ಸಾಯುವ ಮೊದಲು ಬೇಳೂರು ಗೋಪಾಲಕೃಷ್ಣರನ್ನ ನೋಡಬೇಕು ಎಂದ ಮತದಾರ! ಚುನಾವಣೆ ನಡುವೆ ಒಂದೊಳ್ಳೆ ಕೆಲಸ ಮಾಡಿದ ಅಭಿಮಾನಿ ಬಳಗ

KARNATAKA NEWS/ ONLINE / Malenadu today/ Apr 25, 2023 GOOGLE NEWS


ಸಾಗರ/ಶಿವಮೊಗ್ಗ/    ನಾನು ಸಾಯವುದಕ್ಕೂ ಮೊದಲೇ ಬೇಳೂರು ಗೋಪಾಲಕೃಷ್ಣರನ್ನ ನೋಡಬೇಕು ಅವರಿಗೊಮ್ಮೆ ವೋಟು ಹಾಕಬೇಕು ಎಂದು ಅಲವತ್ತುಕೊಳ್ತಿದ್ದ ಅಭಿಮಾನಿಯನ್ನು ಬೇಳೂರು ಗೋಪಾಲಕೃಷ್ಣರ ಅಭಿಮಾನಿಗಳು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ನಡೆದಿದ್ದೇನು? 

ಸಾಗರ ತಾಲ್ಲೂಕಿನ ಬಾಣಿಗ ಗ್ರಾಮದ ನಿವಾಸಿ ಉಮಾಪತಿ ಎಂಬವರು ಬೇಳೂರು ಗೋಪಾಲಕೃಷ್ಣರ ಅಭಿಮಾನಿ. 

ಆದರೆ ಅನಾರೋಗ್ಯದಿಂದ ಬಳುತ್ತಿರುವ ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿತ್ತು. 

ಹಾಸಿಗೆ ಹಿಡಿದಿದ್ದ ಅವರು, ನಾನು ಬೇಳೂರು ಗೋಪಾಲಕೃಷ್ಣರನ್ನ ನೋಡಬೇಕು, ಮಾತನಾಡಿಸಬೇಕು ಎಂದು ಕೋರಿದ್ದಾರೆ. 

ನಾನು ಸಾಯುವುದಕ್ಕೂ ಮೊದಲು ಬೇಳೂರು ಗೋಪಾಲಕೃಷ್ಣರಿಗೆ ವೋಟು ಹಾಕಬೇಕು ಎಂದು ಮನೆಯವರಲ್ಲಿ ಹೇಳಿದ್ದಾರಂತೆ. 

ಈ ವಿಷಯ ತಿಳಿದು  ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗ ಉಮಾಪತಿಯವರನ್ನು ಮಾರುತಿಪುರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು, ಅವರ ಮನೆಗೆ ಕರೆದುಕೊಂಡು ಬಂದಿದ್ದಾರೆ. ಅವರ ಸಲಹೆಯಂತೆ, ಉಮಾಪತಿಯನ್ನು  ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.   

Malenadutoday.com Social media

 

Leave a Comment