Shivamogga Feb 18, 2024 | ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಪೇಟೆಯಲ್ಲಿ ಒಂದು ಘಟನೆ ನಡೆದಿದೆ. ಶಿವಮೊಗ್ಗ ಶಿರಾಳಕೊಪ್ಪದಲ್ಲಿ ವಸ್ತುವೊಂದು ಬ್ಲಾಸ್ಟ್ ಆಗಿ ಇಬ್ಬರಿಗೆ ಗಾಯಗವಾಗಿದೆ.
ಶಿರಾಳಕೊಪ್ಪದ ಬಸ್ಸ್ಟಾಂಡ್ ಬಳಿ ಈ ಘಟನೆ ಸಂಭವಿಸಿದೆ. ಗಂಡ ಹೆಂಡತಿ ಇಟ್ಟಿದ್ದ ಬ್ಯಾಗ್ನಲ್ಲಿದ್ದ ವಸ್ತುನಿಂದ ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಅವರನ್ನ ಆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬ್ಲಾಸ್ಟ್ ಆದ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಎಸ್.ಪಿ.ಮಿಥುನ್ ಕುಮಾರ್
ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಲೆನಾಡು ಟುಡೆ ತಂಡ ಎಸ್ಪಿ ಮಿಥುನ್ ಕುಮಾರ್ರವರನ್ನ ಸಂಪರ್ಕಿಸಿದೆ. ಅವರು ಹೇಳುವ ಪ್ರಕಾರ, ಇಂದು ಸಂತೆಗೆ ಉಮೇಶ್ ಮತ್ತು ಅವನ ಹೆಂಡತಿ ರೂಪರವರು ರಸ್ತೆ ಬದಿಯ ಅಂಗಡಿಯಾತ ಅಂತೋನಿ ಜೊತೆ ಕಂಬಳಿ ಖರೀದಿಸಿದ್ದಾರೆ. ಆ ಅವರೆಲ್ಲರೂ ಪರಸ್ಪರ ಪರಿಚಿತರು. ನಂತರ ಮಹಿಳೆ ರೂಪ ಮತ್ತು ಅವಳು ಪತಿ ಉಮೇಶ್ ಅಂಗಡಿಯವರಿಗೆ ಹೇಳಿ ಅರ್ಧ ಗಂಟೆ ಇಲ್ಲಿ ನಮ್ಮ ಬ್ಯಾಗ್ ಇಟ್ಟು ಸಂತೆಗೆ ಹೋಗಿ ವಾಪಸ್ ಬರುತ್ತೇನೆ ಎಂದಿದ್ದಾರೆ.
ಈ ಘಟನೆ ನಡೆದು ಸ್ವಲ್ಪ ಹೊತ್ತಿನ ನಂಟರ ಆ ಬ್ಯಾಗ್ ಸ್ಫೋಟ ಗೊಂಡಿದೆ. ಪ್ರಾಥಮಿಕ ವಿಚಾರಣೆ ವೇಳೆ ಬ್ಯಾಗ್ನಲ್ಲಿ ಅವರು ಇಟ್ಟಿದ್ದ ಸಿಡಿ ಮದ್ದು ಪತ್ತೆಯಾಗಿದೆ. ಸದ್ಯ ಈ ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ
ಇನ್ನೂ ಸ್ಫೋಟಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಟೌವ್ಗೂ ಸಂಬಂಧವಿಲ್ಲ. ಅಂಗಡಿಯಾತ ವ್ಯಾಪಾರಕ್ಕಾಗಿ ಸ್ಟೌವ್ ಇಟ್ಟುಕೊಂಡಿದ್ದ ಅಷ್ಟೆ ಅದಕ್ಕೂ ಘಟನೆಗೂ ಸಂಬಂಧವಿಲ್ಲ. ಕಾಡುಹಂದಿ ಶಿಕಾರಿಗೆ ಬಳಸುವ ಸಿಡಿಮದ್ದಿನಿಂದ ಬ್ಲಾಸ್ಟ್ ಆಗಿದೆ ಎಂದು ತಿಳಿಸಿದ್ದಾರೆ. ಸೂಕ್ಷ್ಮ ಪ್ರಕರಣಗಳಲ್ಲಿ ಸುಳ್ಳುಸುದ್ದಿ ಹರಡಿದರೆ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ
