Ripponpete/ ಕಾಲೇಜು ಕಟ್ಟಡದಲ್ಲಿ ಜೇನು ಹುಳಗಳ ದಾಳಿ/ 13 ವಿದ್ಯಾರ್ಥಿಗಳಿಗೆ ಗಾಯ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 24, 2023 GOOGLE NEWS


ರಿಪ್ಪನ್‌ಪೇಟೆ/ ಹೊಸನಗರ/ಶಿವಮೊಗ್ಗ/  ಇಲ್ಲಿನ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಇಂದು ಜೇನುನೊಣಗಳು ಎದ್ದು ದಾಳಿ ನಡೆಸಿವೆ. ಪರಿಣಾಮ 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 

13 ವಿದ್ಯಾರ್ಥಿಗಳಿಗೆ ಗಾಯ

ಇವತ್ತು ಬೆಳಗ್ಗೆ ಕಾಲೇಜು ಕಟ್ಟಡದಲ್ಲಿ ಕಟ್ಟಿದ್ದ ಜೇನುಗೂಡಿನಿಂದ ಒಮ್ಮೆ ಜೇನುನೊಣ ಎದ್ದು ದಾಳಿ ನಡೆಸಿವೆ. 

ಇದ್ದಕ್ಕಿದ್ದ ಹಾಗೆ ನಡೆದ ಘಟನೆಯಲ್ಲಿ ಜೇನುನೊಣ 13 ವಿದ್ಯಾರ್ಥಿಗಳಿಗೆ ಕಚ್ಚಿವೆ. 

ತಕ್ಷಣವೇ  ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ರವಾನಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. 

ಸದ್ಯ ವಿದ್ಯಾರ್ಥಿಗಳು ಆರಾಮಾಗಿದ್ದು, ಜೇನು ಕಚ್ಚಿದ ಜಾಗದಲ್ಲಿ ಊತ ಕಾಣಿಸಿದೆ.  

ಆಗಿದ್ದೇನು?

ಕಳೆದೊಂದು ತಿಂಗಳಿನಿಂದ ಕಾಲೇಜಿಗೆ ರಜೆ ನೀಡಲಾಗಿತ್ತು ಇಂದು ಎಲ್ಲಾ ತರಗತಿಗಳು ಏಕಕಾಲದಲ್ಲಿ ಆರಂಭವಾಗಿತ್ತು

.ತರಗತಿಗಳು ಪ್ರಾರಂಭವಾಗುತಿದ್ದಂತೆ ಏಕಾಏಕಿ ಜೇನು ಹುಳಗಳು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ.

ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಪದವಿ ಕಾಲೇಜಿನ ಎರಡನೆ ಮಹಡಿಯಲ್ಲಿ ಜೇನು ಹುಳಗಳು ಗೂಡು ಕಟ್ಟಿವೆ. 

ಆದರೆ ಇದನ್ನ ತೆಗೆಸುವ ಕೆಲಸಕ್ಕೆ ಯಾರು ಮುಂದಾಗಿರಲಿಲ್ಲ. ಇವತ್ತು ಜೇನು ಹುಳಗಳು ದಾಳಿಇಟ್ಟಿವೆ.  

Malenadutoday.com Social media

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor