ಹೊಸನಗರ ಮತ್ತು ಸಾಗರ ಮಂದಿಗೆ ಮೆಸ್ಕಾಂ ಸಾಗರದಿಂದ ಮಹತ್ವದ ಪ್ರಕಟಣೆ! ನಾಳೆ ಕರೆಂಟ್ ಕಟ್!

This Article Written by / Malenadu Today / ಮಾರ್ಚ್ 9, 2024

Shivamogga Mar 9, 2024   Sagar,Hosanagar , Mescom Sagar,  Current cut  ಸಾಗರ ಹಾಗೂ ಹೊಸನಗರದ ವಿವಿಧ ಭಾಗಗಳಲ್ಲಿ ನಾಳೆ ಅಂದರೆ ದಿನಾಂಕ 10 ರಂದು ವಿದ್ಯುತ್ ವತ್ಯಯ ವಾಗಲಿದೆ. ಮೆಸ್ಕಾಂನವರು ಕರೆಂಟ್ ತೆಗೆಯಲಿದ್ದಾರೆ. ಈ ಸಂಬಂಧ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ) ರವರ ಕಛೇರಿ ಕ.ವಿ.ಪ್ರ.ನಿ.ನಿ, ಸಾಗರದಿಂದ ಪ್ರಕಟಣೆಯನ್ನ ಹೊರಡಿಸಲಾಗಿದೆ. ಪ್ರಕಟಣೆ ಇಲ್ಲಿದೆ ಓದಬಹುದು. 

ಮೆಸ್ಕಾಂ ಸಾಗರ 

ವಿಷಯ: 110/33/11ಕೆ.ವಿ. ಸಾಗರ ವಿ.ವಿ ಕೇಂದ್ರದ ತ್ರೈಮಾಸಿಕ ನಿರ್ವಹಣೆ ಕುರಿತು,

ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ, 110/33/11 ಕೆ.ವಿ. ಸಾಗರ ವಿ.ವಿ ಕೇಂದ್ರದಲ್ಲಿ ದಿನಾಂಕ 10.03.2024 ರಂದು ಬೃಹತ್ ಕಾಮಗಾರಿ ವಿಭಾಗ, ಶಿವಮೊಗ್ಗ ಇವರು ರೇಲ್ವೆ ಟ್ರ್ಯಾಕ್ಷನ್ ಕಾಮಗಾರಿಗೆ ಸಂಬಂಧಿಸಿದಂತೆ ಹೊಸದಾಗಿ ನಿರ್ಮಿಸುತ್ತಿರುವ 110 ಕೆವಿ ಮಾರ್ಗವನ್ನು 110 ಕೆವಿ ಬಸ್ ಬಾರ್ ಗೆ ಜೋಡಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುತ್ತಾರೆ. ಈ ಕೆಲಸಕ್ಕೆ 110 ಕೆವಿ ಬಸ್ ಬಾರ್ ನ ಮಾರ್ಗ ಮುಕ್ತತೆ ಪಡೆಯಲಿರುತ್ತಾರೆ, ಆದುದರಿಂದ ಈ ಸಂದರ್ಭಲ್ಲಿ ಸಾಗರ ವಿ.ವಿ ಕೇಂದ್ರಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಇರುತ್ತದೆ. ಈ ಸಂದರ್ಭದಲ್ಲಿ ವಿ.ವಿ ಕೇಂದ್ರದ ತ್ರೈಮಾಸಿಕ ನಿರ್ವಹಣೆಯನ್ನು ಮುಖ್ಯ ಇಂಜಿನೀಯರ್, ಕವಿಪ್ರನಿನಿ ಹಾಸನ ಇವರಿಂದ ನಿಗದಿಪಡಿಸಿರುವಂತೆ ಮತ್ತು ಕ.ವಿ.ಪ್ರ.ನಿ.ನಿ ಎಸ್.ಐ.ಎಸ್ ತಂತ್ರಾಂಶದಲ್ಲಿ ತ್ರೈಮಾಸಿಕ ನಿರ್ವಹಣೆಯನ್ನು ದಾಖಲಿಸಲು ದಿ: 10.03.2024 ರಂದು ಭಾನುವಾರ ಬೆಳಿಗ್ಗೆ 10:00 ರಿಂದ ಸಂಜೆ 6:00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸದರಿ ವಿ.ವಿ ಕೇಂದ್ರಗಳಿಂದ ಹೊರಹೋಗುವ ಎಲ್ಲಾ 33 ಕೆವಿ & 11 ಕೆ.ವಿ ಫೀಡರ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಇರುತ್ತದೆ. ಈ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಹಕರಿಗೆ ತಿಳಿಸಬೇಕಾಗಿ ಮತ್ತು ಪತ್ರಿಕಾ ಪ್ರಕಟಣೆಯನ್ನು ನೀಡಬೇಕಾಗಿ ಈ ಮೂಲಕ ಕೋರಲಾಗಿದೆ.

Sagar

ಮುಂದಿನ ಸುದ್ದಿ ಒದಿ

Leave a Comment