ಮಹಿಳೆಯ ಕೊಲೆ ! ಶವ ಪತ್ತೆಯಾದ 24 ಗಂಟೆಯಲ್ಲಿ ಆರೋಪಿ ಅರೆಸ್ಟ್ !

ಹಂಚಿಕೊಳ್ಳಿ
WhatsApp Facebook X Telegram

Chikkamagaluru | Jan 30, 2024ಕಡೂರು: ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಕರೆಗೆ ಹಾಕಿದ್ದ ಆರೋಪಿಯನ್ನು ಶವ ಪತ್ತೆಯಾದ 24 ಗಂಟೆಯೊಳಗೆ ಯಗಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಡೂರು ಪೊಲೀಸ್ ಸ್ಟೇಷನ್ 

ತಾಲೂಕಿನ ಬ್ಯಾಗಡೇಹಳ್ಳಿ ಮೂಲದ ಮಂಜುಳಾ (40) ಕೊಲೆಯಾದ ಮಹಿಳೆ, ಈಕೆಯ ಜೊತೆ ಸಂಬಂಧವಿಟ್ಟುಕೊಂಡಿದ್ದ ಚಿಕ್ಕಬಾಸೂರಿನ ತಮ್ಮಯ್ಯ ಎಂಬಾತ ಆಕೆಯೊಡನೆ ಜಗಳವಾಡಿಕೊಂಡು ಉಸಿರುಗಟ್ಟಿಸಿ ಹತ್ಯೆ ಮಾಡಿ ನಂತರ ಆಕೆಯ ದೇಹವನ್ನು ಬಿಳುವಾಲದ ಕೆರೆಯಲ್ಲಿ ಮುಳುಗಿಸಿದ್ದ ಮಹಿಳೆ ಕಾಣೆಯಾದ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ಜ21 ರಂದು ದೂರು ದಾಖಲಾಗಿತ್ತು. 

ನಂತರ 27 ರಂದು ಬಿಳುವಾಲ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರು 28 ರಂದು ತಲೆಮರೆಸಿಕೊಂಡಿದ್ದ ಆರೋಪಿ ತಮ್ಮಯ್ಯ ಮತ್ತು ಕೃತ್ಯಕ್ಕೆ ಸಹಕಾರ ನೀಡಿದ ಮಂಜುನಾಥ ಎಂಬುವವರನ್ನು ಪತ್ತೆ ಮಾಡಿ ಸೋಮವಾರ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಬೀರೂರು ವೃತ್ತ ನಿರೀಕ್ಷಕ ಶ್ರೀಕಾಂತ್ ನೇತೃತ್ವದ ತಂಡದ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಯಗಟಿ ಪಿಎಸ್ಐ ರಂಗನಾಥ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor