂರ್ವಪರಗಳನ್ನು ಪರಿಶೀಲಿಸಿ  Public Nuisance ಮಾಡಿದ ವ್ಯಕ್ತಿಗಳ ವಿರುದ್ದ 07 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ. 

 

ಭದ್ರಾವತಿಯಲ್ಲಿಯು ಕಾರ್ಯಾಚರಣೆ 

ಇನ್ನೂ ಅತ್ತ  ಹೊಸಮನೆ ಪೊಲೀಸ್ ಠಾಣೆ ಭದ್ರಾವತಿ ಮತ್ತು ಸಿಬ್ಬಂದಿಗಳ ತಂಡವು ಭದ್ರಾವತಿ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿದೆ

ಈ ವೇಳೆ  Public Nuisance ಮಾಡುವ ಮತ್ತು ಅನುಮಾನಸ್ಪಾದ 12 ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಪೂರ್ವಪರಗಳನ್ನು ಪರಿಶೀಲಿಸಿ  Public Nuisance ಮಾಡಿದ ವ್ಯಕ್ತಿಗಳ ವಿರುದ್ದ 12 ಲಘು ಪ್ರಕರಣಗಳನ್ನು ದಾಖಲಿಸಿದ್ದಾರೆ. 

ಶಿಕಾರಿಪುರದಲ್ಲಿ ಸಿಕ್ತು 3,96,379  ಕ್ಯಾಶ್ 

ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ವಿವಿದೆಡೆ ಅಳವಡಿಸಲಾಗಿರುವ ಚೆಕ್​ ಪೋಸ್ಟ್​ ಗಳ ಪೈಕಿ ಇವತ್ತು ಶಿಕಾರಿಪುರದಲ್ಲಿ ತಪಾಸಣೆ ವೇಳೆ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ.  

ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಶ್ರೀ ತಿಮ್ಮಯ್ಯ, ಹೆಚ್.ವಿ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ತಂಡವು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ  ರೂ  3,96,379 /- ನಗದು ಹಣವನ್ನು ಅಮಾನತ್ತು ಪಡಿಸಿಕೊಂಡಿದೆ. 

ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಒಂದೇ ದಿನ ಏಳು ಸಾವಿರ ಲೀಟರ್ ಲಿಕ್ಕರ್ ಜಪ್ತಿ

ಇನ್ನೂ ಚುನಾವಣಾ ಅಧಿಕಾರಿಗಳು ಇವತ್ತು ದಾಖಲೆ ಇಲ್ಲದ ಹಣಕ್ಕಿಂತಲೂ ಹೆಚ್ಚು ಲಿಕ್ಕರ್ ಜಪ್ತಿ ಮಾಡಿದ್ದಾರೆ. ಶಿವಮೊಗ್ಗ ಸಿಟಿಯಲ್ಲಿಯೇ ಬರೋಬ್ಬರಿ 7364 ಲೀಟರ್​ ಲಿಕ್ಕರ್ ಜಪ್ತಿ ಮಾಡಲಾಗಿದೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 90 ಲಕ್ಷ ರೂಪಾಯಿ ಆಗಲಿದೆ. ಇನ್ನೂ ಒಟ್ಟಾರೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ ಚುನಾವಣಾ ಅಧಿಕಾರಿಗಳು 13,63,55,850 ನಷ್ಟು ಕ್ಯಾಶ್ ಸೀಜ್​ ಮಾಡಿದೆ. 

ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಶಿವಮೊಗ್ಗ ಸಿಟಿಯಲ್ಲಿ ಪೊಲೀಸರ ಪಥಸಂಚಲನ

ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ – 2023ರ ಹಿನ್ನೆಲೆಯಲ್ಲಿ,  ಇವತ್ತು ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ  ಗಾಂಧಿ ಬಜಾರ್‌, ಬಿಬಿ ರಸ್ತೆ, ಸೀಗೆಹಟ್ಟಿ ವೃತ್ತ, ಓಟಿ ರಸ್ತೆ  ಮತ್ತು ಅಮೀರ್‌ ಅಹಮ್ಮದ್‌ ವೃತ್ತದಲ್ಲಿ ಪೊಲೀಸರು ರೂಟ್ ಮಾರ್ಚ್​ ನಡೆಸಿದ್ಧಾರೆ.  ಕೇಂದ್ರ ಮೀಸಲು ಪಡೆ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಈ ಪಥಸಂಚಲನದಲ್ಲಿ  ಭಾಗವಹಿಸಿದ್ದರು.

 

Malenadutoday.com Social media

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor